
ಸಾಮಾನ್ಯವಾಗಿ ತಟ್ಟೆ ಇಡ್ಲಿ, ಬಟನ್ ಇಡ್ಲಿ ಈ ರೀತಿಯಾಗಿ ನಾನಾ ವಿಧದ ಇಡ್ಲಿಯನ್ನು ನೀವು ಸವಿದಿರಬಹುದು. ಆದರೆ ಎಂದಾದರೂ ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ ಸವಿದಿದ್ದೀರಾ? ಹೊಸ ಹೊಸ ವಿಧಧ ಪ್ರಯೋಗವನ್ನು ಜನರು ಹೆಚ್ಚು ಇಷ್ಟ ಪಡುತ್ತಾರೆ ಎಂಬ ಆಲೋಚನೆಯಿಂದ ಹೊಟೆಲ್ಗಳು ಹೊಸ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂದಹಾಗೆಯೇ ಇದೀಗ ವೈರಲ್ ಆದ ಸುದ್ದಿಯೆಂದರೆ ಐಸ್ ಕ್ರೀಂ ಕಡ್ಡಿಯಲ್ಲಿ ತಯಾರಾದ ಇಡ್ಲಿ! ಬೆಂಗಳೂರಿನ ಹೊಟೆಲ್ವೊಂದರಲ್ಲಿ ತಯಾರಾದ ಈ ಹೊಸ ಪ್ರಯೋಗ ಕೆಲವರ ಕೋಪಕ್ಕೂ ಗುರಿಯಾಗಿದೆ.
ಟ್ವಿಟರ್ನಲ್ಲಿ ಈ ತಿಂಡಿಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಐಸ್ ಕ್ರೀಂ ಕಡ್ಡಿಯಿಂದ ತಯಾರಿಸಿದ ಇಡ್ಲಿಯ ಜತೆಗೆ ಚಟ್ನಿ ಮತ್ತು ಸಾಂಬಾರ್ ಕೂಡ ನೀಡಲಾಗಿದೆ. ಮತ್ತೊಂದು ಚಿತ್ರದಲ್ಲಿ ಗಮನಿಸುವಂತೆಯೇ ಐಸ್ ಕ್ರೀಂ ಹಿಡಿದ ಹಾಗೆಯೇ ಕಡ್ಡಿಯ ಮೂಲಕ ಇಡ್ಲಿ ಹಿಡಿದು ಸಾಂಬಾರ್ನಲ್ಲಿ ಅದ್ದುತ್ತಿರುವುದನ್ನು ನೋಡಬಹುದು.
ಕೆಲವರು ಈ ಪ್ರಯೋಗಕ್ಕೆ ಕೋಪಗೊಂಡಿದ್ದಾರೆ. ಒಂದುಕಡೆ ಮರಗಳನ್ನು ಉಳಿಸುವ ಹೋರಾಟದಲ್ಲಿ ಇದ್ದರೆ ಇನ್ನೊಂದೆಡೆ ಐಸ್ ಕ್ರೀಂ ಕಡ್ಡಿಗಳನ್ನು ಬಳಸಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ:
Published On - 12:57 pm, Fri, 1 October 21