Viral News : ಯುವತಿಯೊಬ್ಬರು ರಿಕ್ಷಾ ಇಳಿದು ಆಟೋ ಡ್ರೈವರ್ನಿಂದ ಚಿಲ್ಲರೆ ಇಸಿದುಕೊಳ್ಳುವಾಗ ಆತ ಐದು ರೂಪಾಯಿ ನಾಣ್ಯದ ಬದಲಿಗೆ 1 ಯೂರೋ ನಾಣ್ಯವನ್ನು ಕೊಟ್ಟಿದ್ದಾನೆ. ಐದು ರೂಪಾಯಿ ಮತ್ತು 1 ಯೂರೋ ನಾಣ್ಯ ನೋಡಲು ಒಂದೇ ತೆರನಾಗಿ ಇರುವುದರಿಂದ ಹೀಗೆ ಆಗಿರುವ ಸಾಧ್ಯತೆ ನಿಚ್ಚಳವಾಗಿದೆ. ಆ ಯುವತಿ ಇದೀಗ ಫೋಟೋ ಟ್ವೀಟ್ ಮಾಡಿದ್ದು ವೈರಲ್ ಆಗುತ್ತಿದೆ. ನಿನ್ನೆ ಮಾಡಿದ ಈ ಟ್ವೀಟ್ ಅನ್ನು ಈತನಕ 2.5 ಲಕ್ಷ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. 150ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸಾಕಷ್ಟು ಜನರು ಪ್ರತಿಕ್ರಿಯಿಸುತ್ತಲೇ ಇದ್ದಾರೆ.
Rikshawale uncle said: pic.twitter.com/LW2bAnjmiA
ಇದನ್ನೂ ಓದಿ— Priyank (@stanaccount30) February 16, 2023
ಇದು ವಿಶ್ವಗುರು ಮೂಮೆಂಟ್! ಎಂದಿದ್ದಾರೆ ಒಬ್ಬರು. ನೀವು ಈ ನಾಣ್ಯವನ್ನು ನಿಮ್ಮ ಆಪ್ತಮಿತ್ರನಿಗೆ ಗಿಫ್ಟ್ ಕೊಡಬಹುದು ಎಂದಿದ್ದಾರೆ ಮತ್ತೊಬ್ಬರು. ಈ ಆಟೋವಾಲಾ, ಪಾನವಾಡಿ ಘಾಟ್ನಲ್ಲಿ ಒಂದು ಬೀಡಿಕಟ್ಟಿಗೆ 100 ಡಾಲರ್ ನೋಟನ್ನು ಕೊಡುತ್ತಿದ್ದುದನ್ನು ನೋಡಿದೆ! ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು. ಅಯ್ಯೋ ನಾನು ಇಂಡಿಯಾ ಪ್ರವಾಸದಲ್ಲಿದ್ಧಾಗ ಒಂದು ಯೂರೋ ನಾಣ್ಯ ಕಳೆದುಕೊಂಡಿದ್ದೆ. ಅದೇ ಇರಬೇಕು ಇದು ಎಂದು ಇನ್ನೂ ಒಬ್ಬರು ತಮಾಷೆ ಮಾಡಿದ್ದಾರೆ. ನಿಮಗೆ ಆ ನಾಣ್ಯ ಬೇಡವಾದರೆ ನನಗೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ ಒಬ್ಬರು.
ಇದನ್ನೂ ಓದಿ : ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್
ರೂ.20 ಆಟೋ ರೈಡ್ಗೆ ರೂ. 88 ಮರಳಿ ಪಡೆಯುವುದೆಂದರೆ ಚಾನ್ಸ್! ಎಂದಿದ್ದಾರೆ ಮತ್ತೊಬ್ಬರು. ನೀವು ಆ ಹಣವನ್ನು ಯಾಕೆ ತೆಗೆದುಕೊಂಡಿರಿ? ವಾಪಸ್ ಕೊಡಬೇಕಿತ್ತು, ಟ್ವಿಟರ್ನಲ್ಲಿ ತೋರಿಸುವುದಕ್ಕಾ ತೆಗೆದುಕೊಂಡಿದ್ದು? ಎಂದು ಕೇಳಿದ್ದಾರೆ ಮಗದೊಬ್ಬರು. ಎರಡು ದಿನಗಳ ಹಿಂದೆ ನಾನು ಬಸ್ ಕಂಡಕ್ಟರ್ನೊಬ್ಬ ರೂ. 10 ಬದಲಿಗೆ ರೂ. 10 ಥಾಯ್ ಬಾತ್ ಪಡೆದಿದ್ದೇನೆ ಎಂದಿದ್ದಾರೆ ಒಬ್ಬರು.
ನಿಮಗೂ ಇಂಥ ಅನುಭವಗಳು ಆಗಿವೆಯೇ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ