Viral News : ಇಮೇಲ್ಗಳ ಈ ಜಮಾನಾದಲ್ಲಿ ಪತ್ರಗಳ ಲೋಕವನ್ನು ಮರೆತೇ ಬಿಟ್ಟಿದ್ದೇವೆ. ಪುಟ್ಟ ಕೆಂಪುಡಬ್ಬಿಯೊಳಗಿನ ಒಂದು ಹಾಳೆಯೊಳಗೆ ಅದೆಷ್ಟು ಅಗಾಧ ವಿಸ್ಮಯ, ಖುಷಿ, ಕುತೂಹಲ ತುಂಬಿಕೊಂಡಿರುತ್ತಿತ್ತು. ನಮ್ಮ ಜೀವಂತಿಕೆಗೆ ಸಾಕ್ಷಿ ಎಂಬಂತೆ ಆ ಪತ್ರಪ್ರಪಂಚ. ಇದೀಗ ಇದೇ ಲೋಕಕ್ಕೆ ಸಂಬಂಧಿಸಿದ ಒಂದು ಅಚ್ಚರಿಯ ಸುದ್ದಿ ನಿಮಗಾಗಿ. ಇಲ್ಲಿರುವ ಈ ಪತ್ರವೊಂದನ್ನು 1916ರಲ್ಲಿ ಇಂಗ್ಲೆಂಡ್ನ ಬಾತ್ನಿಂದ ಪೋಸ್ಟ್ ಮಾಡಲಾಗಿದೆ. ಈ ಪತ್ರದ ಮೇಲೆ ಕಿಂಗ್ ಜಾರ್ಜ್ v ಸ್ಟ್ಯಾಂಪ್ ಇದೆ. ಆದರೆ ಈ ಪತ್ರ ತಲುಪಬೇಕಾದ ವಿಳಾಸವನ್ನು ತಲುಪಿದ್ದು 100 ವರ್ಷಗಳ ಬಳಿಕ!
2021ರಲ್ಲಿ ದಕ್ಷಿಣ ಲಂಡನ್ನಲ್ಲಿರುವ ಗ್ಲೆನ್ ಮತ್ತು ಆತನ ಗೆಳತಿ ವಾಸವಾಗಿದ್ದ ಫ್ಲ್ಯಾಟ್ಗೆ ಇದು ತಲುಪಿದೆ. ಈ ಪತ್ರ ಇವರಿಬ್ಬರಲ್ಲಿ ಅಚ್ಚರಿ ತಂದಿದೆ. ಗ್ಲೆನ್, ಈ ಪತ್ರವನ್ನು ಸ್ಥಳೀಯ ಐತಿಹಾಸಿಕ ಸಂಶೋಧನಾ ಕೇಂದ್ರಕ್ಕೆ ಈ ಪತ್ರವನ್ನು ತಲುಪಿಸಿದ್ದಾರೆ.
ಇದನ್ನೂ ಓದಿ : 67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್
ಸಂಶೋಧನೆಯ ಮೂಲಕ ತಿಳಿದು ಬಂದಿರುವುದೇನೆಂದರೆ, ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಕಟೀ ಮಾರ್ಶ್ ಎನ್ನುವವರು ಬಾತ್ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದ ಕ್ರಿಸ್ಟಾಬೆಲ್ ಮೆನ್ನೆಲ್ ಎನ್ನುವವರಿಗೆ ಬರೆದ ಪತ್ರವು ಇದಾಗಿದೆ. ಇವರಿಬ್ಬರೂ ಸ್ನೇಹಿತೆಯರಾಗಿದ್ದರು.
ಇದನ್ನೂ ಓದಿ : ‘ಎಂಬಿಎ ಚಾಯ್ವಾಲಾ’ ರೂ. 90 ಲಕ್ಷದ ಮರ್ಸಿಡೀಝ್ ಕಾರು ಖರೀದಿಸಿದ ವಿಡಿಯೋ ವೈರಲ್
ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಪತ್ರವನ್ನು ರವಾನಿಸಲಾಗಿದೆ. ಆ ಸಂದರ್ಭದಲ್ಲಿ ಕಿಂಗ್ ಜಾರ್ಜ್ v ಆಡಳಿತವಿತ್ತು. ಆದರೆ ಇದು ತಲುಪಿದ್ದು ಮಾತ್ರ ನೂರು ವರ್ಷಗಳ ನಂತರ ಎನ್ನುವುದು ಅಚ್ಚರಿ ಮತ್ತು ವಿಸ್ಮಯ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:54 pm, Fri, 17 February 23