ರಾಮಮಂದಿರ ಉದ್ಘಾಟನೆ ವೇಳೆ ರಾಮನಾಮ ಜಪಿಸುವಂತೆ ಕರೆ ನೀಡಿದ ಗಾಯಕಿ ಕೆಎಸ್ ಚಿತ್ರಾ; ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ
ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದಾಗ, ಪ್ರತಿಯೊಬ್ಬರೂ ‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’ ಎಂಬ ಮಂತ್ರವನ್ನು ಪಠಿಸಬೇಕು. ಹಾಗೆಯೇ ಸಂಜೆಯ ವೇಳೆ ಮನೆಯ ಎಲ್ಲಾ ಭಾಗಗಳಲ್ಲಿ ಐದು ಬತ್ತಿಯ ದೀಪಗಳನ್ನು ಹಚ್ಚಬೇಕು. ದೇವರ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಡಿಯೊದಲ್ಲಿ ಕರೆ ನೀಡಿದ್ದ ಕೆಎಸ್ ಚಿತ್ರಾ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ.
ಕೊಚ್ಚಿ ಜನವರಿ 16: ಖ್ಯಾತ ಹಿನ್ನೆಲೆ ಗಾಯಕಿ ಕೆ ಎಸ್ ಚಿತ್ರಾ (K S Chithra)ಅವರು ಅಯೋಧ್ಯೆಯಲ್ಲಿ (Ayodhya) ರಾಮಮಂದಿರದ (Ram mandir) ಉದ್ಘಾಟನಾ ಸಮಾರಂಭಕ್ಕೆ ಬೆಂಬಲಿಸುವಂತೆ ಕರೆ ನೀಡಿರುವ ವಿಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಭಾನುವಾರ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಸಮಾರಂಭದ ಸಮಯದಲ್ಲಿ “ಶ್ರೀ ರಾಮ, ಜಯ ರಾಮ, ಜಯ ಜಯ ರಾಮ” ಎಂದು ಜಪಿಸುವಂತೆ ಚಿತ್ರಾ ಜನರನ್ನು ಒತ್ತಾಯಿಸಿದರು. ಅದೇ ವೇಳೆ ಸಂಜೆ, ಅವರವರ ಮನೆಯಲ್ಲಿ ಎಲ್ಲರೂ ದೀಪಗಳನ್ನು ಬೆಳಗಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ವಿಡಿಯೊದಲ್ಲೇನಿದೆ?
“ಎಲ್ಲರಿಗೂ ನಮಸ್ಕಾರ. ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದಾಗ, ಪ್ರತಿಯೊಬ್ಬರೂ ‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’ ಎಂಬ ಮಂತ್ರವನ್ನು ಪಠಿಸಬೇಕು. ಹಾಗೆಯೇ ಸಂಜೆಯ ವೇಳೆ ಮನೆಯ ಎಲ್ಲಾ ಭಾಗಗಳಲ್ಲಿ ಐದು ಬತ್ತಿಯ ದೀಪಗಳನ್ನು ಹಚ್ಚಬೇಕು. ದೇವರ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಲೋಕಾ ಸಮಸ್ತಾ ಸುಖಿನೋ ಭವಂತು.” ಎಂದು ಚಿತ್ರಾ ಹೇಳಿದ್ದಾರೆ.
Singer Chitra in support of #PranPratishtha #RamMandir #AyodhyaSriRamTemple 🚩🚩🚩 pic.twitter.com/qqDBeHjXvW
— Souwmiya Dhinesh (@sowmyasarathy) January 13, 2024
ಸಮಾರಂಭವನ್ನು ಬೆಂಬಲಿಸಿದ್ದಕ್ಕಾಗಿ ಹಲವಾರು ಜನರು ಚಿತ್ರಾ ಅವರನ್ನು ಟೀಕಿಸಿದರೆ, ಇನ್ನೂ ಅನೇಕರು ಬೆಂಬಲಿಸಿದ್ದಾರೆ.
Appalled by cyber attacks on the esteemed singer @KSChithra ji who appealed to light a lamp on Ayodhya Prana Prathista day, by left-jihadist groups. Under the rule of @pinarayivijayan in Kerala, things are such that a Hindu can’t freely share her beliefs with fellow followers. It… pic.twitter.com/78yFIkMmNA
— K Surendran (@surendranbjp) January 15, 2024
ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಚಿತ್ರಾ ಅವರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ರೀತಿ ಬರೆದಿದ್ದಾರೆ. “ಅಯೋಧ್ಯೆ ಪ್ರಾಣ ಪ್ರತಿಷ್ಠಾ ದಿನದಂದು ದೀಪ ಬೆಳಗಿಸುವಂತೆ ಮನವಿ ಮಾಡಿದ ಗಾಯಕಿ ಚಿತ್ರಾ ಅವರ ಮೇಲಿ ಎಡ-ಜಿಹಾದಿ ಗುಂಪುಗಳು ಸೈಬರ್ ದಾಳಿ ನಡೆಸಿವ. ಕೇರಳದಲ್ಲಿ ಪಿಣರಾಯಿ ವಿಜಯನ್ ಆಳ್ವಿಕೆಯಲ್ಲಿ ಒಬ್ಬ ಹಿಂದೂ ತನ್ನ ನಂಬಿಕೆಗಳನ್ನು ಸಹ ಅನುಯಾಯಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಕೃತ್ಯದ ಬಗ್ಗೆ ಕಾಂಗ್ರೆಸ್ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ. ನಾವು ಕೇರಳ ಬಿಜೆಪಿ ಕೆಎಸ್ ಚಿತ್ರಾ ಅವರ ಅಚಲ ಬೆಂಬಲಕ್ಕೆ ನಿಂತಿದ್ದೇವೆ.
ಇದನ್ನೂ ಓದಿ: ಥೇಟ್ ರಾಮಮಂದಿರದ ಹಾಗೆ ಬೃಹತ್ ಕೇಕ್ ತಯಾರಿಸಿ ರಾಮಭಕ್ತಿ ಮೆರೆದ ರಾಣೆಬೆನ್ನೂರಿನ ಬೇಕರಿ ಮಾಲೀಕ!
ಗಾಯಕ ಜಿ ವೇಣುಗೋಪಾಲ್ ಕೂಡ ಚಿತ್ರಾ ಅವರನ್ನು ಬೆಂಬಲಿಸಿದರು. ವೇಣುಗೋಪಾಲ್ ಮತ್ತು ಚಿತ್ರಾ ಅವರದ್ದು ಸುಮಾರು 50 ವರ್ಷಗಳ ಗೆಳೆತನ. ಚಿತ್ರಾ ವಿರುದ್ದದ ಸೈಬರ್ ದಾಳಿ ಖಂಡಿಸಿದ ವೇಣುಗೋಪಾಲ, ಆಕೆ ಅದ್ಬುತ ಗಾಯಕಿ, ಆಕೆಯನ್ನು ಟೀಕಿಸುವ ಹಲವಾರು ಆನ್‌ಲೈನ್ ಕಾಮೆಂಟ್ ಗಳು ಬರುತ್ತಿರುವುದು ನೋವಿನ ಸಂಗತಿ. ನೀವು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರೆ, ನಾವು ಅದನ್ನು ಸುಮ್ಮನೆ ಬಿಡಬಹುದಲ್ಲವೇ? ದಯವಿಟ್ಟು ಪ್ರಯತ್ನಿಸಿ ಮತ್ತು ನೋಯಿಸಬೇಡಿ ಎಂದು ವೇಣುಗೋಪಾಲ್ ಹೇಳಿರುವುದಾಗಿ ಆನ್ ಮನೋರಮಾ ಉಲ್ಲೇಖಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ