Viral: ಸಾರ್ವಜನಿಕವಾಗಿ ಕಾಣಿಸಿಕೊಂಡ ಅಪರೂಪದ ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ

| Updated By: Rakesh Nayak Manchi

Updated on: Jun 13, 2022 | 12:05 PM

ಅಪರೂಪದ ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ ಶುಕ್ರವಾರ ಸ್ವಿಸ್ ಮೃಗಾಲಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ಮೃಗಾಲಯದ ಆಮೆಯೊಂದು ಕಳೆದ ತಿಂಗಳಿನಲ್ಲಿ ಎರಡು ಆಮೆ ಮರಿಗಳಿಗೆ ಜನ್ಮ ನೀಡಿತ್ತು. ಈ ಪೈಕಿ ಅಲ್ಬಿನೋ ಗ್ಯಾಲಪಗೋಸ್ ಆಮೆ ಕೂಡ ಒಂದು.

Viral: ಸಾರ್ವಜನಿಕವಾಗಿ ಕಾಣಿಸಿಕೊಂಡ ಅಪರೂಪದ ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ
ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ
Follow us on

ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ (Albino Galapagos Giant Turtle) ಜನಿಸುವ ಮೂಲಕ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದ ಸ್ವಿಸ್ ಮೃಗಾಲಯ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಪರೂಪದ ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ ಶುಕ್ರವಾರ  ಸರ್ವಿಯಾನ್ ಗ್ರಾಮದ ಟ್ರೋಪಿಕ್ವೇರಿಯಂ ಮೃಗಾಲಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ಈ ಮೃಗಾಲಯದಲ್ಲಿ ಆಮೆಯೊಂದು ಕಳೆದ ತಿಂಗಳಿನಲ್ಲಿ ಆಮೆ ಎರಡು  ಮರಿಗಳಿಗೆ ಜನ್ಮ ನೀಡಿತ್ತು. ಈ ಪೈಕಿ ಅಪರೂಪದ ಅಲ್ಬಿನೋ ಗ್ಯಾಲಪಗೋಸ್ ಆಮೆ ಮರಿ ಕೂಡ ಒಂದಾಗಿದೆ. ”ಜಗತ್ತಿನಲ್ಲಿ ಇದೇ ಮೊದಲ ಬಾರಿ ಅಲ್ಬಿನೋ ಗ್ಯಾಲಪಗೋಸ್ ಆಮೆ ಹುಟ್ಟಿ ಸೆರೆಯಲ್ಲಿಡಲಾಗಿದೆ. ಇದುವರೆಗೆ ಕಾಡಿನಲ್ಲಿ ಯಾವುದೇ ಅಲ್ಬಿನೋ ಆಮೆಗಳನ್ನು ಗುಮನಿಸಲಾಗಿಲ್ಲ” ಎಂದು ಮೃಗಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Twitter Trending: ”ಸೆಕ್ಯುಲಾರಿಸಂ ಅನ್ನು ಮುಗಿಸಬೇಕಾಗಿದೆ”, ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಭಾರಿ ಬೆಂಬಲ

ಕಳೆದ ತಿಂಗಳು ಸ್ವಿಸ್ ಮೃಗಾಲಯದಲ್ಲಿ ಜನಿಸಿದ ಆಮೆಗಳ ಪೈಕಿ ಒಂದು ತಾಯಿಯಂತೆ ಕಪ್ಪು ಬಣ್ಣವನ್ನು ಹೊಂದಿದ್ದರೆ, ಇನ್ನೊಂದು ಅಲ್ಬಿನೋ ಗ್ಯಾಲಪಗೋಸ್ ಆಮೆಯಾಗಿದೆ. 100 ಕಿಲೋಗ್ರಾಂಗಳಿಗಿಂತ ಹೆಚ್ಚು (220 ಪೌಂಡ್) ತೂಕವಿರುವ ತಾಯಿ ಆಮೆ, ಫೆ. 11 ರಂದು ಐದು ಮೊಟ್ಟೆಗಳನ್ನು ಇಟ್ಟಿತ್ತು. ಮೇ 1 ರಂದು ಅಲ್ಬಿನೋ ಮರಿ ಮೊಟ್ಟೆಯೊಡೆದಿದೆ. ಮೊಟ್ಟೆಗಳನ್ನು ಇನ್ಕ್ಯುಬೇಟರ್‌ನಲ್ಲಿ ಇಟ್ಟು ಎರಡೂವರೆ ತಿಂಗಳು ಕಳೆದ ನಂತರ ಮೇ 5 ರಂದು ಮತ್ತೊಂದು ಮರಿ ಮೊಟ್ಟೆಯಿಂದ ಹೊರಬಂದಿತ್ತು.

ಇದನ್ನೂ ಓದಿ: Trending: ಯಾವ ಕೈ ಮೇಲೆ ಹಲ್ಲಿ ಬಿದ್ದರೆ ಲಕ್? ಹಲ್ಲಿಗಳ ಮಿಲನ ನೋಡಿದರೆ ಏನನ್ನು ಸೂಚಿಸುತ್ತದೆ ಗೊತ್ತಾ?

ಅಪರೂಪದ ಅಲ್ಬಿನೋ ಆಮೆ ಜನನಕ್ಕೆ ಕಾರಣವಾದ ಹೆಣ್ಣು ಆಮೆ ಮತ್ತು ಗಂಡು ಆಮೆ (ಸುಮಾರು 180 ಕೆಜಿ ತೂಗ ಇದೆ) ಜೋಡಿಯು ಸುಮಾರು 30 ವರ್ಷ ವಯಸ್ಸಿನದ್ದಾಗಿದೆ ಮತ್ತು ಈಗಷ್ಟೇ ಲೈಂಗಿಕ ಪ್ರಬುದ್ಧತೆಯನ್ನು ತಲುಪಿದೆ. ಈ ಜಾತಿಗೆ ಸಂಯೋಗದ ಯಶಸ್ಸಿನ ಪ್ರಮಾಣವು ಕೇವಲ ಶೇ.2 ರಿಂದ ಶೇ.3ರಷ್ಟು ಮಾತ್ರ ಇದೆ. ಮರಿ ಆಮೆಗಳು ಹುಟ್ಟುವಾಗ ಅಂಗೈಯಷ್ಟು ಗಾತ್ರದಷ್ಟು ಇರುತ್ತದೆ ಮತ್ತು ಸುಮಾರು 50 ಗ್ರಾಂ ತೂಗುತ್ತವೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ