ಲಿಫ್ಟ್‌ನಲ್ಲಿ ಸ್ವಲ್ಪ ಹೊತ್ತು ಸಿಲುಕಿಕೊಂಡರೆ ಗಾಬರಿಗೆನೇ ಉಸಿರುಗಟ್ಟಲು ಪ್ರಾರಂಭವಾಗುತ್ತದೆ. ಆದರೆ 76 ವರ್ಷದ ವೃದ್ಧೆಯೊಬ್ಬರು ಆರು ಗಂಟೆಯಲ್ಲ, ಬದಲಾಗಿ ಆರು ದಿನಗಳ ವರೆಗೆ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಬದುಕಿಬಂದಿದ್ದಾರೆ. ಇಳಿ ವಯಸ್ಸಿನಲ್ಲೂ ವೃದ್ಧೆಯ ಧೈರ್ಯ ಸಾಹಸವನ್ನು ಇತ್ತೀಚೆಗಷ್ಟೇ ಗಿನ್ನೆಸ್ ವಿಶ್ವ ದಾಖಲೆಯ ವೆಬ್ಸೈಟ್ನಲ್ಲಿ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ.
ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಈ ಘಟನೆಯು ಡಿಸೆಂಬರ್ 27, 1987 ರಂದು ನಡೆದಿದೆ. ಇಡೀ ವಿಶ್ವವೇ ಹೊಸ ವರ್ಷದ ಸಂಭ್ರಮದಲ್ಲಿ ಮುಳುಗಿರುವಾಗ, ಸೈಪ್ರಸ್‌ನ ಕಿವ್ಲಿ ಪಾಪಜಾನ್ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಪ್ರಾರಂಭದಲ್ಲಿ ಎಷ್ಟೇ ಕಿರುಚಿದರೂ ಕೂಡ ಪ್ರಯೋಜನವಾಗಲಿಲ್ಲ. ಮಾರುಕಟ್ಟೆಯಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದ್ದರಿಂದ ವೃದ್ಧೆ ತನ್ನ ಶಾಪಿಂಗ್ ಬ್ಯಾಗ್‌ನಲ್ಲಿದ್ದ ಹಣ್ಣು, ತರಕಾರಿಗಳು ಮತ್ತು ಬ್ರೆಡ್ ತಿನ್ನುವ ಮೂಲಕ ನಾಲ್ಕು ದಿನಗಳ ಕಾಲ ಲಿಫ್ಟ್‌ನಲ್ಲಿ ಜೀವನ ನಡೆಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ಮಹಿಳೆಯ ಮನೆಯವರಿಗೂ ಈ ವಿಚಾರ ಗೊತ್ತಿರಲಿಲ್ಲ.
ಇದನ್ನೂ ಓದಿ: ವಿಮಾನ ಪ್ರಯಾಣದ ವೇಳೆ ಶೌಚಾಲಯದಲ್ಲಿ ಸಿಲುಕಿದ ಪ್ರಯಾಣಿಕ; ಡೋರ್ ಓಪನ್ ಆಗದೆ ಪರದಾಟ, ಮುಂದೇನಾಯ್ತು?
ವರದಿಯ ಪ್ರಕಾರ, ವೃದ್ಧೆಯ ಫ್ಲಾಟ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿತ್ತು, ಆದರೆ ಹಿಂತಿರುಗುವಾಗ, ಲಿಫ್ಟ್ ಎರಡನೇ ಮಹಡಿಯಲ್ಲಿ ಸಿಲುಕಿಕೊಂಡಿತು. ಲಿಫ್ಟ್‌ನಲ್ಲಿ ಸಿಲುಕಿದ್ದರಿಂದ ಶೌಚಾಲಯಕ್ಕೆ ಹೋಗಲು ಸಾಧ್ಯವಾಗದ ಕಾರಣ ಸಾಧ್ಯವಾದಷ್ಟು ಕಡಿಮೆ ತಿನ್ನಲು ಪ್ರಯತ್ನಿಸುತ್ತಿದ್ದಾರೆ. ಆದರೆ ಚಳಿಯಿಂದಾಗಿ ಎರಡು ದಿನ ಪ್ರಜ್ಞೆ ತಪ್ಪಿ ನಾಲ್ಕನೇ ದಿನ ಪ್ರಜ್ಞೆ ಬಂದಿತ್ತು. ಹಣ್ಣು ಮತ್ತು ತರಕಾರಿಗಳು ಮಾತ್ರ ತನ್ನನ್ನು ಬದುಕಿಸಬಲ್ಲವು ಎಂದು ವೃದ್ಧೆಗೆ ತಿಳಿದಿತ್ತು.
ಅಂತಿಮವಾಗಿ ಜನವರಿ 2, 1988 ರಂದು ವೃದ್ಧೆಯನ್ನು ಲಿಫ್ಟ್‌ನಿಂದ ಹೊರತೆಗೆಯಲಾಯಿತು. ಕೆಲವು ಸಮಯದಿಂದ ದೂರ ಪ್ರಯಾಣ ಮಾಡಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರಿಂದ ಕುಟುಂಬದಿಂದ ಯಾರೂ ಕೂಡ ಅವರನ್ನು ಹುಡುಕಲು ಪ್ರಯತ್ನಿಸಿರಲ್ಲಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ