Viral News: 4 ಕೈ-ಕಾಲುಗಳೊಂದಿಗೆ ಜನಿಸಿದ ಮಗುವಿಗೆ ಸೋನು ಸೂದ್ ಸಹಾಯದಿಂದ ಆಪರೇಷನ್; ಟ್ವೀಟ್ ವೈರಲ್

| Updated By: ಸುಷ್ಮಾ ಚಕ್ರೆ

Updated on: May 30, 2022 | 1:07 PM

ಬಾಲಿವುಡ್ ನಟ ಸೋನು ಸೂದ್ ಟ್ವಿಟ್ಟರ್‌ನಲ್ಲಿ ಪುಟ್ಟ ಹುಡುಗಿಯ ಆಪರೇಷನ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ.

Viral News: 4 ಕೈ-ಕಾಲುಗಳೊಂದಿಗೆ ಜನಿಸಿದ ಮಗುವಿಗೆ ಸೋನು ಸೂದ್ ಸಹಾಯದಿಂದ ಆಪರೇಷನ್; ಟ್ವೀಟ್ ವೈರಲ್
4 ಕೈಗಳೊಂದಿಗೆ ಜನಿಸಿದ ಮಗು- ಸೋನು ಸೂದ್
Image Credit source: India Today
Follow us on

ಇಂಟರ್​ನೆಟ್​ನಲ್ಲಿ ಸದಾ ಒಂದಿಲ್ಲೊಂದು ಭಾವನಾತ್ಮಕ, ತಮಾಷೆಯ ವಿಡಿಯೋಗಳು ವೈರಲ್ (Video Viral) ಆಗುತ್ತಲೇ ಇರುತ್ತವೆ. ನಾಲ್ಕು ಕೈ ಮತ್ತು ಕಾಲುಗಳೊಂದಿಗೆ ಜನಿಸಿದ ಬಿಹಾರದ (Bihar Girl) ಪುಟ್ಟ ಹುಡುಗಿಯ ವಿಡಿಯೋ ಇದೀಗ ವೈರಲ್ ಆಗಿದೆ. ನವಾಡ ಜಿಲ್ಲೆಯಲ್ಲಿ ಜನಿಸಿದ ಬಾಲಕಿ ಚೇತರಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನ ನಡೆಸಲು ತಕ್ಷಣದ ಆಪರೇಷನ್​ನ ಅಗತ್ಯವಿತ್ತು. ಇದೀಗ ಬಾಲಿವುಡ್ ನಟ ಸೋನು ಸೂದ್ (Sonu Sood) ಮುಂದೆ ಬಂದು ಈ ಮಗುವಿಗೆ ನೆರವು ನೀಡಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಟ್ವಿಟ್ಟರ್‌ನಲ್ಲಿ ಪುಟ್ಟ ಹುಡುಗಿಯ ಆಪರೇಷನ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಟೆನ್ಷನ್ ಮಾಡಿಕೊಳ್ಳಬೇಡಿ, ಚಿಕಿತ್ಸೆ ಆರಂಭಿಸಲಾಗಿದೆ. ಇದಕ್ಕಾಗಿ ನಿಮ್ಮ ಪ್ರಾರ್ಥನೆ ಇರಲಿ’ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

 

ಸೋನು ಸೂದ್ ಅವರು ತಮ್ಮ ಪರೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹಲವಾರು ಜನರಿಗೆ ಮೂಲ ಸೌಕರ್ಯಗಳು ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಹಣವನ್ನು ತಮ್ಮ ಸ್ವಂತ ವೆಚ್ಚದಲ್ಲಿ ಸಹಾಯ ಮಾಡಿದ್ದಾರೆ. ಅವರ ಒಳ್ಳೆಯ ಕಾರ್ಯಗಳಿಗಾಗಿ ಜನರು ನಟನನ್ನು ಹೊಗಳುವುದನ್ನು ನಿಲ್ಲಿಸಲಾಗಲಿಲ್ಲ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ