Viral News : ವಿಶ್ವದ ಅತ್ಯಂತ ಹಿರಿಯ ಮಹಿಳೆ ಸಿಸ್ಟರ್ ಆ್ಯಂಡ್ರೆ (Lucile Randon) ನಿಧನದ ನಂತರ ಇದೀಗ ವಿಶ್ವದ ಹಿರಿಯ ಮಹಿಳೆಯ ಪಟ್ಟಕ್ಕೆ 115 ವಯಸ್ಸಿನ ಮಾರಿಯಾ ಬ್ರ್ಯಾನ್ಯಾಸ್ ಮೊರೆರಾ (María Branyas Morera) ಎಂಬುವವರು ಪಾತ್ರರಾಗಿದ್ದಾರೆ ಎಂದು ಗಿನ್ನೀಸ್ ವಿಶ್ವ ದಾಖಲೆಯು (Guinness World Records) ಘೋಷಿಸಿದೆ. ಮಾರಿಯಾ ಮೂಲತಃ ಅಮೆರಿಕದವು, ಆದರೆ ವಾಸವಾಗಿರುವುದು ಸ್ಪೇನ್ನಲ್ಲಿ.
ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋಗೆ ಮಾರಿಯಾ ಪೋಷಕರು ವಲಸೆಗೆ ಬಂದರು. ಒಂದು ವರ್ಷದ ಬಳಿಕ ಅಂದರೆ 1907ರ ಮಾರ್ಚ್ 4 ರಂದು ಮಾರಿಯಾ ಹುಟ್ಟಿದರು. ಎಂಟು ವರ್ಷದ ನಂತರ ಈ ಕುಟುಂಬ ಸ್ಪೇನ್ಗೆ ತೆರಳಿತು. ಇವರ ಜೀವನಯಾನವನ್ನು ಬ್ಲಾಗ್ ಒಂದರಲ್ಲಿ ದಾಖಲಿಸಲಾಗಿದೆ. ಅದರಲ್ಲಿ, ‘ನನ್ನ ಪ್ರಕಾರ ದೀರ್ಘಾಯಸ್ಸು ಅದೃಷ್ಟ. ಇದು ವಂಶವಾಹಿಗೆ ಸಂಬಂಧಿಸಿದ್ದು. ಕುಟುಂಬ, ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ, ಪ್ರಕೃತಿಯೊಂದಿಗೆ ಒಡನಾಟ, ಭಾವನಾತ್ಮಕ ಸ್ಥಿರತೆ, ನಿಶ್ಚಿಂತೆ, ನಕಾರಾತ್ಮಕ ಮನೋಭಾವದವರಿಂದ ದೂರ ಇರುವುದು ಇವೇ ನನ್ನ ದೀರ್ಘಾಯುಷ್ಯದ ಗುಟ್ಟು’ ಎಂದಿದ್ದಾರೆ ಮಾರಿಯಾ.
ಇದನ್ನೂ ಓದಿ : ಜಗತ್ತಿನ ಅತೀ ಎತ್ತರದ ಮನುಷ್ಯನ ಚಿತ್ರಗಳು ಮತ್ತೆ ಹರಿದಾಡಿದಾಗ
26,000ಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. ಈ ವಯಸ್ಸಿನಲ್ಲಿಯೂ ಇವರು ತುಂಬಾ ಆರೋಗ್ಯವಂತರಂತೆ ಕಾಣುತ್ತಾರೆ ಎಂದಿದ್ದಾರೆ ನೆಟ್ಟಿಗರು. ಇನ್ನೂ ಇವರು 20 ವರ್ಷಕ್ಕಿಂತಲೂ ಹೆಚ್ಚಿಗೆ ಬದುಕಬಹುದು ಎಂದೆನ್ನಿಸುತ್ತಿದೆ ಎಂದಿದ್ಧಾರೆ ಒಬ್ಬರು. ಇವರು 200 ತಲುಪಲಿ ಎಂದಿದ್ದಾರೆ ಮಗದೊಬ್ಬರು. ಇನ್ನೂ ಎಷ್ಟು ಕಳೆಕಳೆಯಾಗಿದ್ದಾರೆ ಈ ಅಜ್ಜಿ ಎಂದು ಇನ್ನೂ ಒಬ್ಬರು ಮುದ್ದಿನಿಂದ ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ