ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾದರೂ ವೈದ್ಯರ ಬಳಿಗೆ ಹೋಗುವುದು ಸಾಮಾನ್ಯ. ಆದರೆ ಆರೋಗ್ಯವಂತ ವ್ಯಕ್ತಿಯೊಬ್ಬರು ವೈದ್ಯರ ಬಳಿ ಹೋಗಿ ತನ್ನ ಎರಡು ಬೆರಳುಗಳನ್ನು ಕತ್ತರಿಸುವಂತೆ ಒತ್ತಡ ಹೇರಿರುವ ಘಟನೆ ಕೆನಡಾದಲ್ಲಿ ನಡೆದಿದೆ.
ಆ ಬೆರಳುಗಳಿಗೆ ಏನೂ ಆಗಿರಲಿಲ್ಲ, ಎಲ್ಲವೂ ಆರೋಗ್ಯಕರವಾಗಿದ್ದವು, ಆದರೂ ಆತ ಕತ್ತರಿಸುವಂತೆ ಕೇಳಿದ್ದು ವೈದ್ಯರನ್ನು ಬೆಚ್ಚಿಬೀಳಿಸಿತ್ತು.
ಕ್ವಿಬೆಕ್ನಲ್ಲಿರುವ ವೈದ್ಯರು ನಮಗೆ ಕಣ್ಣಿಗೆ ಕಾಣಿಸದಿರುವುದು ಏನೋ ಇದೆ ಎಂದು ಅರಿತು ಕೈಗಳ ಎಕ್ಸ್-ರೇ ಕೂಡ ಮಾಡಿದ್ದಾರೆ ಆದರೆ ಅದರಲ್ಲೂ ಯಾವುದೇ ಸಮಸ್ಯೆ ಕಾಣಿಸಲಿಲ್ಲ.
20 ವರ್ಷ ವಯಸ್ಸಿನ ವ್ಯಕ್ತಿಗೆ ತನ್ನ ಎಡಗೈಯಲ್ಲಿ ನಾಲ್ಕು ಮತ್ತು ಐದನೇ ಬೆರಳುಗಳು ನೋಯುತ್ತಿರುವಂತೆ ಭಾಸವಾಗುತ್ತಿತ್ತು. ಅದರ ಜತೆಗೆ ಆ ಬೆರಳುಗಳು ತನ್ನದಲ್ಲವೇನೋ ಎಂದು ಕೂಡ ಅನಿಸುತ್ತಿತ್ತು. ಬೆರಳುಗಳಲ್ಲಿ ತೀವ್ರ ನೋವು, ಸುಟ್ಟ ಅನುಭವ, ಕೊಳೆತಂತೆಲ್ಲಾ ಅನಿಸುತ್ತಿತ್ತು.
ಮತ್ತಷ್ಟು ಓದಿ: ಆನ್ಲೈನ್ನಲ್ಲಿ ಕೇವಲ 50 ಸಾವಿರ ರೂ.ಗೆ ದೇಶ ಖರೀದಿಸಿದ ವ್ಯಕ್ತಿ, ಇರೋದು ಒಬ್ಬರೇ, ಪಾಸ್ಪೋರ್ಟ್ ಇಲ್ಲದೆ ಪ್ರವೇಶವಿಲ್ಲ
ಬಳಿಕ ಆ ವ್ಯಕ್ತಿ BIID ಎನ್ನುವ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದುಬಂದಿತ್ತು. ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಈ ಸಮಸ್ಯೆ ಹೊಂದಿರುವವರು ದೇಹದ ಹಲವು ಭಾಗಗಳನ್ನು ತನ್ನದಲ್ಲ, ಅವು ಸರಿ ಇಲ್ಲ ಎಂದೇ ಭಾವಿಸುತ್ತಾರೆ. ಹಾಗೆಯೇ ಆ ಭಾಗಗಳು ದೇಹದ ಭಾಗವಾಗಿರಬಾರದು ಎಂದು ಬಯಸುತ್ತಾರೆ.
ಇದು ತುಂಬಾ ಅಪಾಯಕಾರಿ, ವೈದ್ಯರ ಬಳಿಗೆ ತೆರಳದೇ ತಾನೇ ತಪ್ಪು ಹಾದಿ ತುಳಿಯುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಚಿಕಿತ್ಸಾ ಆಯ್ಕೆಗಳು ಕೂಡ ಲಭ್ಯವಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ