ಜಗಳದಲ್ಲಿ ಗಂಡನ ನಾಲಗೆ ಕಚ್ಚಿದ ಹೆಂಡತಿ; ತುಂಡಾಗಿ ಕೆಳಗೆ ಬಿದ್ದ ನಾಲಗೆ

| Updated By: ಶ್ರೀದೇವಿ ಕಳಸದ

Updated on: Jan 28, 2023 | 11:57 AM

Uttar Pradesh : ಉತ್ತರ ಪ್ರದೇಶದಲ್ಲಿ ಈ ವಿಲಕ್ಷಣ ಘಟನೆ ಸಂಭವಿಸಿದೆ. ಹೆಂಡತಿಯ ತವರಿನಲ್ಲಿದ್ದ ಮಕ್ಕಳನ್ನು ನೋಡಲು ಹೋದಾಗ ಗಂಡ ಹೆಂಡತಿಯ ಮಧ್ಯೆ ಜಗಳ ಏರ್ಪಟ್ಟಿದೆ. ಈಗ ಹೆಂಡತಿ ಪೊಲೀಸರ ವಶದಲ್ಲಿದ್ದಾಳೆ.

ಜಗಳದಲ್ಲಿ ಗಂಡನ ನಾಲಗೆ ಕಚ್ಚಿದ ಹೆಂಡತಿ; ತುಂಡಾಗಿ ಕೆಳಗೆ ಬಿದ್ದ ನಾಲಗೆ
ಪ್ರಾತಿನಿಧಿಕ ಚಿತ್ರ
Follow us on

Viral News: ಗಂಡ ಹೆಂಡತಿಯ ಮಧ್ಯೆ ಜಗಳ!? ಅಚ್ಚರಿ ಪಡುವಂಥದ್ದೇನೂ ಇಲ್ಲ. ಏಕೆಂದರೆ ಇದು ತೀರಾ ಸಾಮಾನ್ಯ. ಎರಡು ಭಿನ್ನ ವ್ಯಕ್ತಿತ್ವ, ಭಿನ್ನ ಹಿನ್ನೆಲೆಯಿಂದ ಬಂದ ಮನಸುಗಳು ಜೀವನದುದ್ದಕ್ಕೂ ಒಂದೇ ಮನೆಯಲ್ಲಿ, ಒಮ್ಮತದಿಂದ ಕುಟುಂಬದ ನಿಯಮಗಳಿಗೆ ತಕ್ಕಂತೆ ವಾಸಿಸುವುದು ಎಂದರೆ ಅದೊಂದು ಸಾಧನೆಯೇ. ಬದಲಾದ ಜೀವನಶೈಲಿ, ಶೈಕ್ಷಣಿಕ ಅರಿವು, ನಿಲುವು, ನಿರೀಕ್ಷೆಗಳು, ಬದುಕಿನ ಗುರಿ ಹೀಗೆ ಎಲ್ಲವನ್ನೂ ತೂಗಿಸಿಕೊಂಡು ಹೋಗುವುದೆಂದರೆ ಸುಲಭದ ಮಾತಲ್ಲ. ಜಗಳಗಳ ಕಾರಣ, ಪರಿಣಾಮ ಕೇಳಿದಾಗ ಕೆಲವೊಮ್ಮೆ ನಗು ಬರಬಹುದು. ಆದರೆ ಅದರ ಹಿಂದೆ ಗಂಭೀರ ಕಾರಣಗಳಿರುತ್ತವೆ. ಇದೀಗ ವೈರಲ್ ಆಗಿರುವ ಈ ಸುದ್ದಿ ಗಮನಿಸಿ. ಹೆಂಡತಿಯೊಬ್ಬಳು ಜಗಳದಲ್ಲಿ ಗಂಡನ ನಾಲಗೆಯನ್ನೇ ಕಚ್ಚಿಬಿಟ್ಟಿದ್ದಾಳೆ, ಅದು ತುಂಡಾಗಿ ನೆಲಕ್ಕೆ ಬೀಳುವಷ್ಟು ಜೋರಾಗಿ!

ಇದನ್ನೂ ಓದಿ : ‘ನಾ ಬರದಿದ್ದರೆ ಶಾಲೆಯೇನು ಮುಚ್ಚಿ ಹೋಗುವುದಿಲ್ಲ’ ಉತ್ತರ ಪ್ರದೇಶದ ಬಾಲಕನ ರಜಾಚೀಟಿ ವೈರಲ್

ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಲಕ್ನೋದ ಠಾಕೂರ್​ಗಂಜ್​ನಲ್ಲಿ ನಡೆದಿದೆ. ಸಲ್ಮಾ ಎಂಬಾಕೆ ಮಕ್ಕಳೊಂದಿಗೆ ತನ್ನ ತವರಿಗೆ ಹೋಗಿದ್ದಾಳೆ. ಬಹಳ ದಿನಗಳಾದರೂ ಆಕೆ ಮರಳಿ ಬಾರದಿದ್ದಾಗ ಗಂಡ ಮುನ್ನಾ ಆಕೆಯ ತವರಿಗೆ ತೆರಳಿ ಅವರನ್ನು ವಾಪಾಸು ಕರೆತರಲು ಹೋಗಿದ್ದಾನೆ. ಅಲ್ಲಿ ಅವರಿಬ್ಬರ ನಡುವೆ ಮಾತು ತಾರಕಕ್ಕೇರಿ ಜಗಳಕ್ಕೆ ತಿರುಗಿದೆ. ಅವನು ಆಕೆಗೆ ಉಗಿಯುವ ಸಂದರ್ಭದಲ್ಲಿ ಆಕೆ ಬಲವಾಗಿ ಅವನ ನಾಲಗೆಯನ್ನು ಕಚ್ಚಿಬಿಟ್ಟಿದ್ದಾಳೆ. ಅದು ತುಂಡಾಗಿ ಕೆಳಗೆ ಬಿದ್ದಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವನನ್ನು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸಲ್ಮಾ ಈಗ ಪೊಲೀಸರ ವಶದಲ್ಲಿದ್ದಾಳೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ನಿದ್ದೆ ಬರ್ತಿದೆ ಅದಕ್ಕೆ ರೈಡ್​ ಕ್ಯಾನ್ಸಲ್​ ಮಾಡಿ; ಉಬರ್ ಡ್ರೈವರ್​ನ ಪ್ರಾಮಾಣಿಕತೆ ಮೆಚ್ಚುತ್ತಿರುವ ನೆಟ್ಟಿಗರು

ಪಶ್ಚಿಮ ವಿಭಾಗದ ಎಡಿಸಿಪಿ ಚಿರಂಜೀವ್ ನಾಥ್ ಸಿಂಘಾ, ‘ಈ ದಂಪತಿಯ ಮಧ್ಯೆ ಹಲವಾರು ವರ್ಷಗಳಿಂದ ಜಗಳಗಳು ನಡೆಯುತ್ತ ಬಂದಿವೆ. ಹೆಂಡತಿ ತನ್ನ ಗಂಡನಿಂದ ದೂರವಾಗಿ ತನ್ನ ತಂದೆತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ಗಂಡ ತನ್ನ ಮಕ್ಕಳನ್ನು ಭೇಟಿಯಾಗಲು ಇಲ್ಲಿ ಬಂದಾಗ ಈ ದುರ್ಘಟನೆ ನಡೆದಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ತನಿಖೆಯನ್ನು ಆರಂಭಿಸಲಾಗಿದೆ. ಆರೋಪಿ ಸಲ್ಮಾಳನ್ನು ಬಂಧಿಸಲಾಗಿದೆ’ ಎಂದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:56 am, Sat, 28 January 23