AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಅಯ್ಯೋ So Cute​​ ದೀದಿ”: ಬೆಂಗಳೂರಿನ ದಂಪತಿಗಳ ವಿವಾಹ ವಾರ್ಷಿಕೋತ್ಸವಕ್ಕೆ ಅದ್ಭುತ ಗಿಫ್ಟ್​​​ ಕೊಟ್ಟ ಮನೆಗೆಲಸದಾಕೆ

ಬೆಂಗಳೂರಿನ ದಂಪತಿಗಳ ವಿವಾಹ ವಾರ್ಷಿಕೋತ್ಸವಕ್ಕೆ ಮನೆಗೆಲಸದ ಮಹಿಳೆ ನೀಡಿದ ಸಣ್ಣ ಉಡುಗೊರೆ ಎಲ್ಲರ ಗಮನ ಸೆಳೆದಿದೆ. ಮಾಲೀಕರು ಆಕೆಗೆ ತೋರಿದ ಪ್ರೀತಿ, ಗೌರವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇವಲ ಕೆಲಸಕ್ಕೆ ಮಾತ್ರ ಸೀಮಿತವಲ್ಲದ, ಹೃದಯಸ್ಪರ್ಶಿ ಬಾಂಧವ್ಯವನ್ನು ಈ ವಿಡಿಯೋ ಅನಾವರಣಗೊಳಿಸಿದೆ. ಸಂಬಂಧಗಳಿಗೆ ಬೆಲೆ ಇಲ್ಲದ ಬೆಂಗಳೂರಿನಲ್ಲಿ ಇಂತಹ ಪ್ರೀತಿಪೂರ್ವಕ ಘಟನೆ ಹೆಚ್ಚು ಮೆಚ್ಚುಗೆ ಗಳಿಸಿದೆ.

ಅಯ್ಯೋ So Cute​​ ದೀದಿ: ಬೆಂಗಳೂರಿನ ದಂಪತಿಗಳ ವಿವಾಹ ವಾರ್ಷಿಕೋತ್ಸವಕ್ಕೆ ಅದ್ಭುತ ಗಿಫ್ಟ್​​​ ಕೊಟ್ಟ ಮನೆಗೆಲಸದಾಕೆ
ವಿಡಿಯೋ ಇಲ್ಲಿದೆ ನೋಡಿ Image Credit source: instagram
ಅಕ್ಷಯ್​ ಪಲ್ಲಮಜಲು​​
|

Updated on: Feb 09, 2026 | 12:25 PM

Share

ಬೆಂಗಳೂರು, ಫೆ.9: ಬೆಂಗಳೂರಿನಲ್ಲಿ (Bengaluru) ಒತ್ತಡ ಕೆಲಸ, ಮಕ್ಕಳ ಬಗ್ಗೆ ಕಾಳಜಿ, ಜತೆಗೆ ಸಂಸಾರದ ಜಂಜಾಟ, ಇದರ ನಡುವೆ ಮನೆ ಕೆಲಸ ಮಾಡಲು ಪುರುಸೊತ್ತೇ ಇರಲ್ಲ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಹೆಚ್ಚಿನ ಮನೆಯವರು ಮಕ್ಕಳನ್ನು ಹಾಗೂ ಮನೆಗೆಲಸಕ್ಕೆ ಕೆಲಸದವರನ್ನು ಇಟ್ಟುಕೊಂಡಿರುತ್ತಾರೆ. ಮನೆ ಕೆಲಸದವರು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎಂದು ಅನೇಕರು ಅಂದುಕೊಂಡಿರುತ್ತಾರೆ. ಅವರನ್ನು ಯಾವತ್ತೂ ನಮ್ಮ ಮನೆಯವರಂತೆ ನೋಡುವುದಿಲ್ಲ. ಬೆಂಗಳೂರಿನಲ್ಲಿ ಇಂತಹ ವಿಚಾರದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಅದರೂ ಇದರ ನಡುವೆ ಒಂದು ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್​ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ, ಮಾಲೀಕರು ಮತ್ತು ಮನೆಗೆಲಸದವರ ನಡುವಿನ ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನೇಹಾ ಹರ್ಚಂದಾನಿ ದಂಪತಿ ಅವರ ವಿವಾಹ ವಾರ್ಷಿಕೋತ್ಸವದಂದು, ಅವರ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಗುಲಾಬಿ ಮತ್ತು ಚಾಕೊಲೇಟ್​​ನ್ನು ಉಡುಗೊರೆಯಾಗಿ ನೀಡುವ ಮೂಲಕ ದಂಪತಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮನೆಗೆಲಸದ ಮಹಿಳೆಯ ಸರಳತೆ ಮತ್ತು ಆತ್ಮೀಯತೆಗಾಗಿ ಪ್ರಶಂಸೆ ವ್ಯಕ್ತವಾಗಿದೆ. ಇಂದು ನಮ್ಮ ವಿವಾಹ ವಾರ್ಷಿಕೋತ್ಸವ, ದೀದಿ (ಮನೆಗೆಲಸದ ಮಹಿಳೆ) ನಮಗೆ ಅಚ್ಚರಿಕೆಯ ಉಡುಗರೆಯನ್ನು ನೀಡಿದ್ದರು. ತುಂಬಾ ಕ್ಯೂಟ್​ ಆಗಿತ್ತು ಅವರ ಶುಭಾಶಯಗಳು ಎಂದು ನೇಹಾ ಹರ್ಚಂದಾನಿ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರೇ ಮೈಸೂರಿಗೆ ಹೋದ್ರೆ ‘ಮಧುವನ’ ಕ್ಕೆ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?

ಇಲ್ಲಿದೆ ನೋಡಿ ಇನ್ಸ್ಟಾಗ್ರಾಮ್​ ವಿಡಿಯೋ:

ಈ ವಿಡಿಯೋದಲ್ಲಿ ಮನೆ ಕೆಲಸದ ಮಹಿಳೆ, ಗುಲಾಬಿ ಹಾಗೂ ಚಾಕೊಲೇಟ್ ನ್ನು ಹಿಡಿದುಕೊಂಡು ನಿಂತಿರುವುದನ್ನು ಕಾಣಬಹುದು. ತಕ್ಷಣ ನೇಹಾ ಹರ್ಚಂದಾನಿ, ದೀದಿ ಇದೇನು ಎಂದು ಕೇಳುತ್ತಾರೆ. ಅದಕ್ಕೆ ಮನೆಗೆಲಸದ ಮಹಿಳೆ, ಇವತ್ತು ನಿಮ್ಮ ವಿವಾಹ ವಾರ್ಷಿಕೋತ್ಸವ ಅಲ್ವಾ? ಅದಕ್ಕೆ ನನ್ನ ಕಡೆಯಿಂದ ಚಿಕ್ಕ ಉಡುಗರೆ ಎಂದು ನಾಚಿಕೊಂಡು ಹೇಳುತ್ತಾರೆ. ಇದಕ್ಕೆ ನೇಹಾ ಹರ್ಚಂದಾನಿ ಅವರು, ಅಯ್ಯೋ ತುಂಬಾ ಕ್ಯೂಟ್​​ ಎಂದು ಹೇಳಿ, ನೇಹಾ ಹರ್ಚಂದಾನಿ ಅವರ ಪತಿ ಕೂಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ಉಡುಗರೆಯನ್ನು ತರಲು, ಮನೆ ಕೆಲಸದ ಮಹಿಳೆ ತನ್ನ ಗಂಡನಿಗೆ ಬ್ಲಿಂಕಿಟ್‌ನಲ್ಲಿ ಆರ್ಡರ್​​ ಮಾಡಲು ಹೇಳಿದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ನೋಡಿ ಇನ್‌ಸ್ಟಾಗ್ರಾಮ್ ನೆಟ್ಟಿಗರು, ಕಮೆಂಟ್​ ಮಾಡಿದ್ದಾರೆ. “ಶುದ್ಧ ಪ್ರೀತಿ” ಮತ್ತು “ಅತ್ಯಂತ ಸಿಹಿಯಾದ ವಿಷಯ” ಎಂದು ಅನೇಕರು ಹೇಳಿದ್ದಾರೆ. ಇದು ಸಂಪೂರ್ಣವಾಗಿ ಅಮೂಲ್ಯವಾದುದು ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ