Viral News: ತಿಂದಿದ್ದು ಒಂದೇ ದೋಸೆ ಬಿಲ್​ ಮಾತ್ರ ಎರಡರದು! ಐಪಿಎಸ್​ ಆಫೀಸರ್​ಗೇ ಟೋಪಿ ಹಾಕಿದ ವ್ಯಕ್ತಿ

| Updated By: Digi Tech Desk

Updated on: May 09, 2023 | 3:41 PM

IPS Officer : ಎರಡು ದೋಸೆಯ ಬಿಲ್ ಯಾಕೆ ಹಾಕಿದ್ದೀರಿ ಎಂದು ಐಪಿಎಸ್​ ಅಧಿಕಾರಿ ಹೋಟೆಲ್​ನವರಿಗೆ ಕೇಳಿದ್ದಾರೆ. ನಿಮ್ಮೊಂದಿಗೆ ಬಂದ ಆ ವ್ಯಕ್ತಿ ಯಾರು ಮತ್ತೆ ಎಂದು ಅವರು ಪ್ರಶ್ನಿಸಿದ್ದಾರೆ. ಮುಂದೆ?

Viral News: ತಿಂದಿದ್ದು ಒಂದೇ ದೋಸೆ ಬಿಲ್​ ಮಾತ್ರ ಎರಡರದು! ಐಪಿಎಸ್​ ಆಫೀಸರ್​ಗೇ ಟೋಪಿ ಹಾಕಿದ ವ್ಯಕ್ತಿ
ಪ್ರಾತಿನಿಧಿಕ ಚಿತ್ರ
Follow us on

Viral News : ಸಿನೆಮಾಗಳಲ್ಲಿ ಇಂಥದೆಲ್ಲವನ್ನು ನೋಡಿದ್ದೇವೆ. ಆದರೆ ನಿಜಜೀವನದಲ್ಲಿ? ಅದರಲ್ಲೂ ಒಬ್ಬ ಐಪಿಎಸ್​ ಅಧಿಕಾರಿಗೇ ಮಹಾಶಯನೊಬ್ಬ ಹೀಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ ಎಂದರೆ… ನಮ್ಮ ಸುತ್ತಲೂ ಇಂಥ ಪಾತ್ರಗಳು ಇನ್ನೂ ಜೀವಂತವಾಗಿವೆ ಎಂದರ್ಥ ಅಲ್ಲವೆ? ಐಪಿಎಸ್​ ಆಫೀಸರ್ ಅರುಣ್ ಬೋತ್ರಾ ಒಬ್ಬರೇ ದೋಸೆ ತಿನ್ನಲು ಹೋಟೆಲ್​ಗೆ ಹೋದಾಗ ಏನಾಯಿತು? ಓದಿ.

ಸೋಮವಾರದಂದು ಅರುಣ್ ಈ ಟ್ವೀಟ್ ಮಾಡಿದ್ದಾರೆ. ‘ನಾನು ದೋಸೆ ತಿನ್ನಲು ಒಬ್ಬನೇ ಹೋಟೆಲ್​ಗೆ ಹೋಗಿದ್ದೆ. ಮಾಣಿ ಬಿಲ್​ ಕೊಟ್ಟ. ಆದರೆ ಅದರಲ್ಲಿ ಎರಡು ದೋಸೆಯ ಬಿಲ್ ಇತ್ತು. ಯಾಕೆ ಹೀಗೆ ಎಂದು ಕೇಳಿದೆ. ಅದಕ್ಕೆ ಅವನು ಇನ್ನೊಂದು ತುದಿಯಲ್ಲಿದ್ದ ವ್ಯಕ್ತಿಯನ್ನು ತೋರಿಸಿ, ನಿಮಗೆ ಕಂಪೆನಿ ಕೊಡಲು ಬಂದಿದ್ದೇನೆ ಎಂದು ಹೇಳಿಕೊಂಡ. ಹಾಗಾಗಿ ಎರಡು ದೋಸೆಯ ಬಿಲ್ ನೀವೇ ಭರಿಸಬೇಕು ಎಂದ.’

ಇದನ್ನೂ ಓದಿ : ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

ಆದರೆ ಹೋಟೆಲ್​ನವರು, ಆ ವ್ಯಕ್ತಿಯನ್ನು ಹುಡುಕುವುದರ ಬದಲಾಗಿ ಅರುಣ್​ ಅವರಿಗೇ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಏಕೆಂದರೆ ಆ ವ್ಯಕ್ತಿ ಟೇಬಲ್​ ಬಿಟ್ಟು ಅದಾಗಲೇ ಕಾಣೆಯಾಗಿದ್ದ! ಸಾಕಷ್ಟು ನೆಟ್ಟಿಗರು ಈ ಟ್ವೀಟ್​ ಅನ್ನು ಹಾಸ್ಯದೃಷ್ಟಿಯಿಂದ ಓದಿ ಪ್ರತಿಕ್ರಿಯಿಸಿದ್ಧಾರೆ. ಇನ್ನೂ ಕೆಲವರು ಕಾಳಜಿ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ಆ ವ್ಯಕ್ತಿಗೆ ನೀವೊಬ್ಬ ಪೊಲೀಸ್ ಆಫೀಸರ್​ ಎಂದು ಗೊತ್ತಿತ್ತೇ? ಗೊತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮುಂದಿನ ಸಲ ನೀವು ಹೋಟೆಲ್​ಗೆ ಹೋಗುವಾಗ ನಮ್ಮನ್ನೂ ಆಹ್ವಾನಿಸಿ ಎಂದು ಮತ್ತೊಬ್ಬರು ಹೇಳಿದ್ದಾರೆ. ರೆಸ್ಟೋರೆಂಟ್​ ಮತ್ತು ಐಪಿಎಸ್​ ಅಧಿಕಾರಿಯನ್ನು ಮೀರಿಸುವಷ್ಟು ಸ್ಮಾರ್ಟ್​ ಆಗಿದ್ದನೇ ಆ ವ್ಯಕ್ತಿ? ಸದ್ಯ ದೋಸೆ ಮಾತ್ರ ತಿಂದಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಪ್ರತಿಕ್ರಿಯೆ ಏನು? ನೀವು ಇಂಥ ಪ್ರಸಂಗಗಳನ್ನು ಎದುರಿಸಿದ್ದೀರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:28 pm, Tue, 9 May 23