Viral News: ಕೊವಿಡ್ ಲಸಿಕೆಯ ಸರ್ಟಿಫಿಕೆಟ್​ನಿಂದ ಬಯಲಾಯ್ತು 2ನೇ ಹೆಂಡತಿಯ ರಹಸ್ಯ

ಒಂದೆರಡು ವರ್ಷಗಳ ಹಿಂದೆ, ತನ್ನ ಗಂಡ ರಾಜೇಂದ್ರ ಭೂಮಿತಾ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಬೇರೆಯವರಿಂದ ಆಕೆಗೆ ವಿಷಯ ಗೊತ್ತಾಗಿತ್ತು. ಆದರೆ, ಅದಕ್ಕೆ ಸಾಕ್ಷಿಗಳು ಇರಲಿಲ್ಲ.

Viral News: ಕೊವಿಡ್ ಲಸಿಕೆಯ ಸರ್ಟಿಫಿಕೆಟ್​ನಿಂದ ಬಯಲಾಯ್ತು 2ನೇ ಹೆಂಡತಿಯ ರಹಸ್ಯ
ಸಾಂದರ್ಭಿಕ ಚಿತ್ರ
Image Credit source: Time Now News
Edited By:

Updated on: May 23, 2022 | 6:04 PM

ಇಂದೋರ್: ಮಧ್ಯಪ್ರದೇಶದ ಇಂದೋರ್ (Indore) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಜೇಬಿನಲ್ಲಿ ಪತ್ತೆಯಾದ ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದಾಗಿ  (Covid Vaccination Certificate) ಆತನ ಅನೈತಿಕ ಸಂಬಂಧದ ವಿಷಯ ಬಯಲಾಗಿದೆ. ಹೆಂಡತಿಯ ಕೈಯಲ್ಲೇ ಸಿಕ್ಕಿಬಿದ್ದಿರುವ ಗಂಡ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ (Extra Marital Affair) ಹೊಂದಿದ್ದ ಎಂಬುದು ಬಯಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಮರಳು ವ್ಯಾಪಾರಿ ರಾಜೇಂದ್ರ ಭೀಸ್ 20 ವರ್ಷಗಳ ಹಿಂದೆ ಇಂದೋರ್ ನಿವಾಸಿಯಾದ ರೇಖಾ ಭೀಸ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಒಂದೆರಡು ವರ್ಷಗಳ ನಂತರ ರಾಜೇಂದ್ರ ಮತ್ತು ಅವನ ತಂದೆ ಗಹಿನಾಥ್ ಭೀಸ್ ಸಣ್ಣಪುಟ್ಟ ವಿಷಯಗಳಿಗೆ ಅವಳನ್ನು ಹಿಂಸಿಸಲು ಪ್ರಾರಂಭಿಸಿದ್ದರು.

ತನ್ನ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನದಿಂದ ಪತಿಯೊಂದಿಗೆ ಜಗಳವಾಡಿದ ನಂತರ ಅವಳು ಆಗಾಗ ಇಂದೋರ್‌ನಲ್ಲಿರುವ ತನ್ನ ಹೆತ್ತವರ ಮನೆಗೆ ಹಿಂತಿರುಗುತ್ತಿದ್ದಳು. ಒಂದೆರಡು ವರ್ಷಗಳ ಹಿಂದೆ, ತನ್ನ ಗಂಡ ರಾಜೇಂದ್ರ ಭೂಮಿತಾ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಬೇರೆಯವರಿಂದ ಆಕೆಗೆ ವಿಷಯ ಗೊತ್ತಾಗಿತ್ತು. ಆದರೆ, ಅದಕ್ಕೆ ಸಾಕ್ಷಿಗಳು ಇರಲಿಲ್ಲ. ರಾಜೇಂದ್ರನ ಜೇಬಿನಲ್ಲಿ ಭೂಮಿತಾಳ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ಸಿಕ್ಕಿದ ನಂತರ ಆಕೆಗೆ ತನ್ನ ಗಂಡನ ಅಕ್ರಮ ಸಂಬಂಧದ ವಿಷಯ ಸ್ಪಷ್ಟವಾಯಿತು. ಆ ಸರ್ಟಿಫಿಕೆಟ್​​ನಲ್ಲಿ ಭೂಮಿತಾಳ ಗಂಡನ ಹೆಸರನ್ನು ರಾಜೇಂದ್ರ ಭೀಸ್ ಎಂದು ಬರೆಯಲಾಗಿತ್ತು.

ಇದನ್ನೂ ಓದಿ: Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!

ಇದನ್ನೂ ಓದಿ
Viral Video: ಮಂಟಪದಲ್ಲೇ ವರನ ತಲೆಯಿಂದ ಕೆಳಗೆ ಬಿತ್ತು ವಿಗ್; ಮದುವೆಯೇ ಬೇಡವೆಂದ ವಧು!
Shocking Video: ಮಂಗಾಟವಾಡಲು ಬೋನಿನ ಬಳಿ ಬಂದ ಯುವಕನ ಕೈ ಕಚ್ಚಿದ ಸಿಂಹ; ಭಯಾನಕ ವಿಡಿಯೋ ವೈರಲ್
Viral News: ಮೌಂಟ್ ಎವರೆಸ್ಟ್​ ಬೇಸ್ ಕ್ಯಾಂಪ್ ಹತ್ತಿದ 10 ವರ್ಷದ ಬಾಲಕಿ ರಿದಮ್!
Viral Video: ಕೋತಿಗೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡಿದ ನಾಯಿ; ಕ್ಯೂಟೆಸ್ಟ್​​ ವಿಡಿಯೋ ಇಲ್ಲಿದೆ

ತನ್ನ ಗಂಡ ತಾನು ಬದುಕಿರುವಾಗಲೇ ಮತ್ತೊಂದು ಮದುವೆಯಾಗಿದ್ದಾನೆ ಎಂದು ಪತಿಯ ವಿರುದ್ಧ ರೇಖಾ ಕೇಸ್ ದಾಖಲಿಸಿದ್ದಾಳೆ. ತನಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ತನ್ನ ಮಾವನ ವಿರುದ್ಧವೂ ಕೇಸ್ ಹಾಕಿದ್ದಾಳೆ. ತನ್ನ ಪತಿ ಕೂಡ ತನ್ನ ಮಕ್ಕಳನ್ನು ತನ್ನಿಂದ ಕಿತ್ತುಕೊಂಡು ಇಂದೋರ್‌ನಲ್ಲಿರುವ ತನ್ನ ಪೋಷಕರ ಮನೆಗೆ ಬಿಟ್ಟಿದ್ದಾನೆ ಎಂದು ರೇಖಾ ಆರೋಪಿಸಿದ್ದಾಳೆ. ಪೊಲೀಸರ ಪ್ರಕಾರ, ರೇಖಾ ಮತ್ತು ರಾಜೇಂದ್ರ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Mon, 23 May 22