Viral News: ಈ ಗ್ರಾಮದಲ್ಲಿ ಶೇವಿಂಗ್ ಮಾಡಲು ಈ ಬಾರ್ಬರ್ ಬಳಸುವುದು ಚಿನ್ನದ ರೇಜರ್
ಈ ಚಿನ್ನದ ರೇಜರ್ ಅನ್ನು ನೋಡಲು ಸುತ್ತಮುತ್ತಲಿನ ಜನರು ಅಂಗಡಿಗೆ ಬರುತ್ತಾರೆ ಮತ್ತು ಚಿನ್ನದ ರೇಜರ್‌ನಿಂದ ಕ್ಷೌರ ಮಾಡಿಸಿಕೊಳ್ಳುತ್ತಾರೆ. ಆದರೂ ಕೂಡ ಈ ಅಂಗಡಿಯಲ್ಲಿ ಕೇವಲ 100 ರಿಂದ 200 ರೂಪಾಯಿಗೆ ಶೇವ್ ಮತ್ತು ಹೇರ್ ಕಟ್ ಮಾಡಿಸಿಕೊಳ್ಳಬಹುದು.

ಚಿನ್ನದ ಬೆಲೆಗಳು ಕಳೆದ ವಾರ ರಾಕೆಟ್ ವೇಗದಲ್ಲಿ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಆದರೆ ಇಲ್ಲೊಂದು ಗ್ರಾಮದ ಬಾರ್ಬರ್ ತನ್ನ ಚಿನ್ನದ ರೇಜರ್ನಿಂದಲೇ ಸಖತ್ ಸುದ್ದಿಯಲ್ಲಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿಯ ಗಾಂವಬಾಗ್‌ನಲ್ಲಿರುವ ದೇಸಾಯಿ ಸಹೋದರರು ಬಾರ್ಬರ್ ಕೆಲಸವನ್ನು ಕಳೆದ ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಇವರ ಬಾರ್ಬರ್ ಶಾಪ್ ದೇಶದೆಲ್ಲೆಡೆ ಭಾರೀ ಸುದ್ದಿಯಲ್ಲಿದೆ.
ಶಿರಾಳ ತಾಲೂಕಿನ ರಿಲೆಯ ಕೋರ್ ಸಮುದಾಯಕ್ಕೆ ಸೇರಿದ ಅಶೋಕ ಶಂಕರ ದೇಸಾಯಿ ಅವರ ಪೂರ್ವಿಕರು ಬಾರ್ಬರ್ ಶಾಪ್ ಅನ್ನು ದಶಕಗಳಿಂದ ನಡೆಸುತ್ತಾ ಬಂದಿದ್ದಾರೆ. ಅವರ ಇಬ್ಬರು ಮಕ್ಕಳಾದ ಅಮೋಲ್ ಮತ್ತು ಪ್ರದೀಪ್ ಅವರು ಎಸಿ ಹೊಂದಿರುವ ಬಾರ್ಬರ್ ಅಂಗಡಿಯನ್ನು ಪ್ರಾರಂಭಿಸಿದ್ದು, ಇದೀಗಾ ಸುಮಾರು ಎಂಟು ತೊಲಗಳಷ್ಟು ತೂಕದ ಚಿನ್ನದ ರೇಜರ್‌ಗಳನ್ನು ಬಳಸುತ್ತಿದ್ದಾರೆ. ಆದರೂ ಕೂಡ ಈ ಅಂಗಡಿಯಲ್ಲಿ ಕೇವಲ 100 ರೂಪಾಯಿಗೆ ಶೇವ್ ಮತ್ತು ಹೇರ್ ಕಟ್ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ
ಈ ಚಿನ್ನದ ರೇಜರ್ ಅನ್ನು ನೋಡಲು ಸುತ್ತಮುತ್ತಲಿನ ಜನರು ಅಂಗಡಿಗೆ ಬರುತ್ತಾರೆ ಮತ್ತು ಚಿನ್ನದ ರೇಜರ್‌ನಿಂದ ಕ್ಷೌರ ಮಾಡಿಸಿಕೊಳ್ಳುತ್ತಾರೆ. 3.55 ಲಕ್ಷ ವೆಚ್ಚದಲ್ಲಿ 105 ಗ್ರಾಂ ನ 18 ಕ್ಯಾರೆಟ್ ಚಿನ್ನ ಬಳಸಿ ಈ ಸಾಧನವನ್ನು ಮಾಡಿಸಿಕೊಂಡಿದ್ದಾರೆ. ಸಾಂಗ್ಲಿಯ ಚಂದುಕಾಕಾ ಜ್ಯುವೆಲ್ಲರ್ಸ್‌ನವರು, ಪುಣೆಯ ಮಿಥುನ್ ರಾಣಾ ಎಂಬ ಕುಶಲಕರ್ಮಿಯಿಂದ ಈ ಶೆವರ್ ಅನ್ನ ಮಾಡಿಸಿದ್ದಾರೆ. ಇದೀಗಾ ‘ಚಿನ್ನದ ರೇಜರ್’ ಎಲ್ಲೆಡೆ ಚರ್ಚೆಯಾಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ