ನೈಜೀರಿಯನ್ ಯುವತಿಯನ್ನು ಭಾರತೀಯ ಮದುಮಗಳಂತೆ ತಯಾರು ಮಾಡಿದ್ದನ್ನು ತೋರುವ ವಿಡಿಯೋ ಇಂಟರ್ನೆಟ್ ನಲ್ಲಿ ಭಾರೀ ಹಿಟ್!

ಕಣ್ರೆಪ್ಪೆ ಸೇರಿದಂತೆ ಮುಖದ ಅಲಂಕಾರದಿಂದ ಆರಂಭಿಸಿ ಹಳದಿ ಬಣ್ಣದ ಲೆಹೆಂಗಾ ಮತ್ತು ಕೆಂಪು ವರ್ಣದ ಬಳೆಗಳನ್ನು ತೊಡಿಸಿ ನೈಜೀರಿಯನ್ ಮಹಿಳೆಗೆ ಲೂಧಿಯಾನ ನಿವಾಸಿ ನೇಹಾ ಸಂಪೂರ್ಣವಾಗಿ ಭಾರತೀಯ ವಧುವಿನ ಲುಕ್ ನೀಡಿದ್ದಾರೆ.

ನೈಜೀರಿಯನ್ ಯುವತಿಯನ್ನು ಭಾರತೀಯ ಮದುಮಗಳಂತೆ ತಯಾರು ಮಾಡಿದ್ದನ್ನು ತೋರುವ ವಿಡಿಯೋ ಇಂಟರ್ನೆಟ್ ನಲ್ಲಿ ಭಾರೀ ಹಿಟ್!
ನೈಜೀರಿಯಾದ ಯುವತಿ ತನ್ನ ಮದುವೆಗೆ ಭಾರತೀಯ ಯುವತಿಯಂತೆ ತಯಾರಾಗಿದ್ದಾಳೆ!
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2022 | 1:19 PM

ಭಾರತೀಯ ಮದುವೆಗಳಲ್ಲಿ (weddings) ಕಾಣುವ ಸಾಂಪ್ರದಾಯಿಕ (traditional) ಆಚರಣೆ,ಪದ್ಧತಿಗಳು, ಅದ್ಧೂರಿತನ, ವೈಭವ ಸಡಗರ ಬೇರೆ ದೇಶಗಳ ಮದುವೆಗಳಲ್ಲಿ ಕಾಣಸಿಗವು ಮಾರಾಯ್ರೇ. ಮದುವೆಗೆ ವಧು ಮತ್ತು ವರರನ್ನು ತಯಾರು ಮಾಡೋದಿದೆಯಲ್ಲ, ಅದಕ್ಕೆ ಗಂಟೆಗಳೇ ಬೇಕು. ಅವರು ತಯಾರಾಗಿ ಮಂಟಪಕ್ಕೆ ಬಂದಾಗ ಅಲ್ಲಿ ನೆರೆದಿರುವ ನೆಂಟರಿಷ್ಟರು, ಸ್ನೇಹಿತರು, ಅತಿಥಿಗಳು ಅವರ ಮೇಲಿಂದ ದೃಷ್ಟಿ ಸರಿಸಲಾರರು. ಅವರ ರೂಪ ಹೇಗೇ ಇರಲಿ, ಮದುವೆ ಉಡುಗೆ ತೊಡುಗೆ ಅವರಿಗೆ ಸುಂದರವಾಗಿಸುತ್ತದೆ, ವಿಶೇಷ ಕಳೆ ನೀಡುತ್ತದೆ.

ಮದುಮಗಳ ಮೇಲೆ ಹತ್ತಾರು ಬಗೆಯ ಆಭರಣಗಳನ್ನು ನೀವು ನೋಡಬಹುದು. ಆಕೆಯ ಮದುವಣಗಿತ್ತಿ ಅಲಂಕಾರ ಬೇರೆ ದೇಶದ ಯುವತಿಯರನ್ನು ಪ್ರಭಾವಕ್ಕೀಡು ಮಾಡಿ ತಾನೂ ಹಾಗೆಯೇ ಸಿಂಗರಿಸಿಕೊಳ್ಳಬೇಕೆಂಬ ಪ್ರೇರೇಪಣೆ ಹುಟ್ಟಿದ್ದರೆ ಅದರಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ ಮಾರಾಯ್ರೇ. ಆಫ್ರಿಕನ್ ಮೂಲದ ಯುವತಿಯೊಬ್ಬಳು ತನ್ನ ಮದುವೆಗೆ ಭಾರತೀಯ ವಧುವಂತೆ ಸಿದ್ಧಳಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ.

ನೈಜೀರಿಯಾದ ಈ ಮಹಿಳೆಯ ವಿಡಿಯೋವನ್ನು ಪಂಜಾಬಿನ ಮೇಕಪ್ ಕಲಾವಿದೆ ನೇಹಾ ವರೈಚ್ ಗ್ರೋವರ್ ಎನ್ನುವವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯುವತಿಯ ಅಲಂಕಾರ, ಉಡುಗೆ-ತೊಡುಗೆ ತೋರಿಸುವ ವಿಡಿಯೋ 5 ದಿನಗಳ ಹಿಂದೆ ಪೋಸ್ಟ್ ಆಗಿದೆ.

ಕಣ್ರೆಪ್ಪೆ ಸೇರಿದಂತೆ ಮುಖದ ಅಲಂಕಾರದಿಂದ ಆರಂಭಿಸಿ ಹಳದಿ ಬಣ್ಣದ ಲೆಹೆಂಗಾ ಮತ್ತು ಕೆಂಪು ವರ್ಣದ ಬಳೆಗಳನ್ನು ತೊಡಿಸಿ ನೈಜೀರಿಯನ್ ಮಹಿಳೆಗೆ ಲೂಧಿಯಾನ ನಿವಾಸಿ ನೇಹಾ ಸಂಪೂರ್ಣವಾಗಿ ಭಾರತೀಯ ವಧುವಿನ ಲುಕ್ ನೀಡಿದ್ದಾರೆ.

ವಿಡಿಯೋದೊಂದಿಗೆ ಪೋಸ್ಟ್ ಮಾಡಿರುವ ಶೀರ್ಷಿಕೆಯಲ್ಲಿ ನೇಹಾ ಅವರು, ‘ಒಬ್ಬ ಆಫ್ರಿಕನ್ ಯುವತಿಯನ್ನು ಭಾರತೀಯ ವಧುವಿನಂತೆ ಸಿಂಗರಿಸುವುದು ನನ್ನ ಕನಸಾಗಿತ್ತು. ಅದಕ್ಕಾಗಿ ನಾನು ಒಬ್ಬ ಆಫ್ರಿಕನ್ ಮಾಡೆಲ್ ಹುಡುಕಾಟದಲ್ಲಿದ್ದೆ ಆದರೆ ನನಗೆ ಮದುವೆಯಾಗಬೇಕಿದ್ದ ಯುವತಿಯೇ ಸಿಕ್ಕುಬಿಟ್ಟಳು!! ಆಕೆಯನ್ನು ಮದುವಣಗಿತ್ತಿಯಾಗಿ ತಯಾರು ಮಾಡುವ ಅವಕಾಶ ಸಿಕ್ಕಿದ್ದು ಅದೃಷ್ಟವೆಂದೇ ಭಾವಿಸುತ್ತೇನೆ,’ ಎಂದು ಬರೆದುಕೊಂಡಿದ್ದಾರೆ.

ಸದರಿ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ 4.6 ಲಕ್ಷ ಲೈಕ್ ಮತ್ತು 54 ಲಕ್ಷ ವ್ಯೂಸ್ ಗಳನ್ನು ಸಂಪಾದಿಸಿದೆ. ನೆಟ್ಟಿಗರು ನೈಜೀರಿಯನ್ ಯುವತಿಯ ಸೌಂದರ್ಯ ಮತ್ತು ಅಲಂಕಾರವನ್ನು ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ.

ಒಬ್ಬ ಯೂಸರ್ ‘ಆಕೆ ಬಹಳ ಮುದ್ದುಮುದ್ದಾಗಿ, ಸುಂದರವಾಗಿ ಕಾಣಿಸುತ್ತಿದ್ದಾಳೆ, ಎಲ್ಲ ಶ್ರೇಯಸ್ಸು ಆಕೆಯನ್ನು ತಯಾರು ಮಾಡಿದ ಬ್ಯೂಟಿಷಿಯನ್ ಗೆ ಸಲ್ಲಬೇಕು,’ ಅಂತ ಹೇಳಿದರೆ ಇನ್ನೊಬ್ಬರು, ‘ಓ ಮೈ ಗಾಡ್! ಅದ್ಭುತ, ಅಪ್ಪಟ ಸುಂದರಿ,’ ಎಂದು ಉದ್ಗರಿಸಿದ್ದಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್