Viral Optical Illusion: ಹೂವಿನರಾಶಿಯಲ್ಲಿ ಅಡಗಿರುವ ಚಿಟ್ಟೆಗಳನ್ನು ಗುರುತಿಸಿ, ನಿಮಗಿರುವ ಸಮಯ 5 ಸೆಕೆಂಡುಗಳು

Brain Teaser: ಭ್ರಮಾತ್ಮಕ ಚಿತ್ರಗಳು ನಿಮ್ಮ ಮೆದುಳನ್ನು ಕಣ್ಣುಗಳನ್ನು ಚುರುಕುಗೊಳಿಸುತ್ತವೆ. ಎಂದಿನಂತೆ ಮತ್ತೊಂದು ಹೊಸ ಭ್ರಮಾತ್ಮಕ ಚಿತ್ರ ನಿಮಗಾಗಿ ಇಲ್ಲಿದೆ. ಇಲ್ಲಿರುವ ಹೂವಿನರಾಶಿಯಲ್ಲಿ ಚಿಟ್ಟೆಗಳು ಮಕರಂದವನ್ನು ಹೀರುತ್ತ ಕುಳಿತಿವೆ. ಒಟ್ಟು ಎಷ್ಟು ಚಿಟ್ಟೆಗಳು ಇವೆ, ಎಲ್ಲೆಲ್ಲಿ ಇವೆ ಎಂದು ಕಂಡುಹಿಡಿಯುವುದು ನಿಮ್ಮ ಕೆಲಸ. ನಿಮಗೆ ಕೊಟ್ಟಿರುವ ಸಮಯ 5 ಸೆಕೆಂಡುಗಳು.

Viral Optical Illusion: ಹೂವಿನರಾಶಿಯಲ್ಲಿ ಅಡಗಿರುವ ಚಿಟ್ಟೆಗಳನ್ನು ಗುರುತಿಸಿ, ನಿಮಗಿರುವ ಸಮಯ 5 ಸೆಕೆಂಡುಗಳು
ಹೂಗಳಲ್ಲಿ ಅಡಗಿರುವ ಚಿಟ್ಟೆಗಳನ್ನು ಪತ್ತೆಮಾಡಿ.

Updated on: Oct 07, 2023 | 10:49 AM

Optical Illusion: ನಿಮ್ಮ ವೀಕ್ಷಣಾ ಕೌಶಲವನ್ನು ನಿಮಗೇ ತಿಳಿಸಿಕೊಡುತ್ತವೆ ಇಂಥ ಭ್ರಮಾತ್ಮಕ ಚಿತ್ರಗಳು. ನಿಮ್ಮ ತಾರ್ಕಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮೆದುಳಿಗೆ ಕಸರತ್ತು ನೀಡಿ ಬುದ್ಧಿಶಕ್ತಿಯ್ನನು ಹೆಚ್ಚಿಸುತ್ತವೆ. ಇದೀಗ ಕೊಟ್ಟಿರುವ ಈ ಚಿತ್ರದಲ್ಲಿ ಅನೇಕ ಬಗೆಗಳ ಹೂಗಳ ರಾಶಿ (Flowers) ಇಲ್ಲಿದೆ. ಮಕರಂದವನ್ನು ಹೀರಲು ಕೆಲ ಚಿಟ್ಟೆಗಳು ಇಲ್ಲಿ ಬಂದಿವೆ. ಬಣ್ಣಬಣ್ಣದ ಹೂಗಳೊಳಗೆ ಬಣ್ಣಬಣ್ಣದ ಚಿಟ್ಟೆಗಳು ಅಡಗಿವೆ. ಅವುಗಳನ್ನು ನಿಮ್ಮ ಚುರುಕಾದ ಕಣ್ಣುಗಳಿಂದ ಕಂಡುಹಿಡಿಯಿರಿ. ನೆಟ್ಟಿಗರು ಅನೇಕರು ಚಿಟ್ಟೆಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಎಲ್ಲರೂ ಸಫಲರಾಗಿಲ್ಲ. ನೀವು?

ಇದನ್ನೂ ಓದಿ: Viral: ನಾಥೂರಾಮ ಗೋಡ್ಸೆ; ‘ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ’

ಹೂವಿನ ಮಕರಂದ ಹೀರಿದ ಚಿಟ್ಟೆಗಳ ಬಣ್ಣವೂ ಹೂವಿನಂತೆಯೇ ಇರುತ್ತದೆ. ಹೀಗಿದ್ದಾಗ ಹೂವಿನರಾಶಿಯಲ್ಲಿ ಎಲ್ಲಿ ಅಡಗಿದೆ ಎಂದು ಕಂಡುಹಿಡಿಯುವುದು ಸುಲಭವಲ್ಲ. ಆದರೂ ನಿಮ್ಮ ಕಣ್ಣುಗಳು ಬಹಳ ಚುರುಕಾಗಿರುವುದರಿಂದ ಕಣ್ಣು ಮತ್ತು ಮೆದುಳಿನ ಮಧ್ಯೆ ಉಂಟಾಗುವ ಭ್ರಮೆಯನ್ನು ನೀವು ನಿಯಂತ್ರಿಸಿಕೊಂಡು ವಾಸ್ತವವನ್ನು ಕಂಡುಕೊಳ್ಳುತ್ತೀರಿ ಎನ್ನುವ ಭರವಸೆ ನಮ್ಮದು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೂವಿನರಾಶಿಯೊಳಗೆ ಚಿಟ್ಟೆಗಳನ್ನು ಹುಡುಕಿ

ಹೂಗಳಲ್ಲಿ ಅಡಗಿರುವ ಚಿಟ್ಟೆಗಳನ್ನು ಪತ್ತೆಮಾಡಿ.

ಚಿಟ್ಟೆಗಳು ಕಂಡವೆ? ಕಂಡಿಲ್ಲವಾದರೆ ಸುಳಿವು ಬೇಕೆ? ಇಲ್ಲಿ ಒಟ್ಟು ನಾಲ್ಕು ಚಿಟ್ಟೆಗಳು ಅಡಗಿವೆ. ನಾಲ್ಕೂ ಚಿಟ್ಟೆಗಳು ಗುಲಾಬಿ ಬಣ್ಣದಿಂದಲೇ ಕೂಡಿವೆ. ಹೆಚ್ಚು ಸಮಯ ತೆಗೆದುಕೊಂಡರೂ ನಿಮಗೆ ಚಿಟ್ಟೆಗಳು ಸಿಗಲಿಲ್ಲವಾದರೆ ಈ ಕೆಳಗಿನ ಚಿತ್ರ ನೋಡಿ.

ಚಿಟ್ಟೆಗಳು ಇಲ್ಲಿವೆ!

ಇಲ್ಲಿದೆ ಉತ್ತರ!

ಚಿಟ್ಟೆಗಳು ಕಂಡವೆ? ಭ್ರಮಾತ್ಮಕ ಚಿತ್ರದ ತಂತ್ರಗಾರಿಕೆಯೇ ಇದು. ಮೊದಲಿಗೆ ಬೇಕಾಗಿರುವುದು ಕಾಣುವುದೇ ಇಲ್ಲ. ಪ್ರಯತ್ನದ ನಂತರ ಕಾಣಬಹುದು. ಕೆಲವೊಮ್ಮೆ ಕಾಣದೇ ಇರಬಹುದು. ಒಟ್ಟಿನಲ್ಲಿ ನಿಮ್ಮ ಮೆದುಳು ಮತ್ತು ಕಣ್ಣುಗಳನ್ನು ಚುರುಕಾಗಿಟ್ಟುಕೊಳ್ಳಲು ಇಂಥ ಚಿತ್ರಗಳನ್ನು ಆಗಾಗ ನೋಡಿ, ಸವಾಲನ್ನು ಪರಿಹರಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ