161 ಕಿ.ಮೀ ಲಾಂಗ್ ಡ್ರೈವ್ ಹೋಗಿಬಂದೆ, ಆದರೆ ಕಾರ್ ನಮ್ಮದಲ್ಲ!

| Updated By: ಶ್ರೀದೇವಿ ಕಳಸದ

Updated on: Feb 15, 2023 | 1:51 PM

Dog : ರಜೆದಿನಗಳ ಪ್ರವಾಸಕ್ಕೆಂದು ಕುಟುಂಬವೊಂದನ್ನು ಮ್ಯಾಂಚೆಸ್ಟರ್ ಏರ್​ಪೋರ್ಟ್​ಗೆ ಕರೆದೊಯ್ಯಲು ಕ್ಯಾಬ್​ ಬಂದಿದೆ. ರಾಲ್ಫ್​ನ ಪೋಷಕಿ ಯಾರೊಂದಿಗೋ ಮಾತಲ್ಲಿ ಮುಳುಗಿದ್ದಾಗ, ರಾಲ್ಫ್​ ಕ್ಯಾಬ್​ ಅನ್ನು ಏರಿ ಕುಳಿತಿದೆ! ಮುಂದೆ?

161 ಕಿ.ಮೀ ಲಾಂಗ್ ಡ್ರೈವ್ ಹೋಗಿಬಂದೆ, ಆದರೆ ಕಾರ್ ನಮ್ಮದಲ್ಲ!
ರಾಲ್ಫ್
Follow us on

Viral News : ಅಮೆರಿಕದ ಜಾರ್ಜಿಯಾ ಕ್ರೂವ್​ ಎನ್ನುವವರು ತಮ್ಮ ಮೂರು ವರ್ಷದ ರಾಲ್ಫ್​ ಎಂಬ ನಾಯಿಯೊಂದಿಗೆ ವಾಕ್ ಹೋಗಿದ್ದಾರೆ. ಆಗ ಸ್ನೇಹಿತರೊಂದಿಗೆ ಆಕೆ ಮಾತನಾಡುತ್ತಾ ನಿಂತಾಗ ರಾಲ್ಫ್​ ತಪ್ಪಿಸಿಕೊಂಡಿದೆ. ಆಕೆ ಗಾಬರಿಯಿಂದ ಫೇಸ್​ಬುಕ್​ನಲ್ಲಿ ಅದರ ಫೋಟೋ, ವಿವರ ಹಾಕಿ ಸಹಾಯ ಕೋರಿದ್ದಾಳೆ. ರಾಲ್ಫ್​ 161 ಕಿ.ಮೀ ನಷ್ಟು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಿ ಅಂತೂ ಮನೆಗೆ ವಾಪಸ್​ ಆಗಿದೆ. ಸೋಮವಾರ ಬೆಳಗ್ಗೆ ಅಮೆರಿಕದಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ

ರಜಾದಿನಗಳಿಗೆ ಪ್ರವಾಸ ಹೊರಟಿದ್ದ ಕುಟುಂಬವೊಂದನ್ನು ಕರೆದೊಯ್ಯಲು ಕ್ಯಾಬ್​ ಆಗಷ್ಟೇ ಬಂದು ನಿಂತಿತ್ತು. ಅದನ್ನು ನೋಡಿದ ರಾಲ್ಫ್​ ಠಣ್ಣನೆ ಜಿಗಿದು ಏರಿ ಕುಳಿತಿದೆ. ರಾಲ್ಫ್​​ಗೆ ಕಾಲರ್​ ಐಡಿ ಅಳವಡಿಸದೇ ಇದ್ದ ಕಾರಣ, ಡ್ರೈವರ್​ಗೆ ಯಾರನ್ನು ಸಂಪರ್ಕಿಸಬೇಕು ಎನ್ನುವುದು ತಿಳಿದಿಲ್ಲ. ಆದರೆ ಲಾಂಗ್​ ಡ್ರೈವ್ ಕರೆದೊಯ್ದರಾಯಿತು ಎಂದು ಕರೆದೊಯ್ದಿದ್ದಾನೆ. ನಂತರ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ವಾಪಾಸು ರಾಲ್ಫ್​ನನ್ನು ಅದರ ಏರಿಯಾಗೆ ಕರೆತಂದಿದ್ದಾನೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಇಲ್ಲೊಂದು ಬೆಕ್ಕನ್ನು ಬೆಂಚಿಗೆ ಕಟ್ಟಿ ಹಾಕಲಾಗಿದೆ, ಮುಂದೇನಾಯಿತೆಂದು ನೋಡಿ

ಅದರ ಪೋಷಕರನ್ನು ಪತ್ತೆ ಹಚ್ಚುವುದು ಹೇಗೆಂದು ತನ್ನ ಮನೆಯಲ್ಲಿಯೇ ರಾಲ್ಫ್​ನನ್ನು ಇಟ್ಟುಕೊಂಡಿದ್ದಾನೆ. ಅಷ್ಟೊತ್ತಿಗೆ ರಾಲ್ಫ್​ ಕಳೆದುಹೋದ ಬಗ್ಗೆ ಅದರ ಪೋಷಕಿ ಜಾರ್ಜಿಯಾ ಫೇಸ್​ಬುಕ್​ನಲ್ಲಿ ಆಗಲೇ ಫೋಟೋ ಸಮೇತ ಸಹಾಯ ಕೋರಿಯಾಗಿತ್ತು. ಅದೃಷ್ಟವಶಾತ್​ ಈ ಪೋಸ್ಟ್​ ಡ್ರೈವರ್​ನ ಸ್ನೇಹಿತೆಯ ಕಣ್ಣಿಗೆ ಬಿದ್ದಿದೆ. ಆಕೆ ರಾಲ್ಫ್​ನ ಪೋಷಕಿಗೆ ಫೋನ್ ಮಾಡಿ ವಾಸ್ತವವನ್ನು ತಿಳಸಿದ್ದಾಳೆ.

ಇದನ್ನೂ ಓದಿ : ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್

ತಕ್ಷಣವೇ ಜಾರ್ಜಿಯಾ, ಡ್ರೈವರ್​ ಮನೆಗೆ ಹೋಗಿ ಬೆಳಗ್ಗೆ 10 ಗಂಟೆಗೆ ರಾಲ್ಫ್​ನನ್ನು ಕರೆದುಕೊಂಡು ಬಂದಿದ್ದಾಳೆ. ಇದೀಗ ಲೊಕೇಶನ್​ ಟ್ಯಾಗ್ ಫ್ಲ್ಯಾಶಿಂಗ್​ ಲೈಟ್​ ಮತ್ತು ಐಡಿ ಡಿಸ್ಕ್​ ಅನ್ನು ತನ್ನ ನಾಯಿಗೆ ಅಳವಡಿಸಬೇಕೆಂದುಕೊಂಡಿದ್ಧಾಳೆ. ‘ಈ ಹಿಂದೆ ಯಾವಾಗಲೂ ರಾಲ್ಫ್​ ಹೀಗೆ ಮಾಡಿದವನಲ್ಲ. ಕ್ಯಾಬ್​ನಲ್ಲಿ ಅದು ಹೇಗೆ ಏರಿ ಕುಳಿತನೋ! ಅವನು ಯಾರಿಗೂ ಹೆದರುವವನಲ್ಲ, ಜನರನ್ನು ಬಹಳ ಪ್ರೀತಿಸುತ್ತಾನೆ. ಪಾಪ ಡ್ರೈವರ್​ ದಿಕ್ಕುತೋಚದೆ ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದಾನೆ. ಆದರೆ ವಾಪಾಸು ಅದನ್ನು ಮರಳಿಳಿಸಿರುವ ಅವನ ಜವಾಬ್ದಾರಿಯುತ ನಡೆ ಮಾತ್ರ ಅದ್ಭುತ’ ಎಂದಿದ್ದಾಳೆ ಆಕೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 1:47 pm, Wed, 15 February 23