
Viral News : ಸ್ಮಾರ್ಟ್ ಫೋನ್ಗಳಿಲ್ಲದೆ ನಮ್ಮ ಜೀವನವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಸಾಧ್ಯವೇ ಇಲ್ಲವಲ್ಲ? ಫೋನ್ ಕಾಲ್, ಮೆಸೇಜ್ಗಳಿಗಷ್ಟೇ ಸೀಮಿತವಾಗಿದ್ದ ಮೊಬೈಲ್ ಹೇಗೆ ನಮ್ಮನ್ನು ಇಡೀಯಾಗಿ ಆವರಿಸಿಕೊಂಡಿದೆ ಎನ್ನುವುದನ್ನು ಬರೆಯುತ್ತ ಹೋದರೆ ಅದೊಂದು ದೊಡ್ಡ ಸಂಶೋಧನಾ ಪ್ರಬಂಧವೇ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ನೋಡಿ. 1963ರಲ್ಲಿ ಮ್ಯಾನ್ಸ್ಫೀಲ್ಡ್ ನ್ಯೂಸ್ ಜರ್ನಲ್ನಲ್ಲಿ ಪ್ರಕಟವಾದ ಲೇಖನವಿದು. ಆಗಿನ ಕಾಲದಲ್ಲಿ ಸ್ಮಾರ್ಟ್ಫೋನ್ ಎಂದರೆ ಏನು ಗ್ರಹಿಕೆ ಇತ್ತು ಎನ್ನುವುದನ್ನು ಇದು ಒಳಗೊಂಡಿದೆ. ಮೊಬೈಲ್ಫೋನ್ ಅನ್ನು ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಬಹುದು ಎಂಬ ಭವಿಷ್ಯವನ್ನು ಆಗಲೇ ನುಡಿಯಲಾಗಿತ್ತು!
ಮುಂಬರುವ ದಿನಗಳಲ್ಲಿ ನೀವು ಚಲಿಸುತ್ತಲೇ ಫೋನ್ ಕರೆಗಳನ್ನು ಸ್ವೀಕರಿಸಬಹುದು, ಇನ್ನೊಬ್ಬರಿಗೆ ಫೋನ್ ಮಾಡಿ ಮಾತನಾಡಬಹುದು. ಎಲ್ಲಿಯೂ ನೀವು ಫೋನ್ ಅನ್ನು ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಬಹುದು ಎಂಬ ಸಾರಾಂಶ ಈ ಲೇಖನದ್ದು. ಈ ಲೇಖನವನ್ನು ಟ್ವಿಟರ್ ಖಾತೆದಾರರೊಬ್ಬರು ಜನವರಿ 23ರಂದು ಹಂಚಿಕೊಂಡಿದ್ದಾರೆ. ಈತನಕ ಸುಮಾರು 90,000 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ನಮ್ಮ ಹಪ್ಪಳವನ್ನು ‘ಏಷ್ಯನ್ ನಾಚೋಸ್’ ಎಂದು ಮಾರಾಟ ಮಾಡುತ್ತಿರುವ ಮಲೇಷಿಯನ್ ರೆಸ್ಟೋರೆಂಟ್
1960ರಲ್ಲಿ ನನ್ನ ತಂದೆ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ಮ್ಯೂಸಿಯಂಗೆ ಕರೆದೊಯ್ದಿದ್ದರು. ಅಲ್ಲಿ ನಾನು ನೋಡಿದ ಒಂದು ಅದ್ಭುತ ನನಗಿನ್ನೂ ನೆನಪಿದೆ. ಭವಿಷ್ಯದಲ್ಲಿ ನಾವು ವ್ಯಕ್ತಿಯನ್ನು ನೋಡುತ್ತಲೇ ಮಾತನಾಡುವುದು ಹೇಗೆ ಎನ್ನುವುದರ ಪ್ರಾತ್ಯಕ್ಷಿಕೆ ಅದಾಗಿತ್ತು. ಮುಂದಿನ 60 ವರ್ಷಗಳಲ್ಲಿ ಈ ತಾಂತ್ರಿಕ ಪ್ರಗತಿ ನಮ್ಮ ಮುಂದಿನ ಪೀಳಿಗೆಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬ ಕುತೂಹಲ ಮತ್ತು ಆತಂಕ ಜೊತೆಜೊತೆಗೇ ಇದೆ ಎಂದು ಅನೇಕರು ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:40 pm, Tue, 24 January 23