ಸಂಕ್ರಾಂತಿಗೆ ಅತ್ತೆ ಮನೆಯ ಭೂರಿ ಭೋಜನ ಸತ್ಕಾರ ಹೊಸ ಅಳಿಯನಿಗೆ ಉಸಿರುಗಟ್ಟಿಸಿತು!

ಅನಕಾಪಲ್ಲಿ ಸಗಟು ಅಕ್ಕಿ ವ್ಯಾಪಾರಿ ಗೂಂಡಾ ಸಾಯಿ ಗೋಪಾಲ್ ರಾವ್ ಅವರ ಪುತ್ರಿ ರಿಷಿತಾ ಕಳೆದ ಡಿಸೆಂಬರ್‌ನಲ್ಲಿ ವಿಶಾಖಪಟ್ಟಣ ಎಸ್‌ಎಲ್‌ವಿ ಜ್ಯುವೆಲ್ಲರಿ ಮುಖ್ಯಸ್ಥ ದೇವೇಂದ್ರನಾಥ್ ಅವರನ್ನು ವಿವಾಹವಾಗಿದ್ದರು. ಮೊದಲ ಹಬ್ಬದ ನಿಮಿತ್ತ ಸಂಕ್ರಾಂತಿಗೆ ಹೊಸ ಅಳಿಯನಿಗೆ ರಾಜ ಮರ್ಯಾದೆ ಸಹಜವಾದರೂ ತಮ್ಮದೇ ಶೈಲಿಯಲ್ಲಿ ಬಗೆಬಗೆಯ ಅಡುಗೆಗಳನ್ನು ತಯಾರಿಸಿ ಬಡಿಸಿದರು.

ಸಂಕ್ರಾಂತಿಗೆ ಅತ್ತೆ ಮನೆಯ ಭೂರಿ ಭೋಜನ ಸತ್ಕಾರ ಹೊಸ ಅಳಿಯನಿಗೆ ಉಸಿರುಗಟ್ಟಿಸಿತು!
ಸಂಕ್ರಾಂತಿಗೆ ಅತ್ತೆ ಮನೆಯ ಸತ್ಕಾರ, ಭೂರಿ ಭೋಜನ ಹೊಸ ಅಳಿಯನಿಗೆ ಉಸಿರುಗಟ್ಟಿಸಿತು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 16, 2024 | 2:30 PM

ಸಂಕ್ರಾಂತಿ ಎಂದರೆ ಕರಾವಳಿ ಜಿಲ್ಲೆಗಳಲ್ಲಿ ಕಾಣಬರುವ ಸಂಭ್ರವೇ ಬೇರೆ ರೇಂಜಿಗೆ ಇರುತ್ತದೆ. ಹಳ್ಳಿಗಳಲ್ಲಿ ಹೊಸದಾಗಿ ಬೆಳೆದ ಧಾನ್ಯಗಳು, ಕೋಳಿ ಕಾಳಗದ ಮಧ್ಯೆ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಸಂಕ್ರಾಂತಿಗೆ ಮತ್ತೂ ಒಂದು ವಿಶೇಷ ಅಲ್ಲಿ ಮನೆ ಮಾಡಿರುತ್ತದೆ. ಹೊಸ ಅಳಿಯನಿಗೆ ಸಕಲ ಸೇವೆಗಳು ನಡೆಯುವ ಆ ಸಂಭ್ರಮ ನೋಡಲು ಬಲು ಚೆನ್ನಾಗಿರುತ್ತದೆ. ಹೊಸದಾಗಿ ಬಂದ ಅಳಿಯನನ್ನು ಚುಡಾಯಿಸಿ.. ಆತಿಥ್ಯ ನೀಡಿ ಗೌರವಿಸುವ ರೇಂಜ್ ಬೇರೆಯದ್ದೇ ಇದೆ. ಹಾಗಾಗಿ ಸಂಕ್ರಾಂತಿಯಂದು ತಮ್ಮ ಮನೆಗೆ ಬಂದ ಹೊಸ ಅಳಿಯನಿಗೆ ಈ ಬಾರಿ ಅತ್ತೆ ಮನೆ ಕಡೆಯವರು ಕೊಸರಿ ಕೊಸರಿ ಸಿಹಿ ಉಣಬಡಿಸಿದ್ದಾರೆ.

ಅನಕಾಪಲ್ಲಿ ಸಗಟು ಅಕ್ಕಿ ವ್ಯಾಪಾರಿ ಗೂಂಡಾ ಸಾಯಿ ಗೋಪಾಲ್ ರಾವ್ ಅವರ ಪುತ್ರಿ ರಿಷಿತಾ ಕಳೆದ ಡಿಸೆಂಬರ್‌ನಲ್ಲಿ ವಿಶಾಖಪಟ್ಟಣ ಎಸ್‌ಎಲ್‌ವಿ ಜ್ಯುವೆಲ್ಲರಿ ಮುಖ್ಯಸ್ಥ ದೇವೇಂದ್ರನಾಥ್ ಅವರನ್ನು ವಿವಾಹವಾಗಿದ್ದರು. ಮೊದಲ ಹಬ್ಬದ ನಿಮಿತ್ತ ನವವಿವಾಹಿತರನ್ನು ಅತ್ತೆ ಮನೆಯವರು ಆಹ್ವಾನಿಸಿದ್ದರು. ಹೊಸ ಅಳಿಯನಿಗೆ ರಾಜ ಮರ್ಯಾದೆ ಸಹಜವಾದರೂ ತಮ್ಮದೇ ಶೈಲಿಯಲ್ಲಿ ಬಗೆಬಗೆಯ ಅಡುಗೆಗಳನ್ನು ತಯಾರಿಸಿ ಬಡಿಸಿದರು. ಕಾರಿನ ಬಳಿಗೆ ಹೋದ ಭಾವಮೈದುನ ಸ್ವತಃ ಕಾರಿನ ಬಾಗಿಲು ತೆರೆದು ಭಾವನನ್ನು ಸ್ವಾಗತಿಸಿದರು.

ಹಾಗೂ ಹೊಸ ಜೀವನಕ್ಕೆ ಕಾಲಿಟ್ಟ ಪತ್ನಿ ಮತ್ತೊಮ್ಮೆ ಹಾರ ಹಾಕಿ ಸ್ವಾಗತಿಸಿದರು. ಇಲ್ಲಿಯವರೆಗೆ ಎಲ್ಲವೂ ಅದ್ಭುತವಾಗಿಯೇ ನಡೆದಿದೆ. ಇನ್ನು ಅಳಿಯಯ್ಯ ಮನೆಯೊಳಕ್ಕೆ ಪ್ರವೇಶಿಸಿದಾಗ ಡೈನಿಂಗ್ ಟೇಬಲ್ ಮೇಲೆ ವಿರಾಟ ಸ್ವರೂಪದ ಅಡುಗೆಗಳು ದರುಶನ ನೀಡಿವೆ. ಅಲ್ಲಿ ಆಂಧ್ರಪ್ರದೇಶದ ಎಲ್ಲಾ ಪ್ರಸಿದ್ಧ ಭಕ್ಷ್ಯಗಳನ್ನು ಜೋಡಿಸಿಡಲಾಗಿತ್ತು.

ಚಕ್ಕುಲಿ ಕೋಡುಬಳೆಗಳಿಂದ ಹಿಡಿದು ಅನ್ನ, ಸೇಮ್ಯಾ, ಗುಲಾಬ್ ಜಾಮೂನ್​, ಜಹಾಂಗೀರ್​​, ಜಿಲೇಬಿ, ಮಡಚಿದ ಕಾಜು, ಮಲೈಕಾ, ರಸಗುಲ್ಲ, ಪೂತರೇಕುಲು, ಸೋನಪಪಿಡಿ, ಗರೇಲು, ಬೋಂಡಾ ವಡೆ, ನಾನಾ ಲಡ್ಡುಗಳು, ಬೇಸಿನ್​​ ಲಡ್ಡುಗಳು.. ಚಕ್ಕುಲಿ ಮುಚ್ಚೋರೆ ಅಬ್ಬೋ.. ಎಲ್ಲಾ ಆಂಧ್ರದಲ್ಲಿ ತಯಾರಿಸುವ ಅಷ್ಟೂ ಹಿಟ್ಟಿನ ಖಾದ್ಯಗಳನ್ನು ಜೋಡಿಸಲಾಗಿತ್ತು. ದ್ರಾಕ್ಷಿ ತಾಜಾ ಹಣ್ಣುಗಳಿಂದ ಡ್ರೈ ಫ್ರೂಟ್ಸ್​​ ಕೂಡ ಸೇರಿಕೊಳ್ಳುತ್ತದೆ..

ಇನ್ನು ತಂಪು ಪಾನೀಯದ ವಿಷಯಕ್ಕೆ ಬಂದರೆ ಫ್ರೂಟಿಯಿಂದ ಕೋಕಾ ಕೋಲಾದವರೆಗೆ ಹೊಸ ಅಳಿಯನಿಗೆ ಕೋರಿದಂತಹ ರೀತಿ-ನೀತಿಗಳ ರುಚಿಯನ್ನು ನೀಡಲಾಯಿತು. ಹೊಸ ಅಳಿಯನಿಗೆ ಅತ್ತೆ ಉಣಬಡಿಸಿದ ಖಾದ್ಯಗಳಿಂದ ಉಸಿರುಗಟ್ಟಿದಂತಾಗಿತ್ತು. ಹೊಸ ಅಳಿಯನಿಗೆ ಅತ್ತೆ ಮನೆಯವರು ಒಟ್ಟು 300 ಬಗೆಯ ಅಡುಗೆಗಳನ್ನು ನೀಡಿ ಸತ್ಕರಿಸಿದರು. ಅತ್ತೆ ಮನೆಯವರ ಆಪ್ಯಾಯತೆ ಮತ್ತು ವಾತ್ಸಲ್ಯಕ್ಕೆ ಅಳಿಯ ಶರಣು ಶರಣು ಅಂದಿದ್ದಾನೆ ಎನ್ನಿ.

ಮತ್ತಷ್ಟು  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್