Viral: ಅಮೆರಿಕ; ವಯಾಗ್ರಾ ಸೇರಿದಂತೆ 6 ಔಷಧಿಗಳ ಬೇಡಿಕೆ; ಶಸ್ತ್ರಧಾರಿ ಯುವಕನಿಂದ ಅಂಗಡಿಕಾರನಿಗೆ ಬೆದರಿಕೆ

|

Updated on: Oct 26, 2023 | 11:33 AM

Pharmacy Robbery: 'ಇದು ಸಶಸ್ತ್ರ ದರೋಡೆ, ದಯವಿಟ್ಟು ಸಹಕರಿಸು; ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಈ ಕುರಿತು ನೀನು ಯಾರಿಗೂ ಮಾಹಿತಿ ನೀಡಬಾರದು ಮತ್ತು ಎಚ್ಚರಿಸಬಾರದು. ಹಾಗೊಂದು ವೇಳೆ ಮಾಡಿದರೆ ನಾನು ಇಲ್ಲಿ ಯಾರನ್ನೂ ಶೂಟ್ ಮಾಡಬಲ್ಲೆ' ಸಶಸ್ತ್ರಧಾರಿ ಯುವಕ ಔಷಧಿಪಟ್ಟಿಯೊಂದಿಗೆ ಈ ಬೆದರಿಕೆಯ ಟಿಪ್ಪಣಿಯನ್ನು ಔಷಧಿ ಅಂಗಡಿಯವನ ಎದುರು ಇಡುತ್ತಾನೆ.

Viral: ಅಮೆರಿಕ; ವಯಾಗ್ರಾ ಸೇರಿದಂತೆ 6 ಔಷಧಿಗಳ ಬೇಡಿಕೆ; ಶಸ್ತ್ರಧಾರಿ ಯುವಕನಿಂದ ಅಂಗಡಿಕಾರನಿಗೆ ಬೆದರಿಕೆ
ಶಂಕಿತ ಆರೋಪಿ ಥಾಮಸ್ ಮ್ಯೂಸ್​
Follow us on

America: ಶಸ್ತ್ರಧಾರಿ ಯುವಕ ಥಾಮಸ್​ ಮ್ಯೂಸ್​ ಸಂಜೆ ಆರರ ಸುಮಾರಿಗೆ ಸಿವಿಎಸ್​ ಔಷಧಿ ಅಂಗಡಿಗೆ ಬಂದು ಅಂಗಡಿಕಾರನಿಗೆ ಒಂದು ಚೀಟಿಯನ್ನು ತೋರಿಸಿದ್ದಾನೆ. ಅದರಲ್ಲಿ ಬೆದರಿಕೆ ಟಿಪ್ಪಣಿ ಮತ್ತು ವಯಾಗ್ರಾ ಸೇರಿದಂತೆ 6 ಔಷಧಿಗಳ ಪಟ್ಟಿ ಇರುತ್ತದೆ. ಇದನ್ನು ಕಂಡ ಅಂಗಡಿಕಾರ ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದಾನೆ. ನಂತರ ಈ ಚೀಟಿಯನ್ನು ಅಂಗಡಿಯವನು ಒರ್ಲ್ಯಾಂಡೋ ಪೊಲೀಸರಿಗೆ ತಲುಪಿಸಿದ್ದಾನೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶಂಕಿತ ಆರೋಪಿ ಥಾಮಸ್​ ಮ್ಯೂಸ್​ನನ್ನು ಬಂಧಿಸಿದ್ದಾರೆ. ಫಾರ್ಮಸಿ ದರೋಡೆಗೆ (Pharmacy Robbery) ಸಂಬಂಧಿಸಿದ ಈ ಪ್ರಕರಣದ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ಉಬರ್ ಚಾಲಕ ಗೂಗಲ್​ನಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದಿದ್ದು ಈ ಕಾರಣಕ್ಕೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೀಗೆ ಬೇಡಿಕೆ ಇಟ್ಟ ಥಾಮಸ್​ ಮ್ಯೂಸ್ ಫ್ಲೋರಿಡಾದ ನಿವಾಸಿ ಎಂದು ಗುರುತಿಸಲಾಗಿದೆ. ಫಾಕ್ಸ್ ನ್ಯೂಸ್ ಪ್ರಕಾರ, ಶಂಕಿತ ಆರೋಪಿ ಥಾಮಸ್ ಮ್ಯೂಸ್ ಸಿವಿಎಸ್ ಅಂಗಡಿಯಲ್ಲಿ ಸಂಜೆ 6 ಗಂಟೆಯ ಸುಮಾರಿಗೆ ಅಂಗಡಿಕಾರನಿಗೆ ಕೈಬರಹದ ಟಿಪ್ಪಣಿಯನ್ನು ನೀಡಿದ್ದಾನೆ. ಅವನು ಗನ್​ ಕೂಡ ಹೊಂದಿದ್ದನು ಮತ್ತು ಟಿಪ್ಪಣಿ ಪಟ್ಟಿಯಲ್ಲಿರುವ ಔಷಧಿಗಳನ್ನು ನೀಡದಿದ್ದರೆ ಶೂಟ್ ಮಾಡಲಾಗುತ್ತದೆ ಎಂಬ ಬೆದರಿಕೆಯನ್ನೂ ಒಡ್ಡಿದನು ಎಂದು ಒರ್ಲ್ಯಾಂಡೊ ಪೊಲೀಸ್​ ಇಲಾಖೆಯು ತಿಳಿಸಿದೆ.

ಫಾರ್ಮಸಿ ದರೋಡೆಗೆ ಸಂಬಂಧಿಸಿದ ಟಿಪ್ಪಣಿ ಮತ್ತು ಬೆದರಿಕೆ

ಸುಕ್ಕುಗಟ್ಟಿದ ಕಾಗದದ ಮೇಲೆ ಬೇಕಾದ ಔಷಧಿಗಳ ಪಟ್ಟಿಯನ್ನು ಮತ್ತು ಬೆದರಿಕೆ ಟಿಪ್ಪಣಿಯನ್ನು ಬರೆಯಲಾಗಿದೆ; ‘ಇದು ಸಶಸ್ತ್ರ ದರೋಡೆ, ದಯವಿಟ್ಟು ಸಹಕರಿಸು; ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಈ ಕುರಿತು ನೀನು ಯಾರಿಗೂ ಮಾಹಿತಿ ನೀಡಬಾರದು ಮತ್ತು ಎಚ್ಚರಿಸಬಾರದು. ಹಾಗೊಂದು ವೇಳೆ ಮಾಡಿದರೆ ಇಲ್ಲಿರುವ ಯಾರನ್ನೂ ಶೂಟ್ ಮಾಡುತ್ತೇನೆ.’

ಥಾಮಸ್​ ಮ್ಯೂಸ್​ ಅಂಗಡಿಯಿಂದ ಹೊರಗೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ವಲ್ಪ ಸಮಯದ ನಂತರ ಮ್ಯೂಸ್​ನನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ ಅವನ ಕೈಯಲ್ಲಿ ಕದ್ದ ಮಾದಕ ದ್ಯವ್ಯ ಮತ್ತರು ಔಷಧಿ ಟಿಪ್ಪಣಿಯು ಇತ್ತು. ಈ ಯೋಜಿತ ದರೋಡೆಯನ್ನು ಕಾರ್ಯಗತಗೊಳಿಸಲು ಜಾಕ್ಸನ್​ವಿಲ್ಲೆಯಿಂದ ಒರ್ಲ್ಯಾಂಡೋಗೆ ಮ್ಯೂಸ್​ ಪ್ರಯಾಣಿಸಿದ್ದನ್ನು ಒಪ್ಪಿಕೊಂಡನು. ಇದರೊಂದಿಗೆ ಸೆಂಟ್ರಲ್​ ಫ್ಲೋರಿಡಾದಲ್ಲಿ ನಡೆದ ಮತ್ತೊಂದು ರೀತಿಯ ದರೋಡೆಯಲ್ಲಿ ಭಾಗಿಯಾಗಿದ್ದನ್ನೂ ಒಪ್ಪಿಕೊಂಡನು. ಸದ್ಯ ದರೋಡೆ, ಕಳ್ಳಸಾಗಣೆಗೆ ಸಂಬಂಧಿಸಿದ ಸರಣಿ ಆರೋಪಗಳನ್ನು ಎದುರಿಸುತ್ತಿದ್ದಾನೆ.

ಮತ್ತಷ್ಟು ವೈರಲ್​​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:31 am, Thu, 26 October 23