ನೀವು ಸಾಮಾನ್ಯವಾಗಿ ಮಸಾಲ ಟೀ, ಮಟ್ಕಾ ಟೀ, ಚಾಕೋಲೇಟ್ ಟೀ ಹೇಳಿರುತ್ತೀರಿ. ಆದ್ರೆ ಎಂದಾದರೂ ಬಿರಿಯಾನಿ ಟೀ ಕೇಳಿದ್ದೀರಾ? ಪಶ್ಚಿಮ ಬಂಗಾಳದ ಬೆಲ್‌ಘಾರಿಯಾ ಸ್ಟೇಷನ್‌ನಲ್ಲಿನ ಬಿರಿಯಾನಿ ಟೀ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಇಲ್ಲಿ ಬಿರಿಯಾನಿ ಟೀ ಮಾತ್ರವಲ್ಲದೇ ರಸಗುಲ್ಲ ಟೀ, ತಂದೂರು ಟೀ ಹೀಗೆ ನಾನಾ ಬಗೆಯ ಟೀಗಳು ಲಭ್ಯವಿದೆ. ನೀವಿಲ್ಲಿ 6 ರಿಂದ 50 ರೂ.ವರೆಗೆ ಚಹಾವನ್ನು ಸವಿಯಬಹುದು. ಸುಮಾರು 17 ವರ್ಷಗಳಿಂದ ಈ ಚಹಾದ ಅಂಗಡಿಯನ್ನು ನಡೆಸುತ್ತಿದ್ದು, ಇದೀಗಾ ಬಗೆ ಬಗೆಯ ಟೀಗಳನ್ನು ಮೆನುಗೆ ಸೇರಿಸಿದ್ದು, ಟೀ ಅಂಗಡಿ ಎಲ್ಲರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಕೊರೋನಾ ನಂತರ ಜನರನ್ನು ತಮ್ಮ ಅಂಗಡಿಯತ್ತ ಸೆಳೆಯುವ ಸಲುವಾಗಿ ಎಗ್ ಟೀ,ಚಿಲ್ಲಿ ಟೀ,ರಸೊಗೊಲ್ಲ ಟೀ, ಚಾಕೊಲೇಟ್ ಟೀ, ಕೋಲ್ಡ್ ಕಾಫಿ ಮತ್ತು ಬಿರಿಯಾನಿ ಟೀ ಪ್ರಾರಂಭಿಸಿದೆವು ಎಂಬ ಚಹಾ ಅಂಗಡಿಯ ಮಾಲೀಕರಾದ ಆಕಾಶ್ ಸಹಾ ಹೇಳುತ್ತಾರೆ.
ಇದನ್ನೂ ಓದಿ: ಈ ದೇಶ ತನ್ನ ಪ್ರಜೆಗಳಿಗೆ ಉಚಿತ ಸನ್‌ಸ್ಕ್ರೀನ್ ನೀಡುತ್ತಿದೆ; ಆ ದೇಶ ಯಾವುದು ಹಾಗೂ ಕಾರಣ ಏನು? ಇಲ್ಲಿದೆ ವಿವರ
ಈ ಚಹಾ ಅಂಗಡಿಯು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೂ ತೆರೆದಿರುತ್ತದೆ. ಹಸಿ ಮೊಟ್ಟೆಗಳನ್ನು ಬಿಸಿ ಹಾಲಿನ ಚಹಾದಲ್ಲಿ ಕುದಿಸಿ ಮೊಟ್ಟೆ ಟೀ ಇಲ್ಲಿ ಸಖತ್ ಫೇಮಸ್. ಬಗೆಬಗೆಯ ಟೀಗಳನ್ನು ನೀಡುವ ಈ ರೆಸ್ಟೋರೆಂಟ್ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: