ಥೇಟ್ ರಾಮಮಂದಿರದ ಹಾಗೆ ಬೃಹತ್ ಕೇಕ್ ತಯಾರಿಸಿ ರಾಮಭಕ್ತಿ ಮೆರೆದ ರಾಣೆಬೆನ್ನೂರಿನ ಬೇಕರಿ ಮಾಲೀಕ!
ಮಂದಿರ ವಿನ್ಯಾಸ, ಗರ್ಭಗುಡಿ, ಅದರೊಳಗೆ ರಾಮನ ಚಿತ್ರ, ಮಂದಿರ ಸ್ತಂಭಗಳು, ಗೋಪುರ, ಪ್ರಾಂಗಣ, ಅದರ ಮೇಲೆ ಹಸಿರು ಲಾನ್-ಎಲ್ಲವನ್ನೂ ಈ 35 ಕೇಜಿ ತೂಕದ ಕೇಕ್ ನಲ್ಲಿ ನೋಡಬಹುದು. ರಾಮನ ಮೇಲಿರುವ ಶ್ರದ್ಧೆ ಕೇಕ್ ತಯಾರಿಸಲು ಪ್ರೇರೇಪಣೆ ಎಂದು ಹೇಳುವ ಬೇಕರಿಯ ಮಾಲೀಕರು ಸುಮಾರು 40,000 ರೂ ವೆಚ್ಚದಲ್ಲಿ ಅದನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ.
ಹಾವೇರಿ: ಅಯೋಧ್ಯೆಯಲ್ಲಿ ರಾಮಮಂದಿರದ (Ram Mandir) ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗುತ್ತಿರುವಂತೆಯೇ ನಾಡಿನಾದ್ಯಂತ ಜನ ವಿವಿಧ ಬಗೆಯಲ್ಲಿ ರಾಮನೆಡೆಗಿನ ತಮ್ಮ ಭಕ್ತಿ ಹಾಗೂ ಶ್ರದ್ಧೆಯನ್ನು ಪ್ರದರ್ಶಿಸುತ್ತಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು (Ranebennur) ನಲ್ಲಿರುವ ಬೇಕರಿಯೊಂದರ ಮಾಲೀಕ (bakery owner) ಮತ್ತು ಅಲ್ಲಿ ಕೆಲಸ ಮಾಡುವ ಜನ ತಮ್ಮ ರಾಮಭಕ್ತಿಯನ್ನು ವಿಶಿಷ್ಟವಾದ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ಮಾದರಿಯಲ್ಲೇ ಬೇಕರಿಯವರು ಕೇಕ್ ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದಾರೆ. ರಾಮಮಂದಿರದ ತದ್ರೂಪು ಈ ಕೇಕ್ ಅಂತ ಹೇಳಿದರೆ ಅತಿಶಯೋಕ್ತಿ ಅನಿಸದು. ಮಂದಿರ ವಿನ್ಯಾಸ, ಗರ್ಭಗುಡಿ, ಅದರೊಳಗೆ ರಾಮನ ಚಿತ್ರ, ಮಂದಿರ ಸ್ತಂಭಗಳು, ಗೋಪುರ, ಪ್ರಾಂಗಣ, ಅದರ ಮೇಲೆ ಹಸಿರು ಲಾನ್-ಎಲ್ಲವನ್ನೂ ಈ 35 ಕೇಜಿ ತೂಕದ ಕೇಕ್ ನಲ್ಲಿ ನೋಡಬಹುದು. ರಾಮನ ಮೇಲಿರುವ ಶ್ರದ್ಧೆ ಕೇಕ್ ತಯಾರಿಸಲು ಪ್ರೇರೇಪಣೆ ಎಂದು ಹೇಳುವ ಬೇಕರಿಯ ಮಾಲೀಕರು ಸುಮಾರು 40,000 ರೂ ವೆಚ್ಚದಲ್ಲಿ ಅದನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ