Optical Illusion: ನಿಮ್ಮ ಕಣ್ಣುಗಳು ಎಷ್ಟು ಚುರುಕಾಗಿವೆ? ಆಗಾಗ ಪರೀಕ್ಷಿಸಿಕೊಳ್ಳಲೆಂದೇ ನಿಮಗೆ ಇಂಥ ಸವಾಲುಗಳನ್ನು ನೀಡಲಾಗುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ನೋಡಿ. ಈ ಬೆಡ್ರೂಮಿನಲ್ಲಿ ಒಂದು ನಾಯಿ ಅಡಗಿದೆ. ಅದನ್ನು ಪತ್ತೆ ಹಚ್ಚುವ ಕೆಲಸವನ್ನು ನಿಮಗೆ ವಹಿಸಲಾಗುತ್ತಿದೆ. ವಾರಾಂತ್ಯದ ಮೂಡ್ (Weekend Mood) ನಲ್ಲಿರುವ ನಿಮಗೀಗ ಕೆಲಸ ಮಾಡಲು ತುಸು ಕಷ್ಟವೆನ್ನಿಸುತ್ತಿರಬಹುದು. ಈ ಶುಕ್ರವಾರ ಮುಗಿದು ಶನಿವಾರ ಯಾವಾಗ ಬರುತ್ತದೆ, ಆರಾಮಾಗಿ ಕಾಲು ಚಾಚಿಕೊಂಡು ನಿದ್ದೆ ಮಾಡಬೇಕು, ಬೇಕಾಗಿದ್ದನ್ನು ತಿನ್ನಬೇಕು, ಆಚೆ ಸುತ್ತಾಡಬೇಕು ಎಂದೆಲ್ಲ ಯೋಚಿಸುತ್ತಿದ್ದೀರಿ ತಾನೆ? ಈ ಎಲ್ಲ ಆಲೋಚನೆಗಳ ಮಧ್ಯೆ ಮಾಡುತ್ತಿರುವ ಕೆಲಸ ಕುಂಟುತ್ತಿರಬಹುದು. ಹಾಗಾಗಿ ನಿಮ್ಮ ಮೆದುಳಿಗೆ ಕಣ್ಣಿಗೆ ಈ ಕಸರತ್ತನ್ನು ಕೊಟ್ಟುನೋಡಿ.
ಇದನ್ನೂ ಓದಿ : Viral Video: ವಾಟ್ ಝುಮ್ಕಾ: ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಹಾಡಿಗೆ ವಧುವಿನ ಡ್ಯಾನ್ಸ್
ರೆಡ್ಡಿಟ್ನಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅನೇಕರು ಈ ಭ್ರಮಾತ್ಮಕ ಚಿತ್ರದಲ್ಲಿರುವ ನಾಯಿಯನ್ನು ಗುರುತಿಸುವಲ್ಲಿ ವೈಫಲ್ಯ ಕಂಡಿದ್ದಾರೆ. ಹಾಸಿಗೆಯ ಮೇಲೆ ಎಲ್ಲಿ ಮಲಗಿದೆ ನಾಯಿ? ಕಾಣುತ್ತಲೇ ಇಲ್ಲ, ನಿಮಿಷಗಳ ಕಾಲ ನೋಡೇನೋಡಿದೆ ಎನ್ನುತ್ತಿದ್ದಾರೆ. ಹಾಸಿಗೆಯ ಒಳಗೆ ಮಲಗಿದ್ದರೆ ಹೇಗೆ ಪತ್ತೆ ಹಚ್ಚುವುದು? ಛೆ ನನಗಂತೂ ಆಗಲ್ಲಾ, ನಾನು ಹುಡುಕುವುದನ್ನು ನಿಲ್ಲಿಸಿದೆ ಎಂದು ಕೆಲವರು ಹೇಳಿದ್ದಾರೆ.
I was frantically looking for my dog for 10 minutes.
by u/shetarp429 in aww
ನಾನು ನನ್ನ ನಾಯಿಯನ್ನು 10 ನಿಮಿಷಗಳಿಂದ ಹುಡುಕುತ್ತಲೇ ಇದ್ದೆ ಎಂಬ ತಲೆಬರಹದಡಿ ಈ ಫೋಟೋ ಪೋಸ್ಟ್ ಮಾಡಲಾಗಿದೆ. ಹೊದಿಕೆ, ಹಾಸಿಗೆ, ದಿಂಬುಗಳ ಮಧ್ಯೆ ನಾಯಿ ಎಲ್ಲಿ ಅಡಗಿದೆಯೋ ಏನೋ. ಹೊದಿಕೆಯಡಿಯೇ ನಾಯಿ ಮಲಗಿದೆ ಎಂದು ಹಲವಾರು ಜನ ಹೇಳಿದ್ಧಾರೆ. ಅಲ್ಲದೆ, ಅದರ ಮೂಗನ್ನು ನೋಡಿದೆ ಎಂದಿದ್ದಾರೆ ಕೆಲವರು. ಈ ಪೋಸ್ಟ್ ಅನ್ನು 3 ವರ್ಷಗಳ ಹಿಂದೆ ಹಂಚಿಕೊಳ್ಳಲಾಗಿದೆ, ಆದರೆ ಇದೀಗ ಇದು ವೈರಲ್ ಆಗಿದೆ. ಈತನಕ 21,000 ಜನರು ಲೈಕ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಕಾರಿನ ಅಣ್ಣನಿಗೆ ಜೈ; ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಸೆದೆಬಡಿಯುತ್ತಿರುವ ಕಾರ್ ಚಾಲಕ
ಹಾಂ ನನಗೆ ಅವನ ಪುಟ್ಟಮೂಗು ಕಂಡಿತು! ಎಂದು ಹಲವಾರು ಜನ ಹೇಳಿದ್ದಾರೆ. ಆಕೆ ಆರಾಮಾಗಿ ಹೊದಿಕೆಯೊಳಗೆ ನಿದ್ರೆ ಹೋಗಿದ್ದಾಳೆ ಎಂದಿದ್ದಾರೆ ಇನ್ನಷ್ಟು ಜನ. ನನ್ನ ನಾಯಿ ಕೂಡ ಹೀಗೆಯೇ ನಮ್ಮನ್ನು ಆಟವಾಡಿಸುತ್ತದೆ ಎಂದಿದ್ದಾರೆ ಇನ್ನೊಂದಿಷ್ಟು ಜನ. ಬಟನ್ ನೋಸ್ ಕಂಡಿತು ನನಗೆ!
ನಿಮಗೆ ಕಂಡಿತೇ ಇಲ್ಲಿ ಅಡಗಿರುವ ನಾಯಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:52 am, Fri, 18 August 23