Math Puzzle: ವಾರದ ಮಧ್ಯೆ ನಿಮಗೆ ಕೆಲಸ ಮಾಡಲು ಮಂಕು ಕವಿದಂತೆ ಆಗುತ್ತಿದೆಯೇ? ಹಾಗಿದ್ದರೆ ಅದಕ್ಕೊಂದು ಉಪಾಯ ಇಲ್ಲಿದೆ. ಮೋಜಿನ ಗಣಿತದ ಮೂಲಕ ಅದನ್ನು ಹೊಡೆದೋಡಿಸಬಹುದು. ಅಷ್ಟೇ ಅಲ್ಲ ಉತ್ಸಾಹದಿಂದ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಬಹುದು. Instagramನಲ್ಲಿ ಈ ಮೋಜಿನ ಗಣಿತವನ್ನು ಪೋಸ್ಟ್ ಮಾಡಲಾಗಿದೆ; IF 9=10, 8 = 18, 7=24, 6 = 28, 5 = 30, ಹಾಗಾದರೆ 3 = ?”. ಅನೇಕರು ಈ ಒಗಟನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಕೆಲವರು 24 ಎಂದಿದ್ದಾರೆ ಇನ್ನೂ ಕೆಲವರು 28 ಉಳಿದವರು 30 ಎಂದಿದ್ದಾರೆ. ಹಾಗಿದ್ದರೆ ನಿಮ್ಮ ಉತ್ತರವೇನು ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮದು.
ಇದನ್ನೂ ಓದಿ : Viral Video: ‘ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ’ ಜಿಂಕೆ ನಾಯಿಗೆ ಕರೆದಾಗ
ನಿತ್ಯವೂ ಅದದೇ ಕೆಲಸ ಮಾಡುವಾಗ ಬೇಸರಾಗುತ್ತದೆ. ಉತ್ಸಾಹವಿಲ್ಲದೇ ಮನಸ್ಸು ಮುದುಡುತ್ತದೆ. ಆಗ ಭ್ರಮಾತ್ಮಕ ಚಿತ್ರಗಳಲ್ಲಿನ ಸವಾಲುಗಳು ಮತ್ತು ಇಂಥ ಮೋಜಿನ ಗಣಿತ ಸಮಸ್ಯೆಗಳು ಮೆದುಳನ್ನು ಚುರುಕುಗೊಳಿಸುವಲ್ಲಿ ಸಹಕಾರಿಯಾಗಿವೆ.
ಒಬ್ಬೊಬ್ಬರು ಒಂದೊಂದು ರೀತಿಯಾಗಿ ಈ ಒಗಟಿಗೆ ಉತ್ತರಿಸಿದ್ದಾರೆ. ನೀವು ಈ ಬಗ್ಗೆ ಈಗಾಗಲೇ ಯೋಚಿಸುತ್ತಿರಬಹುದು. ಇಲ್ಲಿ ಸಮಯದ ಕಟ್ಟಳೆ ಏನೂ ಇಲ್ಲ. ನಿಧಾನವಾಗಿ ಯೋಚಿಸಿ ಸರಿಯಾದ ಉತ್ತರವನ್ನು ಕಂಡುಕೊಳ್ಳಿ. ನೆಟ್ಟಿಗರು ಕೊಟ್ಟಿರುವ ಉತ್ತರಗಳನ್ನೊಮ್ಮೆ ನೋಡಿದರೆ ಖಂಡಿತ ನಿಮಗೆ ದಿಕ್ಕು ತಪ್ಪಬಹುದು. ಹಾಗಾಗಿ ನಿಮ್ಮಷ್ಟಕ್ಕೆ ನೀವೇ ಈ ಗಣಿತದ ಒಗಟನ್ನು ಬಿಡಿಸುವುದು ಹೇಗೆ ಎಂದು ಯೋಚಿಸಿ ತೊಡಗಿಕೊಳ್ಳಿ.
ಇದನ್ನೂ ಓದಿ : Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್ಮಂದಿ
ಒಂದುವೇಳೆ ನಿಮಗೆ ಈ ಒಗಟನ್ನು ಬಿಡಿಸಲು ಕಷ್ಟವೆನ್ನಿಸಿದರೆ ನಿಮ್ಮ ಸ್ನೇಹಿತರಿಗೆ ಕಳುಹಿಸಿ ನೋಡಿ. ಅವರೂ ಪ್ರಯತ್ನಿಸಬಹುದು. ಇಲ್ಲವೇ ನಿಮ್ಮ ಸಹೋದ್ಯೋಗಳಿಗೆ, ಮನೆಯ ಸದಸ್ಯರಿಗೆ, ಬಂಧುಮಿತ್ರರಿಗೆ ಹೀಗೆ… ಒಟ್ಟಿನಲ್ಲಿ ನೀವು ಈ ಒಗಟಿಗೆ ಉತ್ತರ ಕಂಡುಕೊಂಡು ನಮಗೆ ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ