Matrimonial Site: ಶಾದಿ ಡಾಟ್ ಕಾಮ್ನಿಂದ (Shaadi.com) ಹೊಸ ವಂಚನೆ ಎಂಬ ಶೀರ್ಷಿಕೆಯಲ್ಲಿ ಮಹಿಳೆಯೊಬ್ಬರು ರೆಡ್ಡಿಟ್ನಲ್ಲಿ ಇತ್ತೀಚೆಗೆ ತಮಗಾದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಆನ್ಲೈನ್ ಮೂಲಕ ವ್ಯಕ್ತಿಯೊಬ್ಬ ಆಕೆಗೆ ರೂ. 45 ಲಕ್ಷ ವಂಚನೆ ನಡೆಸಲು ಪ್ರಯತ್ನಿಸಿದ ಪ್ರಕರಣ ಇದಾಗಿದೆ. ಸದ್ಯ ಮಹಿಳೆಗೆ ಆತನ ಮೇಲೆ ಅನುಮಾನ ಬಂದು ಶೀಘ್ರ ಎಚ್ಚೆತ್ತುಕೊಂಡಿದ್ದಾಳೆ. ಇದನ್ನು ಓದಿದ ನೆಟ್ಟಿಗರು ಇಂಥ ಪ್ರಕರಣಗಳು ಈಗೀಗ ಹೆಚ್ಚಾಗಿವೆ ಎಂದು ಹೇಳುತ್ತ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. 3 ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್ ಅನ್ನು ಸುಮಾರು ಸುಮಾರು 185 ಜನರು ಲೈಕ್ ಮಾಡಿದ್ದಾರೆ. 135 ಜನರು ಚರ್ಚೆಯಲ್ಲಿ ಭಾಗಿಯಾಗಿದ್ಧಾರೆ.
ಇದನ್ನೂ ಓದಿ : Viral: ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ನೋಟುಗಳು; ಇದು ಹಳೆಯ ವರಸೆ ಎಂದ ನೆಟ್ಟಿಗರು
‘ಆಗಾಗ ಶಾದಿ ಡಾಟ್ ಕಾಮ್ ಅಪ್ಲಿಕೇಷನ್ನಲ್ಲಿ ಕಣ್ಣಾಡಿಸುತ್ತಿರುತ್ತೇನೆ, ಆದರೆ ಅಲ್ಲಿ ಯಾರೊಂದಿಗೂ ಮಾತನಾಡುವುದಿಲ್ಲ. ಆದರೆ ವಾಟ್ಸ್ಯಾಪ್ ಮೂಲಕ ಯಾರಾದರೂ (ಪ್ರೀಮಿಯಂ ಯೂಸರ್ಸ್) ಸಂಪರ್ಕಿಸಿದಾಗ ಕೆಲವೊಮ್ಮೆ ಕೆಲವರಿಗೆ ಉತ್ತರಿಸಬೇಕಾದುದು ಸೌಜನ್ಯ. ಹೀಗಿರುವಾಗ ಪುರುಷನೊಬ್ಬ ಮೆಸೇಜ್ ಕಳಿಸಿದ. ಎರಡು ದಿನಗಳ ಕಾಲ ಅವನೊಂದಿಗೆ ಸಂಪರ್ಕದಲ್ಲಿದ್ದೆ. ತಾನು ಕೆನಡಾಗೆ ಹೋಗಲು ತಯಾರಿ ನಡೆಸುತ್ತಿದ್ದೇನೆ ಎಂದ.
‘ಏಕೆಂದರೆ ನಾನು ನನ್ನ ಪ್ರೊಫೈಲಿನಲ್ಲಿ ಕೆನಡಾಗೆ ಹೋಗಬಯಸುವ ವಿಷಯವನ್ನು ಉಲ್ಲೇಖಿಸಿದ್ದೆ. ಆ ಸುಳಿವಿನೊಂದಿಗೆ ಅವನು ನನ್ನನ್ನು ಉದ್ದೇಶಪೂರ್ವಕವಾಗಿ ಸಂಪರ್ಕಿಸಿದ್ದಾನೆ. ನನ್ನೊಂದಿಗೆ ಮಾತನಾಡುತ್ತಾ, ತಾನು ಫ್ರೀಲಾನ್ಸ್ ಮಾಡುವ ಕಂಪೆನಿಯೊಂದು ವಿದೇಶದಲ್ಲಿ ನೆಲೆಗೊಳ್ಳಬಯಸುವವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ. ಆಗ ನನಗೆ ಅವನ ಬಗ್ಗೆ ಅನುಮಾನ ಮೂಡಿತು. ತನ್ನ ಕಂಪೆನಿಗಾಗಿ ಗ್ರಾಹಕರನ್ನು ಹುಡುಕಲೆಂದೇ ಇಲ್ಲಿ ಪ್ರೊಫೈಲ್ ಸೃಷ್ಟಿಸಿದ್ದಾನೆ ಎನ್ನುವುದು ಅರಿವಿಗೆ ಬಂದಿತು. ಇದೊಂದು ಮೋಸದ ವ್ಯವಹಾರವೆಂದು ಎಚ್ಚೆತ್ತುಕೊಂಡೆ.’
ಇದನ್ನೂ ಓದಿ : Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್ವಿಚ್ ತಯಾರಿಸಿ ಸವಿದ ಗಗನಯಾತ್ರಿ
ಜಾಗರೂಕತೆಯಿಂದ ಸಂಪರ್ಕದಲ್ಲಿದ್ದೆ. ಕನ್ಸಲ್ಟನ್ಸಿ ಆಫೀಸ್ ಒಂದರಿಂದ ತಾನು ಫೋನ್ ಮಾಡುತ್ತಿರುವುದಾಗ ತಿಳಿಸಿದ ಮಹಿಳೆಯೊಬ್ಬಳು, ಅವನು ತನ್ನ ಜ್ಯೂನಿಯರ್ ಎಂದು ಹೇಳಿದಳು. ರೂ. 45 ಲಕ್ಷಗಳನ್ನು ಆಕೆಗೆ ಪಾವತಿಸಿದರೆ ಆಕೆ ಕೆನಡಾದಲ್ಲಿ ನೆಲೆಗೊಳ್ಳಲು ಸಹಾಯ ಮಾಡುವುದಾಗಿ ಹೇಳಿದಳು. ಇಷ್ಟೊಂದು ಹಣದಲ್ಲಿ ನಗರದ ಹೊರವಲಯದಲ್ಲಿ ಸೈಟ್ ಖರೀದಿಸುತ್ತೇನೆ! ಎಂದು ಹೇಳಿ ಇಬ್ಬರನ್ನೂ ಬ್ಲಾಕ್ ಮಾಡಿಬಿಟ್ಟೆ! ಕೆಲವರು ಅಪ್ಲೀಕೇಶನ್ಗಳ ಮೂಲಕ ಕೆಲಸ ಮತ್ತು ಪ್ಯಾಕೇಜ್ಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಇನ್ನೂ ಕೆಲವರು ವಂಚಿಸಲು ಗ್ರಾಹಕರನ್ನು ಹುಡುಕಾಡುತ್ತಿರುತ್ತಾರೆ! ಹುಷಾರಾಗಿರಿ’ ಎಂದಿದ್ದಾರೆ ಈ ಮಹಿಳೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:59 pm, Tue, 22 August 23