ಸನ್​ ಇನ್​ ದಿ ಸ್ನೋ; ಜಗತ್ತಿನ ಅತ್ಯಂತ ದುಬಾರಿ ಮಾವಿನಹಣ್ಣು ಕೇವಲ ರೂ. 19,000!

| Updated By: ಶ್ರೀದೇವಿ ಕಳಸದ

Updated on: May 09, 2023 | 4:59 PM

Mango : ಜಪಾನಿನ ಹೊಕೈಡೋದ ನೈಸರ್ಗಿಕ ಸಂಪನ್ಮೂಲಗಳಾದ ಹಿಮ ಮತ್ತು ಬಿಸಿನೀರಿನ ಬುಗ್ಗೆಗಳನ್ನು ಬಳಸಿಕೊಂಡು ಚಳಿಗಾಲದ ತಿಂಗಳುಗಳಲ್ಲಿ ಮಾವಿನ ಕೃಷಿ ಮಾಡುವುದು ಹಿರೋಯೋಕಿ ನಕಾಗಾವಾ ಅವರ ಉದ್ದೇಶವಾಗಿತ್ತು.

ಸನ್​ ಇನ್​ ದಿ ಸ್ನೋ; ಜಗತ್ತಿನ ಅತ್ಯಂತ ದುಬಾರಿ ಮಾವಿನಹಣ್ಣು ಕೇವಲ ರೂ. 19,000!
ಪ್ರಾತಿನಿಧಿಕ ಚಿತ್ರ
Follow us on

Viral News : ಜಪಾನಿನ ರೈತರೊಬ್ಬರು 2011ರಿಂದಲೂ ಅತ್ಯಂತ ದುಬಾರಿ ಬೆಲೆಯ ಮಾವಿನಹಣ್ಣನ್ನು ಬೆಳೆಯುತ್ತಿದ್ದಾರೆ. ಜಪಾನಿನ ಉತ್ತರ ಭಾಗದಲ್ಲಿರುವ ಟೊಕಾಚಿ ಎಂಬ ಹಿಮಪ್ರದೇಶದಲ್ಲಿ ಇದೀಗ ಸರಭರಿತ ಮಾವುಗಳನ್ನು ಸವಿಯಬಹುದಾಗಿದೆ. ಆದರೆ ಒಂದು ಮಾವಿನಹಣ್ಣಿಗೆ ರೂ. 19,000! ಪ್ರತೀ ವರ್ಷದಂತೆ ಇದೀಗ ರೈತ ಹಿರೋಯುಕಿ ನಕಾವಾಗಾ ಮಾಗಿದ ಹಣ್ಣುಗಳನ್ನು ಪ್ಯಾಕ್​ ಮಾಡುತ್ತ ಮಾರಾಟಕ್ಕೆ ಸಿದ್ಧಗೊಳಿಸುತ್ತಿದ್ದಾರೆ.

ಜಪಾನಿನ ಹೊಕ್ಕೈಡೋ ದ್ವೀಪದಲ್ಲಿರುವ ಒಟೋಪುಕ್​ನ ಜಮೀನಿನಲ್ಲಿರುವ ಗ್ರೀನ್​ಹೌಸಿನೊಳಗೆ ರಸಭರಿತ ಮಾವಿನಹಣ್ಣುಗಳು ಕೊಳ್ಳುವವರಿಗಾಗಿ ಕಾಯ್ದು ಕುಳಿತಿವೆ. ತಾವು ಮಾಡುತ್ತಿರುವ ಈ ಸುಸ್ಥಿರ ಕೃಷಿ ಮುಂದಿನ ದಿನಗಳಲ್ಲಿ ಜಗತ್ತಿನ ಅತ್ಯಂತ ದುಬಾರಿ ಮಾವಿನಹಣ್ಣಿನ ಬೆಳೆಗೆ ಕಾರಣವಾಗಬಹುದೆಂದು ಅವರು ಎಂದೂ ಊಹಿಸಿರಲಿಲ್ಲ.

ಹಿರೋಯುಕಿ ಮೂಲತಃ ಉದ್ಯಮಿ. ಪೆಟ್ರೋಲಿಯಂ ಕಂಪೆನಿಯನ್ನು ಹೊಂದಿದ್ದರು. ಆದರೆ 62 ಹರಯದಲ್ಲಿ ಅವರಿಗೆ ಕೃಷಿಯೆಡೆ ಆಸಕ್ತಿ ಮೂಡಿತು. ‘ಮೊದಮೊದಲು ನನ್ನ ಆಲೋಚನೆಯನ್ನು ಎಲ್ಲರೂ ನಿರ್ಲಕ್ಷಿಸಿದರು. ಆ ನಂತರ ಪ್ರಯೋಗ ಫಲಿಸುತ್ತಿದ್ದಂತೆ ಎಲ್ಲರೂ ಪ್ರಶಂಸಿಸಿದರು. ಮಿಯಝಾಕಿಯ ದಕ್ಷಿಣಭಾಗದಲ್ಲಿರುವ ರೈತರೊಬ್ಬರ ಮಾರ್ಗದರ್ಶನದಲ್ಲಿ ನಾನು ಚಳಿಗಾಲದಲ್ಲಿ ಹಣ್ಣುಗಳನ್ನು ಬೆಳೆಯಲೆಂದು ನನ್ನ ಸ್ಟಾರ್ಟ್​​ಅಪ್​ ನೊರಾವರ್ಕ್ಸ್​ ಜಪಾನ್​ ಅನ್ನು ಆರಂಭಿಸಿದೆ. ‘ಕೆಲ ವರ್ಷಗಳು ಉರುಳುತ್ತಿದ್ದಂತೆ ‘ಸನ್​ ಇನ್​ ದಿ ಸ್ನೋ’ ಎಂಬ ಟ್ರೇಡ್​ಮಾರ್ಕಿನೊಂದಿಗೆ ಬೆಳೆದ ಮಾವಿನಹಣ್ಣುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.’ ಎನ್ನುತ್ತಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಸ್ಪೈಸ್​ಜೆಟ್​ನ​ ಬ್ಯಾಂಕಾಕ್​ ವಿಮಾನದಲ್ಲಿ ಪೈಲಟ್​ನ​ ತಮಾಷೆ ವಿಡಿಯೋ ವೈರಲ್

ಹೊಕೈಡೋದ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಕೃಷಿ ಮಾಡುವುದು ಹಿರೋಯೋಕಿ ಉದ್ದೇಶವಾಗಿತ್ತು. ಇಲ್ಲಿಯ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳೆಂದರೆ ಹಿಮ ಮತ್ತು ಬಿಸಿನೀರಿನ ಬುಗ್ಗೆಗಳು. ಚಳಿಗಾಲದ ದಿನಗಳಲ್ಲಿ ಮೊದಲು ಹಿಮವನ್ನು ಸಂಗ್ರಹಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಗ್ರೀನ್​ಹೌಸ್​ಗಳನ್ನು ತಂಪಾಗಿರಿಸಲು ಇದನ್ನು ಬಳಸಲಾಗುತ್ತದೆ.

ಹೀಗೆ ಮಾಡುವುದರಿಂದ ಹೂಗಳು ಹೂಬಿಡುವುದನ್ನು ತುಸು ನಿಧಾನಿಸಿದಂತಾಗುತ್ತದೆ. ಗ್ರೀನ್​ಹೌಸ್​ ಅನ್ನು ಬೆಚ್ಚಗಿಡಲು ಬಿಸಿನೀರಿನ ಬುಗ್ಗೆಗಳ ಸಹಾಯ ತೆಗೆದುಕೊಳ್ಳಲಾಗುತ್ತದೆ. ಆಗ ಋತುಮಾನಕ್ಕೆ ತಕ್ಕಂತೆ ಸುಮಾರು 5,000 ಮಾವಿನ ಹಣ್ಣುಗಳು ಮಾರುಕಟ್ಟೆಗೆ ಸಿದ್ಧಗೊಂಡಿರುತ್ತವೆ.

ಇದನ್ನೂ ಓದಿ : ಅಬ್ಬಾ ಕೆಲಸ ಮುಗೀತಪ್ಪಾ! ಬಿಬಿಸಿ ಸುದ್ದಿವಾಚಕಿಯ ಲೈವ್​ ನ್ಯೂಸ್​ ತುಣುಕು ವೈರಲ್

ಹೀಗೆ ಮಾಡುವುದರಿಂದ ಚಳಿಗಾಲದಲ್ಲಿ ಕೀಟನಾಶಕಗಳ ಬಳಕೆ ಇಲ್ಲದೆಯೇ ಮಾವು ಹಣ್ಣಾಗಲು ಅನುವಾಗುತ್ತದೆ. ತಂಪಾದ ಹವೆಯಲ್ಲಿ ರೈತರು ಕೊಯ್ಲು ಮಾಡುವುದರಿಂದ ಕಡಿಮೆ ಶ್ರಮ ವ್ಯಯವಾಗುತ್ತದೆ. ಈ ಹಣ್ಣು ಸಾಮಾನ್ಯ ಮಾವಿನ ಹಣ್ಣುಗಳಿಗಿಂತ ಹೆಚ್ಚು ರುಚಿಯಾಗಿರುತ್ತವೆ. ಬೆಣ್ಣೆಯಂತೆ ಮೃದುವೂ ಆಗಿರುತ್ತವೆ.

ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ಇಷ್ಟೇ ಅಲ್ಲ ಇದೀಗ, ಕೀಟನಾಶಕರಹಿತ ಮಾವಿನ ಎಲೆಗಳನ್ನು ಚಹಾಕ್ಕೆ ಬಳಸಬಹುದು ಎಂಬ ಆಲೋಚನೆಯೊಂದಿಗೆ ಲುಪಿಸಿಯಾ ಚಹಾ ಕಂಪೆನಿಯು ಹಿರೋಯುಕಿ ಅವರನ್ನು ಭೇಟಿ ಮಾಡಲು ಆಸಕ್ತಿ ತೋರಿಸಿದೆ. ಮುಂದಿನ ಚಳಿಗಾಲದಲ್ಲಿ ಟೊಕಾಚಿಯನ್ನು ಹಣ್ಣಿನ ಉತ್ಪಾದನಾ ಕೇಂದ್ರವಾಗಿ ನಿರ್ಮಾಣ ಮಾಡುವ ಮತ್ತು ಈ ಮೂಲಕ ಸ್ಥಳೀಯ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವ ಯೋಜನೆಯನ್ನು ಹಿರೋಯುಕಿ ಹಾಕಿಕೊಂಡಿದ್ದಾರೆ.

ಇಷ್ಟೇ ಅಲ್ಲ, ಉಷ್ಣವಲಯದಲ್ಲಿ ಬೆಳೆಯಬಹುದಾಗ ಮತ್ತೊಂದು ರಸಪೂರಿತ ಮಾವಿನ ಹಣ್ಣು ಪೀಚ್​ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಕಾಯುತ್ತಿದ್ಧಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

Published On - 4:56 pm, Tue, 9 May 23