Viral Optical Illusion: ಚುರುಕು ಕಣ್ಣಿನವರು ಮಾತ್ರ ಇಲ್ಲಿ ಅಡಗಿರುವ ಆರನೇ ಬೆಕ್ಕನ್ನು ಕಂಡುಹಿಡಿಯಬಹುದು

Cat: ನಿಮ್ಮ ಕಣ್ಣುಗಳು ಎಷ್ಟು ಚುರುಕಾಗಿವೆ ಎಂದು ನೀವೇ ಪರೀಕ್ಷಿಸಿಕೊಳ್ಳಬಹುದು. ಇಲ್ಲಿರುವ ಈ ಭ್ರಮಾತ್ಮಕ ಚಿತ್ರವನ್ನು ನೋಡಿದರೆ ನಿಮಗೆ ಈ ಬಗ್ಗೆ ಅರಿವಾಗುತ್ತದೆ. ನೆಟ್ಟಿಗರನೇಕರು ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಕೆಲವರು ಸುಳಿವನ್ನೂ ಬಿಟ್ಟುಕೊಟ್ಟಿದ್ದಾರೆ. ಹಾಗಿದ್ದರೆ ಇಲ್ಲಿರುವ ಆರು ಬೆಕ್ಕುಗಳ ಪೈಕಿ ಇನ್ನೊಂದು ಬೆಕ್ಕು ಎಲ್ಲಿ ಅಡಗಿಕೊಂಡಿದೆ ತಿಳಿಸಿ.

Viral Optical Illusion: ಚುರುಕು ಕಣ್ಣಿನವರು ಮಾತ್ರ ಇಲ್ಲಿ ಅಡಗಿರುವ ಆರನೇ ಬೆಕ್ಕನ್ನು ಕಂಡುಹಿಡಿಯಬಹುದು
ಐದು ಬೆಕ್ಕುಗಳಿವೆ ಆರನೇ ಬೆಕ್ಕು ಎಲ್ಲಿ?

Updated on: Sep 27, 2023 | 11:42 AM

Optical Illusion: ನಿಮ್ಮ ಕಣ್ಣು ಚುರುಕಾಗಿವೆಯೇ? ನಿಮ್ಮಷ್ಟಕ್ಕೆ ನೀವೇ ಪತ್ತೆ ಹಚ್ಚಿಕೊಳ್ಳುವುದು ಹೇಗೆ? ಇಲ್ಲೊಂದು ಭ್ರಮಾತ್ಮಕ ಚಿತ್ರವನ್ನು ನಿಮಗಾಗಿಯೇ ತರಲಾಗಿದೆ. ಈ ಚಿತ್ರವನ್ನು ನೋಡಿ ಇದರಲ್ಲಿರುವ ಸವಾಲನ್ನು ಬಿಡಿಸಿದರೆ ನಿಮ್ಮ ಕಣ್ಣು (Eyes) ಹೇಗಿವೆ ಎಂದು ನಿಮಗೇ ತಿಳಿಯುತ್ತದೆ. ನೆಟ್ಟಿಗರು ಈ ಫೋಟೋ ನೋಡಿ ಸಾಕಷ್ಟು ಗೊಂದಲಕ್ಕೆ ಬೀಳುತ್ತಿದ್ದಾರೆ. ಇಲ್ಲಿರುವ ಬೆಕ್ಕುಗಳ (Cats) ಪೈಕಿ ಅಡಗಿರುವ ಬೆಕ್ಕುಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಹಾಗಿದ್ದರೆ ಇಲ್ಲಿ ಒಟ್ಟು ಎಷ್ಟು ಬೆಕ್ಕುಗಳಿವೆ? ನೀವು ಪತ್ತೆಹಚ್ಚಬೇಕಿರುವ ಬೆಕ್ಕುಗಳು ಎಷ್ಟು ಎಂಬ ಕುತೂಹಲ ಉಂಟಾಗುತ್ತಿದೆಯೇ?

ಇದನ್ನೂ ಓದಿ : Viral Video: ಬಂಟಿ ಔರ್ ಬಬ್ಲಿ; ಸಹೋದರನೊಂದಿಗೆ ಬಾಲ್ಯದ ನೆನಪನ್ನು ಮರುಸೃಷ್ಟಿಸಿದ ವಧು

ಒಟ್ಟು ಆರು ಬೆಕ್ಕುಗಳಲ್ಲಿ ಒಂದು ಅಡಗಿ ಕುಳಿತಿದೆ. ಅದು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ನೆಟ್ಟಿಗರಲ್ಲಿ ಕೆಲವರು ಆ ಬೆಕ್ಕು ಸಿಕ್ಕಿತು ಎಂದಿದ್ದಾರೆ ಇನ್ನೂ ಕೆಲವರು ಸಿಗಲೇ ಇಲ್ಲ ಎಂದಿದ್ದಾರೆ. ಚುರುಕಾಗಿರುವ ನಿಮ್ಮ ಕಣ್ಣುಗಳಿಗೆ ಆ ಬೆಕ್ಕು ಬಿದ್ದೇ ಬೀಳುತ್ತದೆ ಎಂಬ ಭರವಸೆ ನಮ್ಮದು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆರನೇ ಬೆಕ್ಕು ಎಲ್ಲಿ ಅಡಗಿದೆ?

ಐದು ಬೆಕ್ಕುಗಳಿವೆ ಆರನೇ ಬೆಕ್ಕು ಎಲ್ಲಿ?

ಈ ಪೋಸ್ಟ್ ಅನ್ನು @hardgaming3942  ಎಂಬ ಖಾತೆದಾರರು YouTube Shorts ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಬೆಕ್ಕುಗಳು ಪೆಟ್ಟಿಗೆಯ ಮುಂದೆ ಕುಳಿತಿವೆ. ಇನ್ನೊಂದು ಒಲೆಯ ಬದಿ ಕುಳಿತಿದೆ. ಹಾಗಿದ್ದರೆ ಆರನೇ ಬೆಕ್ಕು ಎಲ್ಲಿದೆ? ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 1 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಸೂರತ್​ನ ಬೀದಿಯಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು; ಆರಿಸಿಕೊಳ್ಳಲು ಹೆಣಗಾಡುತ್ತಿರುವ ಜನ

ಐದು ನಿಮಿಷ ಹುಡುಕಿದರೂ ಬೆಕ್ಕು ಸಿಗಲಿಲ್ಲ ಎಂದಿದ್ಧಾರೆ ಒಬ್ಬರು. ಬಾಗಿಲಿನ ನಡುವೆ ಕಪ್ಪು ಬೆಕ್ಕು ಇದೆ ಎಂದಿದ್ದಾರೆ ಇನ್ನೊಬ್ಬರು. ಸ್ಕ್ರೀನ್ ಬ್ರೈಟ್ ಮಾಡಿನೋಡಿ ಇನ್ನೊಂದು ಬೆಕ್ಕು ಕಾಣುತ್ತದೆ ಎಂದಿದ್ದಾರೆ ಮತ್ತೊಬ್ಬರು. ಮೊದಲು ಇದು ಸುಳ್ಳು ಇರಬಹುದು ಎಂದುಕೊಂಡೆ, ಆದರೆ ಕಪ್ಪುಭಾಗದಲ್ಲಿ ಕಪ್ಪು ಬೆಕ್ಕು ಇದೆ ಎಂದು ತಿಳಿಯಿತು ಎಂದಿದ್ದಾರೆ ಮಗದೊಬ್ಬರು.

ನಿಮಗೆ ಆರನೇ ಬೆಕ್ಕು ಸಿಕ್ಕಿತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:41 am, Wed, 27 September 23