Viral Video: ಮಾಲ್ಡೀವ್ಸ್ ಮಾತ್ರವಲ್ಲ ನಮ್ಮ ಭಾರತದಲ್ಲಿಯೂ ಅತ್ಯದ್ಭುತ ಸ್ಥಳಗಳಿವೆ
ಕೆಲ ದಿನಗಳ ಹಿಂದೆ ಮಾಲ್ಡೀವ್ಸ್ ವಿರುದ್ಧ ಬಾಯ್ಕಾಟ್ ಅಭಿಯಾನ ಆರಂಭವಾಗಿದ್ದು, ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ಗಳವರೆಗೂ ಈ ಒಂದು ಅಭಿಯಾನಕ್ಕೆ ಎಲ್ಲರೂ ಸಾಥ್ ನೀಡಿದ್ದಾರೆ. ಅಲ್ಲದೆ ಪ್ರವಾಸೋದ್ಯಮದಲ್ಲೂ ಭಾರತ ಆತ್ಮ ನಿರ್ಭರತೆ ಸಾಧಿಸಬೇಕು ಅನ್ನೋ ಕೂಗು ಕೇಳಿ ಬರುತ್ತಿದೆ. ಈ ನಡುವೆ ಮಹಿಳೆಯೊಬ್ಬರು ಮಾಡಿದಂತಹ ಪೋಸ್ಟ್ ಕೂಡಾ ವೈರಲ್ ಆಗಿದೆ. ಹೌದು ಅವರು ಮುಂಬೈನಿಂದ ನಾಸಿಕ್ಗೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೆಗೆದಂತಹ ವಿಡಿಯೊವನ್ನು ಹಂಚಿಕೊಂಡು ಭಾರತದಲ್ಲಿಯೂ ಅತ್ಯದ್ಭುತ ಸ್ಥಳಗಳಿವೆ, ನಾವು ಅವುಗಳನ್ನು ಇನ್ನಷ್ಟು ಅನ್ವೇಷಿಸಬೇಕಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಂತಹ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಟೋಗಳು ವೈರಲ್ ಆಗುತ್ತಿದ್ದಂತೆಯೇ ಮಾಲ್ಡೀವ್ಸ್ ಸಚಿವರು ಪ್ರಧಾನಿ ಮೋದಿ ಹಾಗೂ ಬಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇವರ ಸೊಕ್ಕಡಗಿಸಲು ಭಾರತದಲ್ಲಿ #ಬಾಯ್ಕಟ್ ಮಾಲ್ಡೀವ್ಸ್ #ಎಕ್ಸ್ಪ್ಲೋರ್ ಇಂಡಿಯನ್ ಐಸ್ಲ್ಯಾಂಡ್ ಎಂಬೆಲ್ಲಾ ಅಭಿಯಾನಗಳು ಶುರುವಾದವು. ಸಿನೆಮಾ, ಕ್ರೀಡಾರಂಗ ಮತ್ತು ಇತರೆ ಕ್ಷೇತ್ರಗಳ ಸ್ಟಾರ್ ಗಳೂ ಈ ಅಭಿಯಾನಕ್ಕೆ ಸಾಥ್ ನೀಡಿದ್ದರು. ಹನಿಮೂನ್, ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬ ಇತ್ಯಾದಿ ಸ್ಪೆಷಲ್ ಈವೆಂಟ್ ಗಳನ್ನು ಸೆಲೆಬ್ರೇಟ್ ಮಾಡಲು ಮಾಲ್ಡೀವ್ಸ್ ಗೆ ಹೋಗುತ್ತಿದ್ದ ಮಂದಿಯೆಲ್ಲಾ ಇದೀಗ ಲಕ್ಷದ್ವೀಪ ಸೇರಿದಂತೆ ಭಾರತದಲ್ಲಿನ ಅತ್ಯುತ್ತಮ ಸ್ಥಳಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ.
ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿಯೂ ಕೇವಲ ಮಾಲ್ಡೀವ್ಸ್ ಮಾತ್ರವಲ್ಲ ನಮ್ಮ ಭಾರತದಲ್ಲಿಯೂ ಅತ್ಯದ್ಭುತ ಸ್ಥಳಗಳಿವೆ. ಅಂತಹ ಸುಂದರ ಸ್ಥಳಗಳನ್ನು ಅನ್ವೇಷಿಸುವ ಮೂಲಕ ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸೋಣ ಎಂಬ ಪೋಸ್ಟ್, ವಿಡಿಯೋಗಳು ಹರಿದಾಡುತ್ತಿವೆ. ಈಗ ಅದೇ ರೀತಿ ಮಹಿಳೆಯೊಬ್ಬರು ಮುಂಬೈನಿಂದ ನಾಸಿಕ್ ಗೆ ಹೋಗುವ ಮಧ್ಯದಲ್ಲಿ ಸಿಗುವ ಸುಂದರ ಸ್ಥಳವೊಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಭಾರತದಲ್ಲಿಯೂ ಅತ್ಯದ್ಭುತ ಸ್ಥಳಗಳಿವೆ, ನಾವು ಅವುಗಳನ್ನು ಇನ್ನಷ್ಟು ಅನ್ವೇಷಿಸಬೇಕಾಗಿದೆ ಎಂದು ಹೇಳಿದ್ದಾರೆ.
If I told you I was in the Maldives right now, you’d believe me, right? But, I’m actually in a chopper from Mumbai to Nashik.
India really is no less than the foreign countries that we aspire to go to. We just need to explore it more. pic.twitter.com/h3t7sAdHN7
— Ghazal Alagh (@GhazalAlagh) January 16, 2024
Ghazal Alagh ಎಂಬವರು ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಇದೀಗ ಮಾಲ್ಡೀವ್ಸ್ ನಲ್ಲಿದ್ದೇನೆ ಎಂದು ನೀವು ಭಾವಿಸಬಹುದು. ಆದರೆ ಇದು ನಾನು ಮುಂಬೈನಿಂದ ನಾಸಿಕ್ ಗೆ ಹೆಲಿಕಾಪ್ಟರ್ ನಲ್ಲಿ ಹೋಗುವ ಸಂದರ್ಭದಲ್ಲಿ ತೆಗೆದಂತಹ ವಿಡಿಯೋ; ಭಾರತದಲ್ಲಿಯೂ ಅತ್ಯದ್ಭುತ ಸ್ಥಳಗಳಿವೆ, ನಾವು ಅವುಗಳನ್ನು ಇನ್ನಷ್ಟು ಅನ್ವೇಷಿಸಬೇಕಾಗಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ದ್ವೀಪದಂತೆಯೇ ಕಾಣುತ್ತಿರುವ ಸುಂದರವಾದ ಸ್ಥಳದ ದೃಶ್ಯಾವಳಿಯನ್ನು ಕಾಣಬಹುದು.
ಇದನ್ನೂ ಓದಿ: ಅಯೋಧ್ಯೆ ತಲುಪಿದ ರಾಮ, ಸೀತೆ ಮತ್ತು ಲಕ್ಷ್ಮಣ
ಜನವರಿ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಕೆಲವರು ಇದು ನಿಜವಾಗಿಯೂ ಮಾಲ್ಡೀವ್ಸ್ ನಂತೆ ಕಾಣುತ್ತಿಲ್ಲ ಮೇಡಂ, ಆದ್ರೆ ಈ ಸ್ಥಳ ಸುಂದರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬಹಳ ಅದ್ಭುತವಾದ ಸ್ಥಳ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ