Cow: ಮಕ್ಕಳಿಗೂ ಸಾಕುಪ್ರಾಣಿಗಳಿಗೂ ಅವಿನಾಭಾವ ಸಂಬಂಧ. ನಗರಪ್ರದೇಶದ ಪ್ರಾಣಿಪ್ರಿಯ ಮಕ್ಕಳು ಬೆಕ್ಕು, ನಾಯಿಗಳೊಂದಿಗೆ ಬದುಕುತ್ತಾರೆ. ಹಳ್ಳಿಗಳಲ್ಲಿರುವ ಮಕ್ಕಳಂತೂ ಕೇಳುವುದೇ ಬೇಡ, ಬೆಕ್ಕು ನಾಯಿ ಕೋಳಿ ಮೇಕೆ ಹಸು (Animal Lover) ಹೀಗೆ ಪಟ್ಟಿ ಮುಗಿಯುವುದೇ ಇಲ್ಲ. ಅಕಸ್ಮಾತ್ ನಗರ ಮಹಾನಗರದ ಮಕ್ಕಳಿಗೆ ಆಕಳಕರುವನ್ನು ಬೆಕ್ಕು ಅಥವಾ ನಾಯಿಯಂತೆ ಮನೆಯಲ್ಲಿಟ್ಟುಕೊಂಡು ಸಾಕಬೇಕು ಎಂದೆನ್ನಿಸಿದರೆ? ಸದ್ಯಕ್ಕೆ ವಿದೇಶದಲ್ಲಿ ಹೆಣ್ಣುಮಗುವೊಂದು ಆಕಳಕರುವನ್ನು ಮನೆಯಲ್ಲಿಯೇ ಸಾಕಿಕೊಂಡಿರುವ ಈ ವಿಡಿಯೋ ನೋಡಿ. ಈ ಕರುವಿಗೆ ತಾನೇ ಅಮ್ಮನಾಗಿದ್ದಾಳೆ ಈಕೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ ನಾನಾ ನಮೂನೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಮೆಕ್ಸಿಕೋ; ಜೆಂಡರ್ ರಿವೀಲ್ ಪಾರ್ಟಿ, ಸ್ಟಂಟ್ ವಿಮಾನ ಪತನದಿಂದ ಪೈಲಟ್ ಸಾವು, ವಿಡಿಯೋ ವೈರಲ್
ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಪ್ರಾಣಿಪ್ರೇಮ ಕಲಿಸುವುದು ಒಳ್ಳೆಯದು. ತುಂಬಾ ಮುದ್ಧಾದ ವಿಡಿಯೋ, ಈ ಮಗು ಬೆಳೆಯುತ್ತಿರುವ ಪರಿಸರ ತುಂಬಾ ಚೆನ್ನಾಗಿದೆ, ಇದು ಧೈರ್ಯವಂತ ಮಗು ಎಂದಿದ್ದಾರೆ ಒಬ್ಬರು. ಬಹಳ ಮುಖ್ಯವಾದ ಕೆಲಸದಲ್ಲಿ ಈ ಹುಡುಗಿ ತೊಡಗಿಕೊಂಡಿದ್ದಾಳೆ. ಪ್ರಾಣಿಗಳಿರುವುದು ಕೊಂದು ತಿನ್ನುವುದಕ್ಕಲ್ಲ, ಅವುಗಳನ್ನು ಹೀಗೆ ಮುದ್ದಾಗಿ ಪೋಷಿಸಬೇಕು ಎಂದಿದ್ದಾರೆ ಇನ್ನೊಬ್ಬರು.
ಆ. 24ರಂದು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯ ಮತ್ತು ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಸರಿ, ಈ ಕರುವಿನ ಅಮ್ಮ ಎಲ್ಲಿ ಹೋಗಿದೆ? ಎಂದು ಕೇಳಿದ್ದಾರೆ ಒಬ್ಬರು. ಪ್ರಾಣಿಗಳು ನಮ್ಮ ಸ್ನೇಹಿತರು, ಇವರುಗಳನ್ನು ನಾವು ಕೊಂದು ತಿನ್ನುವುದಿಲ್ಲ, ಬದುಕಿನುದ್ದಕ್ಕೂ ಸಸ್ಯಾಹಾರಿಯಾಗಿರಬೇಕು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಕ್ಯಾನ್ಸರ್; ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ
ಇಂಥ ಮುದ್ದಾದ ಪ್ರಾಣಿಯನ್ನು ಬಲಿ ಕೊಡಲು ಮನಸ್ಸಾದರೂ ಹೇಗೆ ಬರುತ್ತದೆ ಜನರಿಗೆ? ಎಂದಿದ್ದಾರೆ ಒಬ್ಬರು. ಆ ಪ್ರಾಣಿಗೆ ವಯಸ್ಸಾಗುತ್ತಿದ್ದಂತೆ ಆ ಹುಡುಗಿಯೇ ಅದನ್ನು ತಿನ್ನುತ್ತಾಳೆ! ಎಂದಿದ್ದಾರೆ ಇನ್ನೊಬ್ಬರು. ಕೊವಿಡ್ ಎರಡನೇ ಅಲೆಯ ಪ್ರಭಾವವಿದು ಎಂದಿದ್ದಾರೆ ಮತ್ತೊಬ್ಬರು. ಆದರೂ ನಾವೇಕೆ ಇಂಥ ಮುದ್ದು ಪ್ರಾಣಿಗಳ ಮಾಂಸ ತಿನ್ನುತ್ತೇವೆ ಎಂದಿದ್ದಾರೆ ಮಗದೊಬ್ಬರು. ಲೈಕ್ಸ್ಗೋಸ್ಕರ ಪ್ರಾಣಿಗಳನ್ನು ಹೀಗೆ ಹರಾಜಿಗಿಡುತ್ತಾರೆ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ