Trending: ತಡವಾಗಿ ಬಂದ ಫುಡ್ ಡೆಲಿವೆರಿ ಬಾಯ್ ಕಂಡು ಅಚ್ಚರಿಗೊಂಡ ಗ್ರಾಹಕ

ಬೆಂಗಳೂರಿನ ಓರ್ವ ಗ್ರಾಹಕ ಆಹಾರ ಆರ್ಡರ್ ಮಾಡಿದ್ದಾನೆ. ಆದರೆ ಆರ್ಡರ್ ತಲುಪುವಾಗ ತಡವಾಗಿದೆ. ಆಹಾರ ವಿತರಕನ ಮುಂದೆ ವಿಳಂಬದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಲು ಮುಂದಾಗಿದ್ದ ಗ್ರಾಹಕ, ಆ ವ್ಯಕ್ತಿಯನ್ನು ನೋಡಿ ಕ್ಷಮೆ ಕೇಳಿದ್ದಾರೆ. ಏಕೆಂದರೆ ಆ ವ್ಯಕ್ತಿ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಯಾಗಿದ್ದಾರೆ.

Trending: ತಡವಾಗಿ ಬಂದ ಫುಡ್ ಡೆಲಿವೆರಿ ಬಾಯ್ ಕಂಡು ಅಚ್ಚರಿಗೊಂಡ ಗ್ರಾಹಕ
ಆಹಾರ ವಿತರಕ ಕೃಷ್ಣಪ್ಪ ರಾಥೋಡ್
Follow us
TV9 Web
| Updated By: Rakesh Nayak Manchi

Updated on: Aug 12, 2022 | 6:52 PM

ಆಹಾರ ವಿತರಣಾ ಅಪ್ಲಿಕೇಶನ್​ಗಳು ಪ್ರಾರಂಭವಾದ ನಂತರ ಆಹಾರ ಪ್ರಿಯರು ತನ್ನಿಷ್ಟದ ಆಹಾರವನ್ನು ಮನೆಯಲ್ಲೇ ಕುಳಿತುಕೊಂಡು ಸೇವಿಸುವಂತಾಗಿದೆ. ಗ್ರಾಹಕರನ್ನು ತೃಪ್ತಿ ಪಡಿಸುವ ಆಹಾರದ ಹೊರತಾಗಿ ಆಹಾರ ವಿತರಕರೂ ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸಿ ಗ್ರಾಹಕರನ್ನು ಸಂತೃಪ್ತಿ ಪಡಿಸಬೇಕು. ಅಹಿತಕರ ಹವಾಮಾನ, ಟ್ರಾಫಿಕ್ ದಟ್ಟಣೆ ಮತ್ತು ಕಷ್ಟಕರವಾದ ರಸ್ತೆಗಳ ನಡುವೆಯೂ ಗ್ರಾಹಕರಿಗೆ ಆಹಾರವನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತಾರೆ. ಅದಾಗ್ಯೂ ಕೆಲವೊಮ್ಮೆ ತಡವಾಗಿ ಆಹಾರ ತಲುಪಿಸಿದ್ದೂ ಇದೆ. ಇಂತಹ ಘಟನೆ ಬೆಂಗಳೂರಿನಲ್ಲೊಂದು ನಡೆದಿದ್ದು, ಈ ಪ್ರಸಂಗವನ್ನು ವಿಶೇಷವಾಗಿ ಗುರಿತಿಸಲೂ ಒಂದು ಕಾರಣವಿದೆ. ಬೆಂಗಳೂರಿನ ಈ ಡೆಲಿವರಿ ಬಾಯ್ ಒಬ್ಬರು ಗ್ರಾಹಕರಿಗೆ ತಡವಾಗಿ ಆಹಾರವನ್ನು ವಿತರಿಸಿದ್ದಾರೆ. ತನ್ನ ಕಣ್ಣೆದುರು ಕಾಣಿಸಿಕೊಳ್ಳುವ ಮುನ್ನ ಮೂಗು ಮುರಿಯುತ್ತಿದ್ದ ಆಹಾರ ಆರ್ಡರ್ ಮಾಡಿದ ಗ್ರಾಹಕ, ಆಹಾರ ವಿತರಕ ಕಣ್ಣೆದುರಿಗೆ ಕಾಣಿಸುತ್ತಿದ್ದಂತೆ ಅಚ್ಚರಿಗೊಂಡು ಕ್ಷಮೆಯೂ ಕೇಳಿದ್ದಾರೆ. ಏಕೆಂದರೆ ಆಹಾರ ವಿತರಕ ಎರಡು ಊರುಗೋಲು ಹಿಡಿದುಕೊಂಡು ಬಂದಿದ್ದಾರೆ. ಅಂದರೆ ಆ ವ್ಯಕ್ತಿ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡುವ ಆಹಾರ ವಿತರಕ ಕೃಷ್ಣಪ್ಪ ರಾಥೋಡ್ ಅವರ ಒಂದು ಕಾಲು ವೈಕಲ್ಯವನ್ನು ಹೊಂದಿದೆ. ಇಂತಹ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿ ವಿತರಣಾ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ತನ್ನನ್ನು ತಾನು ಸಮತೋಲನಗೊಳಿಸಿಕೊಳ್ಳುತ್ತಾ 40 ರ ಹರೆಯದಲ್ಲೂ ತನ್ನ ಮೂರು ಮಕ್ಕಳಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ.

ಒಂದು ಕಾಲು ಕೈಕೊಟ್ಟರೇನಂತೆ ಇನ್ನೊಂದು ಕಾಲು ಇದೆ, ದುಡಿಯುವ ಛಲ ಇದೆ, ಕೈಗಳಲ್ಲಿ ಶಕ್ತಿ ಇದೆ ಎನ್ನುತ್ತಾ ಕೆಲಸ ಮಾಡುತ್ತಿರವ ಕೃಷ್ಣಪ್ಪ ಅವರನ್ನು ನೋಡಿ ಆರ್ಡರ್ ಮಾಡಿದ ಆಹಾರಕ್ಕಾಗಿ ಅಸಹನೆಯಿಂದ ಕಾಯುತ್ತಿದ್ದ ಗ್ರಾಹಕನ ಹೃದಯವನ್ನು ಕರಗಿಸಿತು. ಲಿಂಕ್ ಬಳಕೆದಾರ ರೋಹಿತ್ ಕುಮಾರ್ ಸಿಂಗ್ ಅವರು ತಮ್ಮ ಅನುಭವವನ್ನು ಸುದೀರ್ಘವಾಗಿ ಬರೆದು ಹಂಚಿಕೊಂಡಿದ್ದಾರೆ.

ಆರ್ಡರ್ ತಲುಪಬೇಕಾದ ಸಮಯದ ಮಿತಿ ಮೀರಿದ ನಂತರ ಅಸಹನೆ ಹೊಂದಲು ಪ್ರಾರಂಭಿಸಿದೆ ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿರುವ ರೋಹಿತ್, “ನಾನು ಡೆಲಿವರಿ ಬಾಯ್‌ಗೆ ಕರೆ ಮಾಡಿದೆ ಮತ್ತು ತುಂಬಾ ಸಾಂತ್ವನದ ಸ್ವರದಿಂದ ಅವರು ‘ನಾನು ಸ್ವಲ್ಪ ಸಮಯದ ನಂತರ ಬರುತ್ತೇನೆ ಸರ್’ ಎಂದು ಹೇಳಿದರು. ಇದಾಗಿ ಕೆಲವು ನಿಮಿಷಗಳು ಕಳೆದರೂ ಆ ವ್ಯಕ್ತಿ ಇನ್ನೂ ಬಂದಿಲ್ಲ. ಹೀಗಾಗಿ ನಾನು ಮತ್ತೆ ಕರೆ ಮಾಡಿ ಸಹೋದರ ದಯವಿಟ್ಟು ಬೇಗ ಬಾ, ನನಗೆ ಹಸಿವಾಗ್ತಿದೆ ಎಂದು ಹೇಳಿದೆ. ಅವರು ಮತ್ತೊಮ್ಮೆ ತುಂಬಾ ಸಾಂತ್ವನದ ಧ್ವನಿಯಲ್ಲಿ ಪ್ರತಿಕ್ರಿಯಿಸುತ್ತಾ ಕೇಲವ 5 ನಿಮಿಷಗಳನ್ನು ಹೇಳಿದರು” ಬರೆದಿದ್ದಾರೆ.

ಕೆಲವು ನಿಮಿಷಗಳ ನಂತರ ಕೃಷ್ಣಪ್ಪ ಅವರು ಗ್ರಾಹಕನ ಮನೆ ಮುಂದೆ ಬಂದಾಗ ರೋಹಿತ್ ಅವರು ವಿಳಂಬದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಲು ಮುಂದಾದರು. “ನಾನು ಬಾಗಿಲು ತೆರೆದಾಗ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಊರುಗೊಲನ್ನು ಹಿಡಿದುಕೊಂಡು ನನ್ನನ್ನು ನೋಡಿ ನಗುತ್ತಿರುವುದನ್ನು ನಾನು ನೋಡಿದೆ. ಇವರನ್ನು ನೋಡಿ ಒಂದು ಸೆಕೆಂಡು ಅಚ್ಚರಿಗೊಂಡೆ. ತಕ್ಷಣವೇ ಕ್ಷಮೆಯಾಚಿಸಿದ್ದೇನೆ ಮತ್ತು ಸಂಭಾಷಣೆ ನಡೆಸಲು ಪ್ರಯತ್ನಿಸಿದೆ” ಎಂದು ರೋಹಿತ್ ಹೇಳಿದ್ದಾರೆ.

ರೋಹಿತ್ ಅವರು ಕೃಷ್ಣಪ್ಪ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಾಗ ತಮ್ಮ ಆರ್ಥಿಕ ಸ್ಥಿತಿಯಿಂದಾಗಿ ಮಕ್ಕಳನ್ನು ಬೆಂಗಳೂರಿಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ. ನಂತರ “ನಾವು ಸುಮಾರು 2-3 ನಿಮಿಷಗಳ ಕಾಲ ಈ ಸಂಭಾಷಣೆಯನ್ನು ನಡೆಸಿದ್ದೇವೆ ಮತ್ತು ಇದ್ದಕ್ಕಿದ್ದಂತೆ ಅವರು ‘ಸರ್ ನನ್ನ ಮುಂದಿನ ವಿತರಣೆಗೆ ತಡವಾಗುತ್ತಿದೆ’ ಎಂದು ಹೇಳಿ ನನಗೆ ಉತ್ತರಿಸಲು ನಿಜವಾಗಿಯೂ ಕಷ್ಟಕರವಾದ ಹಲವು ಪ್ರಶ್ನೆಗಳನ್ನು ಬಿಟ್ಟು ಹೊರಟು ಹೋದರು” ಎಂದು ರೋಹಿತ್ ಬರೆದುಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಮಾಹಿತಿ ಓದಿದ ನೆಟ್ಟಿಗರ ಪೈಕಿ ಅನೇಕರು ದೇಣಿಗೆ ನೀಡಲು, ಅವರಿಗೆ ಕೆಲಸ ನೀಡಲು ಸಿದ್ಧರಿರುವುದಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರನು ಕಾಮೆಂಟ್ ಮಾಡಿ, “ಅವರಿಗೆ ಉತ್ತಮವಾದ ಪ್ರಾಸ್ಥೆಟಿಕ್ಸ್ ಪಡೆಯುವ ಮೂಲಕ ನಾವು ಅವನ ಚಲನಶೀಲತೆಯನ್ನು ಸುಧಾರಿಸಬಹುದೇ? ನೀವು ನೀಡಿದ ಸಂಖ್ಯೆಗೆ ನಾನು ಅವನಿಗೆ ಕರೆ ಮಾಡಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್