Cancer: ಈ ಹಿಂದೆ ಸ್ನೇಹಿತೆಗೆ ಕ್ಯಾನ್ಸರ್ ಎಂದಾಗ ಸ್ನೇಹಿತರ ಗುಂಪೊಂದು ತಲೆ ಬೋಳಿಸಿಕೊಂಡಿತ್ತು. ಸ್ನೇಹಿತನ ಅಮ್ಮನಿಗೆ ಕ್ಯಾನ್ಸರ್ ಎಂದಾಗ ಸಲೂನಿನ ಆತನ ಸಹೋದ್ಯೋಗಿಗಳೆಲ್ಲ ತಲೆ ಬೋಳಿಸಿಕೊಂಡಿದ್ದರು. ಇದೀಗ ಕ್ಯಾನ್ಸರ್ನಿಂದ ಬಳಲುತ್ತಿರುವ ತನ್ನ ಹೆಂಡತಿಗೆ ಬೆಂಬಲಿಸಲು ಗಂಡನೂ ತಲೆ ಬೋಳಿಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಕ್ಯಾನ್ಸರ್ ರೋಗಿಗಳಿಗೆ (Cancer Patients) ಬೆಂಬಲ ವ್ಯಕ್ತಪಡಿಸಿರುವ ಇಂಥ ಅನೇಕರ ಕಥೆಗಳನ್ನು ನೆಟ್ಟಿಗರು ನೆನಪಿಸಿಕೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ ಯಾವುದನ್ನೂ ಒಬ್ಬರೇ ಹೋರಾಡಬೇಕಿಲ್ಲ, ಖಂಡಿತ ಹೀಗೆ ನಮ್ಮವರೆನ್ನಿಸಿಕೊಂಡವರು ಜೊತೆಯಾಗುತ್ತಾರೆ ಎಂದು ಈ ವಿಡಿಯೋದಲ್ಲಿರುವ ಮಹಿಳೆಗೆ ಧೈರ್ಯ ತುಂಬುತ್ತಿದ್ದಾರೆ. ಹಾಗೆಯೇ ಇವರಿಬ್ಬರ ಮುದ್ಧಾದ ಮಗುವನ್ನು ನೋಡಿ ಹಾರೈಸುತ್ತಿದ್ದಾರೆ.
ಇದನ್ನೂ ಓದಿ : Viral Video: ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯವನ್ನು ಕಲಿಸುತ್ತೀರಾ? ಬೆಲ್ಜಿಯಮ್ ವ್ಯಕ್ತಿ ಇವರನ್ನೆಲ್ಲಾ ಕೇಳಿದಾಗ
ಗುಡ್ನ್ಯೂಸ್ ಮೂವ್‌ಮೆಂಟ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಅನ್ನು ಪೋಸ್ಟ್ ಮಾಡಲಾಗಿದೆ. ಆರಂಭದಲ್ಲಿ ಹೆಂಡತಿಯ ತಲೆಯನ್ನು ಟ್ರಿಮ್ಮರ್ನಿಂದ ಗಂಡ ಬೋಳಿಸುತ್ತಾನೆ. ನಂತರ ಸ್ವತಃ ತನ್ನ ತಲೆಯನ್ನೂ ಬೋಳಿಸಿಕೊಳ್ಳುತ್ತಾನೆ. ಮೆಟರ್ನಿಟಿ ಫೋಟೋಶೂಟ್ನ ನಂತರ ಮುದ್ದಾದ ಮಗುವಿನ ಫೋಟೋ ತೆರೆದುಕೊಳ್ಳುತ್ತದೆ.
ನಿನ್ನೆಯಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 5 ಮಿಲಿಯನ್ ಜನರು ನೋಡಿದ್ದಾರೆ. 1.8 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ಧಾರೆ. ಒಬ್ಬರು, ‘ನಾನು ಹಲವಾರು ವರ್ಷಗಳ ಕಾಲ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಒಬ್ಬ ವ್ಯಕ್ತಿ ಒಂದು ದಿನ ತನ್ನ ಹೆಂಡತಿಯೊಂದಿಗೆ ಬಂದನು. ಅವನ ಕೂದಲುಗಳೆಲ್ಲ ಗಾಢನೀಲಿಯಾಗಿದ್ವು. ಎಲ್ಲರೂ ಅವನನ್ನೇ ನೋಡುತ್ತಿದ್ದರು. ಆಗ ಅವನು ತನ್ನ ಕೂದಲುಗಳ ಬಗ್ಗೆ ಸ್ವತಃ ವರ್ಣಿಸಲಾರಂಭಿಸಿದರು. ಯಾಕೆ ಹೀಗೆ ಮಾಡಿದೆ ಎಂದು ಕೇಳಿದೆ. ಕ್ಯಾನ್ಸರ್ನಿಂದ ಕೂದಲು ಕಳೆದುಕೊಂಡ ನನ್ನ ಹೆಂಡತಿಯನ್ನು ಬಿಟ್ಟು ಜನ ನನ್ನನ್ನು ನೋಡುತ್ತಾರೆ ಎಂದ’ ಎಂದಿದ್ದಾರೆ.
ಇದನ್ನೂ ಓದಿ : Viral Video: ವಿಶೇಷ ಮಕ್ಕಳ ಕ್ಷೌರದಂಗಡಿ; ಮನದುಂಬಿ ಪ್ರತಿಕ್ರಿಯಿಸುತ್ತಿರುವ ಬಿಲ್ಲಿಯ ಗ್ರಾಹಕರು
ವಿಡಿಯೋ ನೋಡಿ ನಾನು ಅಳಲಿಲ್ಲ, ಬದಲಾಗಿ ಧೈರ್ಯ ತಂದುಕೊಂಡೆ. ಜಗತ್ತಿನಲ್ಲಿ ಯಾರೂ ಒಂಟಿಯಲ್ಲ, ಜೊತೆಗಾರರು ಇದ್ದೇ ಇರುತ್ತಾರೆ, ಹಾದಿಯನ್ನು ಸುಗಮಗೊಳಿಸುತ್ತಾರೆ ಎನ್ನುವ ಭರವಸೆ ಮೂಡಿತು ಎಂದು ಒಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ