Viral Brain Teaser: ಅರ್ಧ ತೆಂಗಿನಕಾಯಿ, ಒಂದು ಸೇಬು ಮತ್ತು ಒಂದು ಬಾಳೆಯ ಮೌಲ್ಯ ಎಷ್ಟು?

|

Updated on: Nov 17, 2023 | 2:02 PM

Weekend : ವಾರಾಂತ್ಯದ ಹೊತ್ತಿನಲ್ಲಿ ನಿಮಗೆ ಈ ಶುಕ್ರವಾರ ಯಾವಾಗ ಮುಗಿಯುತ್ತದೆಯೋ ಎಂದೆನ್ನಿಸುತ್ತಿರಬಹುದು. ಹಾಗಾಗಿ ನಿಮ್ಮ ಕೆಲಸವನ್ನು ಫೋಕಸ್ ಮಾಡಲು ಕಷ್ಟವಾಗುತ್ತಿರಬಹುದು. ಅದಕ್ಕಾಗಿಯೇ ನಿಮಗಾಗಿ ಒಂದು ಪಝಲ್ ಇಲ್ಲಿ ಕಾಯುತ್ತಿದೆ. ನೀವು ಈ ಪಝಲ್​ ಅನ್ನು ಪ್ರೈಮರಿ ಸ್ಕೂಲಿನ ಗಣಿತ ಪುಸ್ತಕದಲ್ಲಿ ನೋಡಿರುತ್ತೀರಿ, ಹಾಗೆಯೇ ಬಿಡಿಸಿರುತ್ತೀರಿ ಕೂಡ. ಈಗ ಇಲ್ಲಿ ಬಿಡಿಸಬಹುದೆ?

Viral Brain Teaser: ಅರ್ಧ ತೆಂಗಿನಕಾಯಿ, ಒಂದು ಸೇಬು ಮತ್ತು ಒಂದು ಬಾಳೆಯ ಮೌಲ್ಯ ಎಷ್ಟು?
ಉತ್ತರ ಕಂಡುಹಿಡಿಯಿರಿ
Follow us on

Puzzle: ಕೆಲಸದ ಮಧ್ಯೆ ಉಂಟಾಗುವ ಬೇಸರವನ್ನು ಹೊಡೆದೋಡಿಸಲು ಇಂಥ ಮ್ಯಾಥ್​ ಪಝಲ್​ ನಿಜಕ್ಕೂ ಸಹಾಯಕಾರಿ. ಅದರಲ್ಲೂ ವಾರಾಂತ್ಯಕ್ಕಾಗಿ ಮನಸ್ಸು ಹಾತೊರೆಯುತ್ತಿರುವಾಗ, ಕೆಲಸದಲ್ಲಿ ಮನಸ್ಸು ತೊಡಗಿಕೊಳ್ಳದೇ ಇದ್ದಾಗ ಮತ್ತೂ ಸಹಾಯಕಾರಿ. ಇದೀಗ ವೈರಲ್ ಆಗಿರುವ ಈ ಪಝಲ್​ ಗಮನಿಸಿ. Instagramನ @topviraloffical ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ; ಮೂರು ಸೇಬುಗಳ (Apple) ಮೌಲ್ಯವು 30, ಒಂದು ಸೇಬು ಮತ್ತು ಎರಡು ಬಾಳೆಹಣ್ಣುಗಳ ಮೌಲ್ಯವು 18, ಒಂದು ಬಾಳೆಹಣ್ಣಿನಲ್ಲಿ ಒಂದು ತೆಂಗಿನಕಾಯಿಯನ್ನು ಕಳೆದರೆ ಮೌಲ್ಯವು 2. ಹಾಗಿದ್ದರೆ ಅರ್ಧ ತೆಂಗಿನಕಾಯಿ, ಒಂದು ಸೇಬು ಮತ್ತು ಒಂದು ಬಾಳೆಯ ಮೌಲ್ಯ ಎಷ್ಟು?

ಇದನ್ನೂ ಓದಿ : Viral Video: ಮಾತ್ರೆ, ಟಿಷ್ಯೂ,ನೀರು, ಚಾಕೋಲೇಟ್​, ಹೇರ್​ಬ್ಯಾಂಡ್​! ಏನೇನಿಲ್ಲ ಈ ಕ್ಯಾಬ್​ನಲ್ಲಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪಝಲ್​ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ. ಕೆಲವರು 14 ಎಂದಿದ್ದಾರೆ ಇನ್ನೂ ಕೆಲವರು 16 ಎಂದಿದ್ದಾರೆ. ಮತ್ತೊಂದಿಷ್ಟು ಜನ 15 ಎಂದಿದ್ದಾರೆ. ಹಾಗಿದ್ದರೆ ನೀವು ಈ ಪಝಲ್​ ಬಿಡಿಸಬಹುದೆ? ನಿಮ್ಮ ಉತ್ತರವನ್ನು ತಿಳಿದುಕೊಳ್ಳುವ ಕುತೂಹಲ ನಮ್ಮದು.

ಇಲ್ಲಿದೆ ಹಣ್ಣಿನ ಮೋಜಿನ ಗಣಿತ

ಪ್ರೈಮರಿ ಶಾಲೆಯಲ್ಲಿ ಇದನ್ನು ನಾನೂ ಬಿಡಿಸಿದ್ದೇನೆ, ಇದೀಗ ನನ್ನ ಮಕ್ಕಳೂ ಬಿಡಿಸುತ್ತಿವೆ. ಇದೇನು ಅಷ್ಟು ದೊಡ್ಡ ಸಮಸ್ಯೆಯಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ನನಗೆ ಇಷ್ಟು ಯೋಚಿಸುವಷ್ಟು ಸಮಯವೇ ಇಲ್ಲ, ನೀವೇ ಉತ್ತರ ಹೇಳಿಬಿಡಿ ಎಂದಿದ್ದಾರೆ ಒಬ್ಬರು. ಬಹುಶಃ 16 ಇರಬೇಕು ಎಂದಿದ್ದಾರೆ ಇನ್ನೊಬ್ಬರು. 14 ಅನ್ನಿಸುತ್ತದೆ ಎಂದು ಹೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಏರ್​ಪೋರ್ಟಿನಲ್ಲಿ ಅಪ್ಪನನ್ನು ನೋಡುತ್ತಿದ್ದಂತೆ ಮಗ… 

ಭ್ರಮಾತ್ಮಕ ಚಿತ್ರಗಳು, ಬ್ರೇನ್ ಟೀಸರ್​​ಗಳು ಮೆದುಳನ್ನು ಚುರುಕುಗಳಿಸುತ್ತವೆ. ಹಾಗಾಗಿ ಕೆಲಸದ ಮಧ್ಯೆ ಆಗಾಗ ಇಂಥ ಸವಾಲುಗಳಿಗೆ ಎದುರಾಗುವುದು ಇಳ್ಳೆಯದೇ. ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ