Viral News: ಲಾವೋಸ್​ ಗುಹೆಯಲ್ಲಿ 1,30,000 ವರ್ಷ ಹಳೆಯ ಮಗುವಿನ ಹಲ್ಲು ಪತ್ತೆ!

| Updated By: ಸುಷ್ಮಾ ಚಕ್ರೆ

Updated on: May 20, 2022 | 5:34 PM

ಆಧುನಿಕ ಮನುಷ್ಯರ ಪುರಾತನ ಸಂಬಂಧಿಗಳು ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೀಗ 1,60,000ರಿಂದ 1,30,000 ವರ್ಷಗಳಷ್ಟು ಹಳೆಯ ಹಲ್ಲು ಈ ಪ್ರದೇಶದಲ್ಲಿ ಸಿಕ್ಕಿರುವುದು ಅವರು ಇಲ್ಲೇ ವಾಸಿಸುತ್ತಿದ್ದರು ಎಂಬುದಕ್ಕೆ ಸಿಕ್ಕ ಮೊದಲ ಪುರಾವೆಯಾಗಿದೆ.

Viral News: ಲಾವೋಸ್​ ಗುಹೆಯಲ್ಲಿ 1,30,000 ವರ್ಷ ಹಳೆಯ ಮಗುವಿನ ಹಲ್ಲು ಪತ್ತೆ!
1,30,000 ವರ್ಷದ ಹಿಂದಿನ ಹಲ್ಲು ಪತ್ತೆ
Image Credit source: times now
Follow us on

ಲಾವೋಸ್‌ನ (Laos) ಗುಹೆಯಲ್ಲಿ ಸುಮಾರು 1,30,000 ವರ್ಷಗಳಷ್ಟು ಹಳೆಯದಾದ ಮಗುವಿನ ಹಲ್ಲನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಹಲ್ಲುಗಳು ಹೆಣ್ಣು ಮಗುವಿನ ಹಲ್ಲಾಗಿರಬಹುದು ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಡೆನಿಸೋವಾನ್ಸ್ ಅಥವಾ ಡೆನಿಸೋವಾ ಹೋಮಿನಿನ್‌ಗಳೆಂದು (Denisova hominins) ಕರೆಯಲ್ಪಡುವ ಮನುಷ್ಯರ ಅಳಿವಿನಂಚಿನಲ್ಲಿರುವ ಜಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಆಧುನಿಕ ಮನುಷ್ಯರ ಪುರಾತನ ಸೋದರಸಂಬಂಧಿಗಳು ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೀಗ 1,60,000ರಿಂದ 1,30,000 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಹಲ್ಲು ಈ ಪ್ರದೇಶದಲ್ಲಿ ಸಿಕ್ಕಿರುವುದು ಅವರು ಇಲ್ಲೇ ವಾಸಿಸುತ್ತಿದ್ದರು ಎಂಬುದಕ್ಕೆ ಸಿಕ್ಕ ಮೊದಲ ಭೌತಿಕ ಪುರಾವೆಯಾಗಿದೆ.

ಇದನ್ನೂ ಓದಿ
Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!
Viral Video: ಕೇದಾರನಾಥಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದು, ತಿಲಕವಿಟ್ಟ ಯಾತ್ರಿಕ; ಕೇಸ್ ದಾಖಲು
Shocking News: ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಶುಲ್ಕ ವಿಧಿಸಿದ ವೈದ್ಯರು; ಬಿಲ್ ನೋಡಿ ಮಹಿಳೆ ಶಾಕ್
Viral News: ಹೊಟ್ಟೆನೋವಿನಿಂದ ನರಳುತ್ತಿದ್ದ ಮಹಿಳೆಗೆ ವಿಮಾನದಲ್ಲೇ ಹೆರಿಗೆ ಮಾಡಿಸಿದ ಸಿಬ್ಬಂದಿ

ಇತಿಹಾಸಪೂರ್ವ ಮಾನವ ಸೋದರಸಂಬಂಧಿಗಳು ಸುಮಾರು 5,00,000 ವರ್ಷಗಳ ಹಿಂದೆ ಪಳೆಯುಳಿಕೆ ದಾಖಲೆಗಳಲ್ಲಿ ಕಾಣಿಸಿಕೊಂಡಿದ್ದರು. ಅವರು 30,000 ವರ್ಷಗಳ ಹಿಂದೆ ವಾಸಿಸಿದ್ದರು ಎಂದು ನಂಬಲಾಗಿದೆ. ಸೈಬೀರಿಯಾದ ಡೆನಿಸೋವನ್ ಗುಹೆಯಲ್ಲಿ ಸುಮಾರು 40,000 ವರ್ಷಗಳಷ್ಟು ಹಿಂದಿನ ಮತ್ತೊಂದು ಹಲ್ಲು ಮತ್ತು ಬೆರಳಿನ ಮೂಳೆ ಪತ್ತೆಯಾದಾಗ 2010ರವರೆಗೆ ಈ ಪ್ರಭೇದವು ವಿಜ್ಞಾನಕ್ಕೆ ತಿಳಿದಿರಲಿಲ್ಲ.

ಇದನ್ನೂ ಓದಿ: Viral News: 5.93 ಕೋಟಿ ರೂ. ಮೌಲ್ಯದ ವಿದ್ಯುತ್ ಕದ್ದ ಅಪ್ಪ-ಮಗ!; ಮಹಾರಾಷ್ಟ್ರದಲ್ಲೊಂದು ವಿಚಿತ್ರ ಘಟನೆ

9 ವರ್ಷಗಳ ನಂತರ ಸಂಶೋಧಕರಿಗೆ ಟಿಬೆಟ್ ಪ್ರಸ್ಥಭೂಮಿಯಲ್ಲಿ ದವಡೆಯ ಮೂಳೆ ಪತ್ತೆಯಾಯಿತು. ಲಾವೋಸ್‌ನಲ್ಲಿ ಮಗುವಿನ ಹಲ್ಲಿನ ಆವಿಷ್ಕಾರವು ಉತ್ತರ ಏಷ್ಯಾದಿಂದ ಆಗ್ನೇಯಕ್ಕೆ ಡೆನಿಸೋವನ್‌ಗಳ ಭೌಗೋಳಿಕ ವಿತರಣೆಯನ್ನು ವಿಸ್ತರಿಸುತ್ತದೆ. ಡೆನಿಸೋವನ್‌ಗಳ ಅನುವಂಶಿಕ ಕುರುಹುಗಳು ಮಾನವ ಡಿಎನ್‌ಎಯಲ್ಲಿ ಕಂಡುಬರುತ್ತವೆ. ಎಎಫ್‌ಪಿ ವರದಿಯ ಪ್ರಕಾರ, ಡೆನಿಸೋವನ್‌ಗಳು ಮತ್ತು ನಿಯಾಂಡರ್ತಲ್‌ಗಳು ಸುಮಾರು 3,50,000 ವರ್ಷಗಳ ಹಿಂದೆ ಬೇರೆ ಬೇರೆಯಾಗಿವೆ ಎಂದು ಹೇಳಲಾಗಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Fri, 20 May 22