ಪತ್ನಿಯು ಗಂಡನ ಮುಂದೆ ಬೇಡಿಕೆ ಇಡುವುದು ಸಹಜ. ಹೀಗಾಗಿ ತನ್ನ ಮಡದಿ ಆಸೆಯನ್ನು ಈಡೇರಿಸುವ ಮೂಲಕ ಆಕೆಯ ಮುಖದಲ್ಲಿ ನಗು ತರಿಸುವುದನ್ನು ಕೆಲಸವನ್ನು ಪತಿಯಾದವನು ಮಾಡುತ್ತಾನೆ. ಕೆಲವೊಮ್ಮೆ ಪತ್ನಿಯ ಬೇಡಿಕೆಯನ್ನು ಪತಿಗೆ ಈಡೇರಿಸಲು ಸಾಧ್ಯವಾಗದೇ ಹೋಗಬಹುದು. ಆದರೆ ಇದೀಗ ರಾಜಸ್ಥಾನದ ಬನ್ಸ್ವಾರಾದಲ್ಲಿ ಪತ್ನಿಯ ವಿಚಿತ್ರ ಬೇಡಿಕೆಯಿಂದ ಚಿರಾಗ್ ಎಂಬ ವ್ಯಕ್ತಿಯು ಪತ್ನಿಯ ವಿರುದ್ಧ ದೂರು ದಾಖಲಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ..
ಹೌದು, ಆಲ್ಕೋಹಾಲ್ ಮತ್ತು ನಾನ್ ವೆಜ್ ಬೇಡಿಕೆಗಳನ್ನು ಈಡೇರಿಸದ ಕಾರಣ ನೇಹಾಳು ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2023ರ ಜೂನ್‌ನಲ್ಲಿ ಗುರು ಹಿರಿಯರ ನಿಶ್ಚಯದ ಮೇರೆಗೆ ಈ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಮದುವೆ ಮಾತುಕತೆಯ ವೇಳೆ ಎರಡು ಲಕ್ಷ ರೂಪಾಯಿ ನೀಡಬೇಕೆಂದು ನೇಹಾ ಮನೆಯವರು ಬೇಡಿಕೆಯಿಟ್ಟಿದ್ದಾರೆ. ಅದರಂತೆ ಚಿರಾಗ್ ಮನೆಯವರು ನೇಹಾ ಮನೆಯವರಿಗೆ 2 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದಾರೆ.
ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನೇಹಾ ಅವರ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಪ್ರತಿ ದಿನ ಗಂಟೆಗಟ್ಟಲೇ ಫೋನ್ ನಲ್ಲಿ ಮಾತನಾಡುತ್ತಿರುವುದಲ್ಲದೇ, ಮನೆಯಲ್ಲಿಯೇ ಮದ್ಯಪಾನ ಮಾಡಲು ಪ್ರಾರಂಭಿಸಿದ್ದಾಳೆ. ಅದಲ್ಲದೇ, 2022 ರಲ್ಲಿ ರಕ್ಷಾಬಂಧನಕ್ಕೆ ತಾಯಿಗೆ ಮನೆಗೆ ಹೋದ ನೇಹಾ ಮತ್ತೆ ಗಂಡನ ಮನೆಗೆ ಮರಳಲೇ ಇಲ್ಲ. ಅಷ್ಟೇ ಅಲ್ಲದೇ ತಾನು ಮನೆಗೆ ವಾಪಸ್ಸು ಬರಬೇಕಾದರೆ ಪ್ರತಿದಿನ ಆಲ್ಕೋಹಾಲ್ ಹಾಗೂ ನಾನ್ ವೆಜ್ ತಂದು ಕೊಡಬೇಕು ಎಂದು ಪತಿಯ ಮುಂದೆ ಬೇಡಿಕೆಯಿಟ್ಟಿದ್ದಾಳೆ. ನೇಹಾಳನ್ನು ಚಿರಾಗ್ ಹಾಗೂ ಆತನ ಕುಟುಂಬದಿಂದ ಎಷ್ಟು ವಿನಂತಿಸಿಕೊಂಡರೂ ಆಕೆಯ ನಿರ್ಧಾರವನ್ನು ಬದಲಾಯಿಸಲೇ ಇಲ್ಲ.
ಇದನ್ನೂ ಓದಿ: ಇದು ಹೋಳಿ ಕುಣಿತ, ರಾಮಾಯಣದ ಹಾಡುಗಳನ್ನು ಹಾಡಿ ಹಾರೈಸುವ ಸುಂದರ ಆಚರಣೆ
ಕೊನೆಗೆ ಬೇಸೆತ್ತ ಚಿರಾಗ್ ಪತ್ನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಪತ್ನಿ ನೇಹಾಳ ಬೇಡಿಕೆಯಿಂದಾಗಿ ಆಕೆಯ ವಿರುದ್ಧ ಚಿರಾಗ್ ಎಫ್ಐಆರ್ ದಾಖಲಿಸಿದ್ದಾರೆ. ಕುಶಾಲಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನೇಹಾ ಮತ್ತು ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ