Viral News: ಮಕ್ಕಳಿಲ್ಲ ಎಂದು ಕೊರಗುತ್ತಿದ್ದ ಗಂಡ, 5 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

Viral News Kannada: ಹಲವು ವೈದ್ಯರನ್ನು ಕೂಡ ಭೇಟಿಯಾಗಿದ್ದರು. ಈ ವೇಳೆ ಹಣ ಖರ್ಚಾಯಿತೇ ಹೊರತು ಕಂದಮ್ಮನನ್ನು ಮುದ್ದಾಡುವ ಭಾಗ್ಯ ಮಾತ್ರ ದೊರಕಿರಲಿಲ್ಲ.

Viral News: ಮಕ್ಕಳಿಲ್ಲ ಎಂದು ಕೊರಗುತ್ತಿದ್ದ ಗಂಡ, 5 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಸಾಂದರ್ಭಿಕ ಚಿತ್ರ
Updated By: ಝಾಹಿರ್ ಯೂಸುಫ್

Updated on: Jul 25, 2022 | 6:41 PM

ದೇವರು ಕೊಡಲ್ಲ…ಕೊಟ್ಟರೆ ಕೈ ತುಂಬಾ ಕೊಡ್ತಾನೆ ಎಂಬ ಮಾತಿದೆ.  ಈ ದಂಪತಿಗಳ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿ ಬಿಟ್ಟಿದೆ. ಏಕೆಂದರೆ ರಾಜಸ್ಥಾನದ ಕರೌಲಿ ಜಿಲ್ಲೆಯ ಮಸಲ್​ಪುರದ ಪಿಪ್ರಾನಿ ಗ್ರಾಮದ ಅಶ್ಕ್ ಅಲಿ ಹಾಗೂ ರೇಷ್ಮಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಮದುವೆಯಾಗಿ ವರ್ಷಗಳು ಉರುಳಿದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಅನೋನ್ಯತೆಯಿಂದ ಕೂಡ ಬಾಳುತ್ತಿದ್ದರೂ, ಮಕ್ಕಳಾಗದ ಬಗ್ಗೆ ಇಬ್ಬರಲ್ಲೂ ಒಳಗೊಳಗೆ ಕೊರಗು ಇದ್ದೇ ಇತ್ತು.
ಹೀಗಾಗಿ ಹಲವು ಕಡೆ ಹರಕೆಗಳನ್ನು ಹೊತ್ತಿದ್ದಾರೆ. ಅನೇಕ ಕಡೆ ಪೂಜೆಗಳನ್ನು ನೇರವೇರಿಸಿದ್ದಾರೆ. ಹೀಗೆ ವರ್ಷಗಳು ಆರು  ಕಳೆದರೂ ಮನೆಗೆ ಪುಟ್ಟ ಅತಿಥಿ ಮಾತ್ರ ಆಗಮಿಸಿರಲಿಲ್ಲ. ಇದಾಗ್ಯೂ ಈ ದಂಪತಿ ದೇವರ ಮೇಲಿನ ನಂಬಿಕೆ ಮಾತ್ರ ಕಳೆದುಕೊಂಡಿರಲಿಲ್ಲ. ಹೀಗಾಗಿಯೇ ಪ್ರತಿ ದಿನವೂ ಮಕ್ಕಳಿಗಾಗಿ ಪ್ರಾರ್ಥಿಸುತ್ತಿದ್ದರು.

ಇದರ ನಡುವೆ ಹಲವು ವೈದ್ಯರನ್ನು ಕೂಡ ಭೇಟಿಯಾಗಿದ್ದರು. ಈ ವೇಳೆ ಹಣ ಖರ್ಚಾಯಿತೇ ಹೊರತು ಕಂದಮ್ಮನನ್ನು ಮುದ್ದಾಡುವ ಭಾಗ್ಯ ಮಾತ್ರ ದೊರಕಿರಲಿಲ್ಲ. ಆದರೆ ಈ ವರ್ಷಾರಂಭದಲ್ಲಿ ರೇಷ್ಮಾ ಗಂಡನಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದರು. ಇತ್ತ ಹೆಂಡತಿ ಗರ್ಭವತಿಯಾಗಿರುವುದನ್ನು ಖಚಿತಪಡಿಸಿಕೊಂಡ ಅಶ್ಕ್ ಅಲಿ ತನ್ನ ವಾರಸುದಾರನನ್ನು ಎದುರು ನೋಡುತ್ತಾ ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದರು. ಅಂತಿಮವಾಗಿ ಸೋಮವಾರ ದೇವರು ವರ ಕೊಟ್ಟಿದ್ದಾನೆ. ಆದರೆ ಅದು ಅಂತಿಂಥ ವರವಲ್ಲ ಎಂಬುದೇ ಇಲ್ಲಿ ವಿಶೇಷ.

ಹೌದು, ರೇಷ್ಮಾ  ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದು ಕೂಡ ಐದು ಮಕ್ಕಳಿಗೆ ಎಂಬುದೇ ಅಚ್ಚರಿ.
ಒಂದೇ ಬಾರಿಗೆ ಐದು ಮಕ್ಕಳು ಜನಿಸಿದ್ದು ಆಸ್ಪತ್ರೆ ಸಿಬ್ಬಂದಿಗೂ ಆಶ್ಚರ್ಯಗೊಂಡಿದ್ದಾರೆ. ಈ ಸುದ್ದಿ ತಕ್ಷಣವೇ ಆಸ್ಪತ್ರೆಯಾದ್ಯಂತ ಹರಡಿತು. ಆಸ್ಪತ್ರೆಯ ರೋಗಿಗಳು ಮತ್ತು ಅವರ ಕುಟುಂಬದವರು ಮಕ್ಕಳನ್ನು ನೋಡಲು ಕಾತುರರತೆಯಿಂದ ಓಡಿ ಬಂದಿದ್ದರು.

ಇದನ್ನೂ ಓದಿ
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ರೇಷ್ಮಾ ಇಬ್ಬರು ಗಂಡು ಮತ್ತು 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರಿಗೆ 7 ತಿಂಗಳಲ್ಲಿ ಹೆರಿಗೆಯಾಗಿದ್ದು, 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನಂತರ ತಾಯಿಯು ಕೂಡ ಆರೋಗ್ಯವಾಗಿದ್ದಾರೆ. ಇನ್ನು ಐವರು ಮಕ್ಕಳು 300 ರಿಂದ 660 ಗ್ರಾಂ ತೂಕ ಹೊಂದಿದ್ದು, ತೀವ್ರ ನಿಗಾ ಅಗತ್ಯದ ಕಾರಣ ಕಂದಮ್ಮಗಳನ್ನು ಜೈಪುರಕ್ಕೆ ಕಳುಹಿಸಲಾಗಿದೆ. ಇದಾಗ್ಯೂ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಆಶಾ ಮೀನಾ ತಿಳಿಸಿದ್ದಾರೆ. ಮಕ್ಕಳಿಲ್ಲದ ನೋವಿನಲ್ಲೇ ಕಾಲ ಕಳೆಯುತ್ತಿದ್ದ ಆಶ್ಕ್​ ಅಲಿ ಇದೀಗ ಒಂದೇ ಬಾರಿ 5 ಮಕ್ಕಳ ತಂದೆಯಾಗಿರುವುದು ವಿಶೇಷ. ಹೌದು, ದೇವರು ಕೊಡಲ್ಲ..ಕೊಡುವಾಗ ಬಾಚಿ ಕೊಡ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.