Viral : ಕೊಟ್ಟುಪಡೆವ ಪ್ರೀತಿ ಈ ಕೊಡೆಯ ಕೆಳಗೆ
Rain : ಈ ಟ್ರಾಫಿಕ್ಕಿನಲ್ಲಿ ಈ ಮಳೆಯಲ್ಲಿ ಇವರಿಬ್ಬರೂ ರಸ್ತೆ ದಾಟುವ ಈ ವಿಡಿಯೋ 23 ಮಿಲಿಯನ್ ನೆಟ್ಟಿಗರ ಮನ ಮೃದುಗೊಳಿಸಿದೆ. ಯಾರಿಗೂ ಅನ್ನಿಸುತ್ತದೆ ಅಲ್ಲವೆ ಕೊನೆತನಕ ಹೀಗೆ ಅನ್ಯೋನ್ಯವಾಗಿರಬೇಕು ಎಂದು.
Love : ಪ್ರೀತಿ ಎಂದರೇನು? ವ್ಯಾಖ್ಯಾನಗಳು ಸಾವಿರಾರು ಇರಬಹುದು. ಆದರೆ ಇಲ್ಲಿರುವ ವಿಡಿಯೋ ನೋಡಿದರೆ ಇದೇ ಸೂಕ್ತ ವ್ಯಾಖ್ಯಾನ ಎನ್ನಿಸದೇ ಇರದು. ಆಪ್ತವಾಗಿ ಹೀಗೆ ಕೊನೆಯತನಕವೂ ಜೊತೆಯಾಗಿಯೇ ಇರುವುದು, ಪರಸ್ಪರ ಕಾಳಜಿಯಿಂದ ಇರುವುದು. ಪರಸ್ಪರ ಕೊಟ್ಟು ಪಡೆಯುವುದರೊಳಗಿರುವ ಎಲ್ಲ ಏರಿಳಿತಗಳನ್ನು ನುಂಗಿ ಪ್ರೀತಿಯ ನಂದಾದೀಪವನ್ನಷ್ಟೇ ತೇಲಿಸುವುದು. ಈ ತೇಲಿಸುವಿಕೆಯ ನೋವು-ನಷ್ಟಗಳು ಅವರವರಿಗೇ ಗೊತ್ತು. ಅದೊಂದು ಅದ್ಭುತ ಅನುಭೂತಿ. ಈಗಿಲ್ಲಿ ನೋಡಿ ಈ ಮಳೆಗಾಲದಲ್ಲಿ ಈ ಅಜ್ಜ, ಅಜ್ಜಿಗೆ ಛತ್ರಿ ಹಿಡಿದುಕೊಂಡು ಮಾತನಾಡಿಕೊಂಡು ರಸ್ತೆ ದಾಟಿಕೊಂಡು ತಮ್ಮದೇ ಲೋಕದಲ್ಲಿ ಹೋಗುತ್ತಿದ್ದಾರೆ. ಎಂಥ ಚೆಂದ ಅಲ್ಲವಾ?
View this post on Instagram
ಈ ವಿಡಿಯೋವನ್ನು ಫೋಟೋಗ್ರಾಫರ್ ಮತ್ತು ಡಿಜಿಟಲ್ ಕಂಟೆಂಡ್ ಕ್ರಿಯೇಟರ್ ಆಸೀಫ್ ಖಾನ್ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದಾರೆ 26 ಮಿಲಿಯನ್ ವೀಕ್ಷಣೆ ಮತ್ತು 13 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಅನೇಕ ನೆಟ್ಟಿಗರು ಈ ಹೃದಯಂಗಮ ದೃಶ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.
ಪ್ರೀತಿಸಿದ, ಜೊತೆಯಾಗಿರುವ ಯಾರಿಗೆ ತಾನೆ ಇಷ್ಟವಿಲ್ಲ ಹೀಗೆ ಇಷ್ಟು ವಯಸ್ಸಾಗುವ ತನಕವೂ ಅನ್ಯೋನ್ಯವಾಗಿರಬೇಕೆಂದು?
ಇನ್ನಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ