ಫೋಟೋಗ್ರಾಫರ್ ಇಲ್ಲವೆಂದು ಮದುವೆಯನ್ನು ನಿರಾಕರಿಸಿದ ವಧು

ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಫೋಟೋಗ್ರಾಫರ್ ಇಲ್ಲವೆಂದು ವಧು ಮದುವೆಯನ್ನು ನಿರಾಕರಿಸಿರುವ ಘಟನೆ ನಡೆದಿದೆ.

ಫೋಟೋಗ್ರಾಫರ್ ಇಲ್ಲವೆಂದು ಮದುವೆಯನ್ನು ನಿರಾಕರಿಸಿದ ವಧು
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on:May 30, 2022 | 12:25 PM

ಹುಡುಗಿ ಹುಡುಗನನ್ನು ಬೇರೆ ಬೇರೆ ಕಾರಣಗಳಿಂದ ನಿರಾಕರಣೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆತನು ಕುಡುಕನಾಗಿದ್ದರೆ ಅಥವಾ ಬೇರೆ ಬೇರೆ ದುಷ್ಟಚಗಳಿಗೆ ದಾಸನಾಗಿದ್ದರೆ, ನೋಡಲು ಸ್ಪುರದ್ರೂಪಿಯಾಗದಿದ್ದರೆ ಮತ್ತು ಈಚಿನ ಕೆಲವು ವರ್ಷಗಳ ಹಿಂದೆ ಅಥವಾ ಈಗಲು ಕೂಡ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಹುಡುಗಿ ಹುಡುಗನನ್ನು ನಿರಾಕರಿಸಿದನ್ನು ನೋಡಿದ್ದೇವೆ. ಆದರೆ ಇಲ್ಲಿ ವಧು ಮದುವೆ ಆಗಲು ಇನ್ನೇನು ಕೆಲ ಗಂಟೆಗಳು ಇರುವಾಗಲೇ ವರರನ್ನು ನಿರಾಕರಿಸಿದ್ದಾಳೆ. ಕಾರಣ ತಿಳಿದರೆ ಆಶ್ಚರ್ಯಗೊಳ್ಳುತ್ತಿರಿ.

ಇದನ್ನು ಓದಿ: ಮೊಸಳೆ ರೀತಿ ಹೋಲುವ ದ್ವೀಪ, ಚಿತ್ರ ನೋಡಿ ಚಕಿತಗೊಂಡ ನೆಟ್ಟಿಗರು

ಉತ್ತರ ಪ್ರದೇಶದ ಕಾನ್ಪುರ ದೇಹತ್‌ನ ಮಂಗಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುವ ರೈತ ತನ್ನ ಮಗಳ ಮದುವೆಯನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಶ್ಚಯಿಸಿದ್ದರು.  ಮದುವೆ ಸಕಲ ಸಿದ್ದತೆಯಾಗಿತ್ತು. ಹಾರ ಬದಲಾಯಿಸಕೊಳ್ಳುವ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ ವಧು ವರನಿಗಾಗಿ ಕಾಯುತ್ತಾ ವೇದಿಕೆ ಮೇಲೆ ನಿಂತಿದ್ದಾಳೆ. ಅದ್ದೂರಿ ಮೆರವಣಿಗೆ ಮೂಲಕ ವರ ಮದುವೆ ಮನೆಗೆ ಬಂದಿದ್ದಾನೆ. ನೇರವಾಗಿ ವೇದಿಕೆ ಮೇಲೆ ಹೋಗಿ ವಧು ಪಕ್ಕದಲ್ಲಿ ನಿಂತುಕೊಂಡಿದ್ದಾನೆ. ಪುರೋಹಿತರು ಮಂತ್ರ ಹೇಳಿದ್ದು, ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ವಧು ತೆಡೆದಿದ್ದಾಳೆ.

ಇದನ್ನೂ ಓದಿ
Image
ಲೇಖಕಿ ಗೀತಾಂಜಲಿ ಶ್ರೀ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ; ಲೇಖಕಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಅಮುಲ್
Image
Trending: ಲೈಂಗಿಕ ವರ್ಧಕ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು! ಏನಿದು ಕಾಫಿ? ಸೇವನೆಯ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ
Image
Trending: ‘ದಿ ಕಂಜ್ಯೂರಿಂಗ್‌’ ಸಿನಿಮಾದಲ್ಲಿ ಕಾಣಿಸಿಕೊಂಡ ದೆವ್ವದ ಮನೆ 1.5 ಮಿಲಿಯನ್​ಗೆ ಮಾರಾಟ!
Image
Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್

ಕಾರಣ ಮದುವೆ ಕ್ಷಣಗಳನ್ನು ಮತ್ತು ಹಾರ ಬದಲಾಯಿಸಿಕೊಳ್ಳುವ ಕ್ಷಣಗಳನ್ನು ಸೆರೆ ಹಿಡಿಯಲು ಛಾಯಾಗ್ರಾಹಕ (ಫೋಟೋಗ್ರಾಫರ್) ಇಲ್ಲವೆಂದು ವಧು ತನಗೆ ಮದುವೆ ಬೇಡವೆಂದು ವೇದಿಕೆಯಿಂದ ಇಳಿದು ನೆರೆಯ ಮನೆಗೆ ತೆರಳಿದಳು. ಇದನ್ನು ಕಂಡು ಆವಕ್ಕಾದ ಸಂಬಂಧಿಕರು ಮತ್ತು ನರೆದಂತ ಜನರು ಆಕೆಯ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರು ಆಕೆ ಒಪ್ಪಿಕೊಳ್ಳಲಿಲ್ಲ ಬದಲಿಗೆ ಹೇಳಿದಳು  ‘”ಇಂದು ನಮ್ಮ ಮದುವೆಯ ಬಗ್ಗೆ ಕಾಳಜಿ ವಹಿಸದ ವ್ಯಕ್ತಿ ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ?”

ಇದನ್ನು ಓದಿ: ತಮ್ಮ ಕೆಲಸದಿಂದಲೇ ನೆಟ್ಟಿಗರ ಗಮನ ಸೆಳೆದ ಐಎಎಸ್ ಅಧಿಕಾರಿ: ಅಷ್ಟಕ್ಕೂ ಯಾರಿದು ಕೀರ್ತಿ ಜಲ್ಲಿ?

ಕೊನೆಗೆ  ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿನಿಮಯ ಮಾಡಿಕೊಂಡ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಮಂಗಳಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಡೋರಿ ಲಾಲ್ ಮಾತನಾಡಿ, ಪ್ರಕರಣವನ್ನು  ಮಾತುಕತೆ ಮೂಲಕ ಬಗೆಹರಿಸಲಾಗಿದೆ.  ಎರಡೂ ಕುಟುಂಬಗಳು ಪರಸ್ಪರ ನೀಡಿದ ಸರಕು ಮತ್ತು ಹಣವನ್ನು ಹಿಂದಿರುಗಿಸಿದರು. ಇದಾದ ನಂತರ, ವರನು ವಧುವಿಲ್ಲದೆ ತನ್ನ ಊರಿಗೆ ಹೊರಟುಹೋದನು ಎಂದು  ಹೇಳಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:25 pm, Mon, 30 May 22