Viral Brain Teaser: ಮೆದುಳಿಗೆ ಗುದ್ದು; ಶಾಲಾದಿನಗಳ ಇಂಥ ಲೆಕ್ಕಗಳು ನೆನಪಿವೆಯೇ? ಹಾಗಿದ್ದರೆ ಪ್ರಯತ್ನಿಸಿ

|

Updated on: Nov 16, 2023 | 10:46 AM

Puzzle: ಶಾಲಾ ದಿನಗಳಲ್ಲಿ ಕೆಲವರಿಗೆ ನಿದ್ರೆ, ಭಯ, ಆತಂಕ ಉಂಟಾಗುತ್ತಿತ್ತು. ಆದರೆ, ಇನ್ನೂ ಕೆಲವರಿಗೆ ನೀರು ಕುಡಿದಷ್ಟು ಸರಳ. ಆಗ ಕಷ್ಟವೆನ್ನಿಸಿದ್ದ ಗಣಿತ ಈಗ ಸರಳ ಎನ್ನಿಸಬಹುದೆ? ಒಮ್ಮೆ ಪ್ರಯತ್ನಿಸಿ ನೋಡಿ. ಇನ್ನು ಗಣಿತದಲ್ಲಿ ಆಸಕ್ತಿ ಇದ್ದವರಿಗೆ ಈಗಾಗಲೇ ಉತ್ತರ ಹೊಳೆದಿರುತ್ತದೆ. ಇದನ್ನು ನಿಮ್ಮ ಸ್ನೇಹಿತರಿಗೆ, ಬಂಧು ಮಿತ್ರರಿಗೆ, ಮಕ್ಕಳಿಗೆ ತೋರಿಸಿ, ಉತ್ತರ ಕಂಡುಕೊಳ್ಳಲು ಆಸಕ್ತಿ ಮೂಡಿಸಿ.

Viral Brain Teaser: ಮೆದುಳಿಗೆ ಗುದ್ದು; ಶಾಲಾದಿನಗಳ ಇಂಥ ಲೆಕ್ಕಗಳು ನೆನಪಿವೆಯೇ? ಹಾಗಿದ್ದರೆ ಪ್ರಯತ್ನಿಸಿ
ಸಮಸ್ಯೆ ಬಿಡಿಸಿರಿ
Follow us on

Math Puzzle: ವಾರದ ಮಧ್ಯಕ್ಕೆ ಬರುತ್ತಿದ್ದಂತೆ ನಿಮ್ಮ ಮನಸ್ಸು ವಾರಾಂತ್ಯದೆಡೆ (Weekend) ಹಾತೊರೆಯುತ್ತಿರುತ್ತದೆ. ಹೀಗಿರುವಾಗ ನಿಮ್ಮ ನಿತ್ಯದ ಕೆಲಸದೆಡೆ ಗಮನ ಕೊಡಲು ಕಷ್ಟವೆನ್ನಿಸುತ್ತಿರುತ್ತದೆ. ಮೆದುಳಿಗೆ ಸ್ವಲ್ಪ ಗುದ್ದು ಕೊಟ್ಟರೆ ಹೇಗೆ? ಇಲ್ಲೊಂದು ಬ್ರೇನ್ ಟೀಸರ್ ನಿಮಗಾಗಿ ಕಾಯುತ್ತಿದೆ. ನಿಮ್ಮನ್ನು ಮತ್ತೆ ಶಾಲಾದಿನಗಳಿಗೆ ಇದು ಕೊಂಡೊಯುತ್ತದೆ. ಈ ಬ್ರೇನ್ ಟೀಸರ್​ ಅನ್ನು @math_brainteasers ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. “AAA + AAB + ABB + BBB= 1974” ಹೀಗಿದೆ. ಹಾಗಾದರೆ A ಮತ್ತು B ಗಳ ಸರಿಯಾದ ಮೌಲ್ಯ ಎಷ್ಟು ಎನ್ನುವುದನ್ನು ನೀವು ಕಂಡುಹಿಡಿಯಬೇಕು.

ಇದನ್ನೂ ಓದಿ : Viral: ಟಿಂಡರ್​; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆಲಸದ ನಡುವಿನ ಏಕತಾನತೆಯನ್ನು ಮುರಿಯಲು ಇಂಥ ಬ್ರೇನ್​ ಟೀಸರ್ ಮತ್ತು ಭ್ರಮಾತ್ಮಕ ಚಿತ್ರಗಳು ಸಹಾಯ ಮಾಡುತ್ತವೆ. ನಿಮ್ಮ ಮೆದುಳಿಗೆ ಕೆಲಸ ಕೊಟ್ಟು ಚುರುಕನ್ನು ಹೆಚ್ಚಿಸುತ್ತವೆ. ಇದೀಗ ವೈರಲ್ ಆಗಿರುವ ಈ ಬ್ರೇನ್ ಟೀಸರ್​ನ ಚಿತ್ರ​ ಇಲ್ಲಿದೆ.

ಕೆಲ ನೆಟ್ಟಿಗರು ಉತ್ತರಿಸಲು ಪ್ರಯತ್ನಿಸಿದ್ದಾರೆ. ನೀವು ಬಹುಶಃ ಬಹಳ ಸುಲಭವಾಗಿ ಇದಕ್ಕೆ ಉತ್ತರ ಕಂಡುಕೊಳ್ಳುತ್ತೀರಿ ಎನ್ನಿಸುತ್ತದೆ. ಏಕೆಂದರೆ ಗಣಿತ ಇಷ್ಟವಾಗುವವರಿಗೆ ಇಂಥವೆಲ್ಲ ನೀರು ಕುಡಿದಷ್ಟು ಸುಲಭ. ಇನ್ನು ಶಾಲಾದಿನಗಳಲ್ಲಿ ಗಣಿತ ಕಷ್ಟ ಎನ್ನಿಸಿದವರಿಗೆ ಇದನ್ನು ನೋಡಿ ಆಸಕ್ತಿ ಉಂಟಾಗಬಹುದು. ಏನಂತೀರಿ?

ಇದನ್ನೂ ಓದಿ : Viral: ಅಮೇಝಾನ್ ಕ್ಯಾಶ್​ಬ್ಯಾಕ್​ ಆಫರ್​; ಮಾರಾಟಗಾರರ ಒಳಸುಳಿಗಳ ಬಗ್ಗೆ ನೆಟ್​ಮಂದಿ ಚರ್ಚೆ

ಆಗಾಗ ಮೆದುಳಿಗೆ ಇಂಥ ಸವಾಲುಗಳನ್ನು ಕೊಡುತ್ತಿರಬೇಕು. ಆಗ ಅದು ಮತ್ತಷ್ಟು ಚಟುವಟಿಕೆಯಿಂದ ಕೂಡಿರುತ್ತದೆ. ದಿನವಿಡೀ ಉತ್ಸಾಹ ನಿಮ್ಮದಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ್ದೂ ಇದೆ ಬೇಡವಾದ್ದೂ ಇದೆ. ಆದರೆ ಆಯ್ಕೆ ನಿಮ್ಮದು. ನಿಮ್ಮ ಮೆದುಳಿನ ಆರೋಗ್ಯ ನಿಮ್ಮ ಕೈಯಲ್ಲೇ ಇದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ