Brain Activity: ವಾರಾಂತ್ಯವೆಂದು ನೀವು ನಿಧಾನವಾಗಿ ಕಣ್ಣುಬಿಡುತ್ತಿರುಬಹುದು. ಪೂರ್ತಿ ಕಣ್ಣುಬಿಡದೆ ಹಾಗೇ ನೋಡಿದರೆ ಮಾತ್ರ ಈ ಚಿತ್ರದೊಳಗೆ ಯಾರು ಅಡಗಿದ್ದಾರೆನ್ನುವುದು ತಿಳಿಯುತ್ತಿದೆ. ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರೊಬ್ಬರನ್ನು ಈ ಭ್ರಮಾತ್ಮಕ ಚಿತ್ರದಲ್ಲಿ ಅಡಗಿದ್ದಾರೆ. ಕಣ್ಣುಬಿಟ್ಟು ನೇರ ನೋಡಿದರೆ ನಿಮಗೆ ಆಮೆ ಕಾಣುತ್ತದೆ. ಆದರೆ ಕಣ್ಣನ್ನು ಅರೆತೆರೆದು ನೋಡಿದರೆ ಯಾರು ಕಾಣುತ್ತಾರೆ? ಅದನ್ನು ನೀವೇ ಹೇಳಬೇಕು. ಹೌದು ಇಲ್ಲಿ ಕ್ರಿಕೆಟ್ ಪಟು ಎಂ. ಎಸ್. ಧೋನಿ (M S Dhoni) ಅಡಗಿದ್ದಾರೆ. ನೆಟ್ಟಿಗರನೇಕರು ಮೊದಲ ನೋಟಕ್ಕೆ ಧೋನಿಯನ್ನು ಕಂಡುಹಿಡಿದಿದ್ದಾರೆ. ನೀವು ಎಷ್ಟು ಸೆಕೆಂಡುಗಳಲ್ಲಿ ಧೋನಿಯನ್ನು ಪತ್ತೆ ಹಚ್ಚಿದಿರಿ?
ಇದನ್ನೂ ಓದಿ : Viral Video: ಮಿಸ್ಸಿಸ್ಸಿಪ್ಪಿ: ಕಾಣೆಯಾಗಿದ್ದ ಕೋತಿ 24 ಗಂಟೆಯೊಳಗೆ ತನ್ನ ಕುಟುಂಬದ ಮಡಿಲಿನೊಳಗೆ
ನಿಮ್ಮ ಕಣ್ಣು ಮತ್ತು ಮೆದುಳು ಪರಸ್ಪರ ಆಟಕ್ಕೆ ಬೀಳುವಂತೆ ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸಲಾಗಿರುತ್ತದೆ. ಹಾಗಾಗಿ ವಾಸ್ತವದಿಂದ ದೂರವಿರುವ ವಿಷಯಗಳನ್ನು ನಿಮ್ಮ ಮೆದುಳು ಗ್ರಹಿಸುತ್ತದೆ. ಇದೀಗ ಅರೆಗಣ್ಣಿನಲ್ಲಿ ಕಂಡ ಧೋನಿಯನ್ನು ಮತ್ತೆ ನೋಡಬೇಕೆ?
Half-close your eyes, and you can see long-haired MS Dhoni in this pic. 🙂 pic.twitter.com/0tWmMtXRVG
— Priyaanka (@Priyank_hahaha) September 24, 2023
ಸೆ. 24ರಂದು X ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ಅನ್ನು ಈತನಕ 23,000ಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಎಐ ಮೂಲಕವೂ ಈಗ ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸಬಹುದೆ? ಎಂದಿದ್ದಾರೆ ಒಬ್ಬರು. ಅರೆ ಇದು ಅಚ್ಚರಿ ಕೊಡುತ್ತಿದೆ, ಎಂಎಸ್ ಧೋನಿ ಅಭಿಮಾನಿಗಳಿಗೆ ಇದು ಹಬ್ಬ ಎಂದಿದ್ದಾರೆ ಇನ್ನೊಬ್ಬರು. ಇದು ಬಹಳ ಅದ್ಭುತವಾಗಿದೆ ಎಂದಿದ್ದಾರೆ ಮತ್ತೊಬ್ಬರು. ಈ ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ, ನೀವು ಹೇಳಿದ ಹಾಗೆ ಅರೆಗಣ್ಣಿನಿಂದ ನೋಡಿದರೆ ಮಾತ್ರ ಧೋನಿ, ಇಲ್ಲವಾದರೆ ಆಮೆ ಎಂದಿದ್ದಾರೆ ಅನೇಕರು.
ಇದನ್ನೂ ಓದಿ : Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’
ಇದು ನನ್ನ ಕೈಯ್ಯಾರೆ ಮಾಡಿದ ಪೇಂಟಿಂಗ್ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಮತ್ತೆ ಮತ್ತೆ ನೋಡಿದೆ ನನಗೆ ಧೋನಿ ಕಾಣುತ್ತಿಲ್ಲ, ಆಮೆ ಮತ್ತು ಆಮೆಯ ಅಮ್ಮ ಮಾತ್ರ ಕಾಣುತ್ತಿವೆ ಎಂದಿದ್ದಾರೆ ಇನ್ನೊಬ್ಬರು.
ಈ ಫೋಟೋ ನೋಡಿದ ನಿಮಗೆ ಧೋನಿ ಕಂಡರೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ