Viral News: ಸತ್ತು ಹೋದ ಎಂದು ಭಾವಿಸಿ ಸಮಾಧಿ ಮಾಡಿದ ವ್ಯಕ್ತಿ ಮರುದಿನ ಪ್ರತ್ಯಕ್ಷ; ಆತಂಕಗೊಂಡ ಕುಟುಂಬಸ್ಥರು

| Updated By: Digi Tech Desk

Updated on: Apr 07, 2022 | 11:10 AM

ಮೂರ್ತಿ ಅವರ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅದೇ ರಾತ್ರಿ ಪಾರ್ಥಿವ ಶರೀರವನ್ನು ಸಮಾಧಿ ಮಾಡಿದ್ದಾರೆ. ಆದರೆ, ಸೋಮವಾರ ಸಂಜೆ ಮೂರ್ತಿ ಮನೆಗೆ ಬಂದಿದ್ದು ನೋಡಿ ಕುಟುಂಬಸ್ಥರಿಗೆ ಆಘಾತ ತಂದಿದೆ.

Viral News: ಸತ್ತು ಹೋದ ಎಂದು ಭಾವಿಸಿ ಸಮಾಧಿ ಮಾಡಿದ ವ್ಯಕ್ತಿ ಮರುದಿನ ಪ್ರತ್ಯಕ್ಷ; ಆತಂಕಗೊಂಡ ಕುಟುಂಬಸ್ಥರು
ಸಾಂದರ್ಭಿಕ ಚಿತ್ರ
Follow us on

ತಮಿಳುನಾಡಿನ (Tamil Nadu) ಬಂಗಳಪುದೂರಿನ ಕುಟುಂಬವೊಂದು ಸತ್ತು ಸಮಾಧಿ ಮಾಡಲಾಗಿದೆ ಎಂದು ಭಾವಿಸಲಾದ ಅವರ ಸದಸ್ಯರೊಬ್ಬರು ಮರುದಿನ ಜೀವಂತವಾಗಿ ಬಂದಾಗ ಆಘಾತಕ್ಕೊಳಗಾಗಿರುವಂತಹ ಘಟನೆ ನಡೆದಿದೆ. 55 ವರ್ಷದ ವ್ಯಕ್ತಿಯನ್ನು ಭಾನುವಾರ ಸಂಜೆ ಅವರು ಸಮಾಧಿ ಮಾಡಿದ್ದಾರೆ. ಆದರೆ ಸೋಮವಾರ ಸಂಜೆ ಅವರು ತಮ್ಮ ಮನೆಗೆ ಮರಳಿದರು ಎಂದು ಪ್ರಮುಖ ಪ್ರಕಟಣೆಗಳು ವರದಿ ಮಾಡಿವೆ. ಪೊಲೀಸರ ಪ್ರಕಾರ, ದಿನಗೂಲಿ ಕಾರ್ಮಿಕನನ್ನು ಮೂರ್ತಿ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಕಬ್ಬು ಕಟಾವು ಮಾಡಲು ತಿರುಪುರಕ್ಕೆ ತೆರಳಿದ್ದರು. ಭಾನುವಾರ ಬೆಳಿಗ್ಗೆ, ಮೂರ್ತಿ ಅವರ ಮಗ ಎಂ. ಕಾರ್ತಿಗೆ ಸಂಬಂಧಿಕರಿಂದ ಫೋನ್ ಕರೆ ಬಂದಿದ್ದು, ಅವರ ತಂದೆ ಸತ್ಯಮಂಗಲಂ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಕಾರ್ತಿ ಘಟನಾ ಸ್ಥಳಕ್ಕೆ ಧಾವಿಸಿ ಅದು ತನ್ನ ತಂದೆಯ ಶವ ಎಂದು ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಸತ್ಯಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾನೂನು ಪ್ರಕ್ರಿಯೆಗಳ ನಂತರ ಅದೇ ದಿನ ಸಂಜೆ ಕಾರ್ತಿಗೆ ಹಸ್ತಾಂತರಿಸಿದ್ದಾರೆ.

ಮೂರ್ತಿ ಅವರ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅದೇ ರಾತ್ರಿ ಪಾರ್ಥಿವ ಶರೀರವನ್ನು ಸಮಾಧಿ ಮಾಡಿದ್ದಾರೆ. ಆದರೆ, ಸೋಮವಾರ ಸಂಜೆ ಮೂರ್ತಿ ಮನೆಗೆ ಬಂದಿದ್ದು ನೋಡಿ ಕುಟುಂಬಸ್ಥರಿಗೆ ಆಘಾತ ತಂದಿದೆ. ಆತ ಮನೆಗೆ ಪ್ರವೇಶಿಸಿದಾಗ ನಮ್ಮ ಕಣ್ಣುಗಳಿಂದ ನಮಗೆ ನಂಬಲಾಗಲಿಲ್ಲ. ಸತ್ತ ವ್ಯಕ್ತಿ ನನ್ನ ತಂದೆಯಂತೆಯೇ ಇದ್ದನು. ನನ್ನ ತಂದೆಯ ಸಾವಿನ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೆ. ನಿನ್ನೆ (ಸೋಮವಾರ) ಮನೆಗೆ ಹಿಂದಿರುಗಿದಾಗ ನಾನು ಅಷ್ಟೇ ಆಘಾತಕ್ಕೊಳಗಾಗಿದ್ದೆ ಎಂದು ಕಾರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಂತರ ಸೋಮವಾರ ರಾತ್ರಿಯೇ ತಂದೆ ಹಿಂತಿರುಗಿದ ಬಗ್ಗೆ ಸತ್ಯಮಂಗಲಂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೃತರ ಗುರುತು ಪತ್ತೆಗೆ ಪೊಲೀಸರು ಇದೀಗ ವಿಚಾರಣೆಯನ್ನು ಪುನರಾರಂಭಿಸಿದ್ದಾರೆ.

ಇದನ್ನೂ ಓದಿ:

Viral Photo: ಕೈಗಾಡಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ; ಚಿಕಿತ್ಸೆ ವೇಳೆ ವೃದ್ಧೆ ಸಾವು

Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದು ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?

Published On - 7:16 pm, Wed, 6 April 22