Viral: ಮಹಿಳೆಯರು ತಡರಾತ್ರಿಯಲ್ಲಿ ಓಡಾಡಬಾರದು ಎಂದವನಿಗೆ ನೆಟ್ಟಿಗರಿಂದ ಪಾಠ

Woman : ದಕ್ಷಿಣ ದೆಹಲಿಯ ಕೆಫೆಯೊಂದರಲ್ಲಿ ಜನಾಂಗೀಯ ಕಿರುಕುಳಕ್ಕೆ ಒಳಗಾದ ಮಹಿಳೆಯೊಬ್ಬರು ತಮ್ಮ ಅನುಭವವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಆ ಪೋಸ್ಟ್​ಗೆ ಉತ್ತರಿಸಿದ ರೀತಿ, ಜನಸಾಮಾನ್ಯರನ್ನು ಕೆರಳಿಸಿದೆ.  

Viral: ಮಹಿಳೆಯರು ತಡರಾತ್ರಿಯಲ್ಲಿ ಓಡಾಡಬಾರದು ಎಂದವನಿಗೆ ನೆಟ್ಟಿಗರಿಂದ ಪಾಠ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 13, 2022 | 10:44 AM

South Delhi : ದಕ್ಷಿಣ ದೆಹಲಿಯ ಕೆಫೆಯೊಂದರಲ್ಲಿ ನಡೆದ ಜನಾಂಗೀಯ ಕಿರುಕುಳದ ಬಗ್ಗೆ ಮಹಿಳೆಯೊಬ್ಬರು ತಾವು ಅನುಭವಿಸಿದ ಸಂಕಟವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಆ ಪೋಸ್ಟ್​ಗೆ ಉತ್ತರಿಸಿದ ರೀತಿ, ಜನಸಾಮಾನ್ಯರನ್ನು ಕೆರಳಿಸಿದೆ. ಹಲವಾರು ಜನರು ಆಕೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ಬೆಂಬಲಿಸಿದ್ದಾರೆ. ನುರಾಂಗ್ ರೀನಾ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌.ಡಿ ವಿದ್ಯಾರ್ಥಿನಿ. ಅವರು ದಕ್ಷಿಣ ದೆಹಲಿಯಲ್ಲಿರುವ ಕೆಫೆಯೊಂದಕ್ಕೆ ರಾತ್ರಿ ಹೋದಾಗ, ಇಬ್ಬರು ಪುರುಷರು ಜನಾಂಗಿಯ ಕಿರುಕುಳ ನೀಡಿದ್ದು, ಮತ್ತೊಮ್ಮೆ ವ್ಯಕ್ತಿಯೊಬ್ಬ ಪಾರ್ಕಿನಲ್ಲಿ ತೊಂದರೆ ನೀಡಿದ್ದು ಹೀಗೆ ಎಲ್ಲವನ್ನೂ ಆಕೆ ವಿವರವಾಗಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆಗ ಒಬ್ಬ ಟ್ವಿಟರ್ ಖಾತೆದಾರರು, ‘ರಾತ್ರಿ ಹೆಣ್ಣುಮಕ್ಕಳು ಓಡಾಡುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ!

‘ದೆಹಲಿಯ ದಕ್ಷಿಣ ಭಾಗದಲ್ಲಿರುವ ಆ ಕೆಫೆಗೆ ಹೋಗುವುದನ್ನು ನಾನು ನಿಲ್ಲಿಸಿದ್ದೇನೆ. ಅಲ್ಲಿ ಇಬ್ಬರು ಭಾರತೀಯ ಧರ್ಮಾಂಧರು ಕಳೆದ ತಿಂಗಳು ನನಗೆ ಜನಾಂಗೀಯ ಕಿರುಕುಳ ನೀಡಿದ್ದಾರೆ. ಅಲ್ಲದೆ ನಿನ್ನೆ ಒಬ್ಬ ವ್ಯಕ್ತಿ ಸಾರ್ವಜನಿಕ ಉದ್ಯಾನವನದಲ್ಲಿ ನನ್ನನ್ನು ಬಲವಂತವಾಗಿ ಹಿಂಬಾಲಿಸಲು ಪ್ರಯತ್ನಿಸಿದ್ದಾನೆ. ನಾನು ಅಂದರೆ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು ನಿಲ್ಲಿಸಬೇಕೆ? ನನ್ನನ್ನು ಅಂದರೆ ‘ನಮ್ಮನ್ನು’ ನಾವು ಬಂಧಿಸಿಟ್ಟುಕೊಳ್ಳಬೇಕೆ?’ ಎಂದು ರೀನಾ ಪೋಸ್ಟ್​ನಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ನನ್ನ ತಿಳಿವಳಿಕೆಯ ಪ್ರಕಾರ, ಎಲ್ಲಾ ಹೆಣ್ಣುಮಕ್ಕಳು ಬಹುತೇಕ ಇಂಥ ಕಿರುಕುಳವನ್ನು ಪ್ರತೀದಿನವೂ ಸಹಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. ಇದು ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ’ ಎಂದು ಮತ್ತೊಂದು ಟ್ವಿಟರ್​ ಪೋಸ್ಟ್​ನಲ್ಲಿ ರೀನಾ ಹೇಳಿಕೊಂಡಿದ್ದಾರೆ. ಈ ಪೋಸ್ಟ್​ಗೆ ಅನೇಕ ಮೆಚ್ಚುಗೆಗಳು ವ್ಯಕ್ತವಾಗಿವೆ. ನೆಟ್ಟಿಗರು ರೀನಾ ಅವರಿಗೆ ಬೆಂಬಲ ವ್ಯಕ್ತಪಡಿಸುವಾಗ ಸನತ್ ಕುಮಾರ್ ಪೌಲ್ ಎಂಬ ವ್ಯಕ್ತಿ, ‘ನೀವು ಹೆಣ್ಣುಮಕ್ಕಳು ತಡರಾತ್ರಿಯಲ್ಲಿ ಅಪರಿಚಿತ ರಸ್ತೆಗಳಲ್ಲಿ, ಸ್ಥಳಗಳಲ್ಲಿ ತಿರುಗಾಡುವುದನ್ನು ಬಿಟ್ಟು ನಿಮ್ಮನ್ನು ನೀವು ರಕ್ಷಿಸಿಕೊಂಡು ಸಂತೋಷದಿಂದ ಭಾರತದಲ್ಲಿ ಇರಬೇಕೆಂದು ನಾವು ಬಯಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಸಾಕಷ್ಟು ನೆಟ್ಟಿಗರನ್ನು ಕೆರಳಿಸಿದೆ.

‘ಅಂಕಲ್, ರೀನಾ ಮೂಲತಃ ಅರುಣಾಚಲ ಪ್ರದೇಶದವರು ಹೊರದೇಶದವರಲ್ಲ. ಭಾರತದ ನಕ್ಷೆಯನ್ನು ಗಮನಿಸಿ’ ಎಂದು ಅರುಣಾಚಲ ಪ್ರದೇಶವನ್ನು ಗುರುತು ಹಾಕಿ ಗಮನ ಸೆಳೆದಿದ್ದಾರೆ ಒಬ್ಬ ಟ್ವಿಟರ್ ಖಾತೆದಾರರು.

‘ರೀನಾ, ಭಾರತದವರು. ತಾವು ಸುರಕ್ಷಿತವಾಗಿರಲು ತಮ್ಮನ್ನು ತಾವು ಬಂಧನದಲ್ಲಿರಿಸಿಕೊಳ್ಳಬೇಕಿಲ್ಲ. ಹಾಗಿದ್ದಲ್ಲಿ ನಿರ್ದಿಷ್ಟ ಸಮಯದ ನಂತರ ಪುರುಷರು ಓಡಾಡದಂತೆ ನಿರ್ಬಂಧ ಹೇರಿ. ಆಗ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿರುತ್ತಾರೆ.’ ಎಂದಿದ್ದಾರೆ ಮತ್ತೊಬ್ಬ ಟ್ವಿಟರ್ ಖಾತೆದಾರರು.

ನೀವೇನು ಹೇಳುತ್ತೀರಿ?

ಇನ್ನಷ್ಟು ಇಂಥ ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:41 am, Sat, 13 August 22

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’