ಜರ್ಮನಿ: ಪ್ರೀತಿ ಕುರುಡು, ಪ್ರೀತಿಗೆ ಜಾತಿ-ಧರ್ಮ, ವಯಸ್ಸು ಯಾವುದೂ ಅಡ್ಡಿಯಾಗುವುದಿಲ್ಲ ಅಂತಾರೆ. ಪ್ರೀತಿಯಲ್ಲಿದ್ದ ವ್ಯಕ್ತಿಗೆ ತನ್ನ ಪ್ರೀತಿಯೇ ಕೇಂದ್ರಬಿಂದುವಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಜರ್ಮನಿಯ ಯುವತಿಯೊಬ್ಬಳ ಪ್ರೇಮ ಕಹಾನಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. 57 ವರ್ಷದ ಪ್ರಿಯಕರನ ಮನ ಒಲಿಸಲು ಈಕೆ ಬರೋಬ್ಬರಿ 1 ಕೋಟಿ ಗೂ ಅಧಿಕ ರೂ. ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.
ತನ್ನ ಪ್ರಿಯಕರ ನೀಳ ಕಾಲಿನ ಯುವತಿಯರಿಗೆ ಹೆಚ್ಚು ಆಕರ್ಷಿತನಾಗುತ್ತಾನೆ ಎಂಬ ಕಾರಣಕ್ಕೆ ಈಕೆ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ಹೈಟ್ ಹೆಚ್ಚಿಸಿಕೊಂಡಿದ್ದಾಳೆ. Limb Lengthening Surgery ಅಂದರೆ ಕಾಲಿನ ಮೂಳೆಗಳ ಒಳಗೆ ರಾಡ್ಗಳನ್ನು ಹಾಕಿ ಸ್ಕ್ರೂ ಮೂಲಕ ಕಾಲಿನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆ. ಈ ಶಸ್ತ್ರಚಿಕಿತ್ಸೆಯು ಧೀರ್ಘಾವಧಿಯ ಚಿಕಿತ್ಸೆಯಾಗಿದ್ದು, ದಿನಕಳೆದಂತೆ ಸೆಂಟಿ ಮೀಟರ್ ಲೆಕ್ಕದಲ್ಲಿ ಎತ್ತರ ಹೆಚ್ಚುತ್ತಾ ಹೋಗುತ್ತದೆ.
ಇದನ್ನೂ ಓದಿ: ಸಲಿಂಗ ವಿವಾಹ; ಮೇಕಪ್ ಮಾಡಲು ಬಂದ ಯುವತಿಯನ್ನೇ ಪ್ರೀತಿಸಿ ಮದುವೆಯಾದ ನಟಿ
ಜರ್ಮನಿಯಲ್ಲಿ ನೆಲೆಸಿರುವ ಈಕೆಯ ಹೆಸರು ಥೆರೆಸಿಯಾ ಫಿಶರ್(31). ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಈಕೆ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಮಾಡೆಲ್ ಆಗಿ ಗುರುತಿಸಿಕೊಂಡಿರುವ ಈಕೆ ಜರ್ಮನಿಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಸಾಕಷ್ಟು ಖ್ಯಾತಿಗಳಿಸಿದ್ದಾಳೆ. ಈಕೆಯ ಪ್ರಿಯಕರನ ಹೆಸರು ಸ್ಟೀಫನ್ ಕ್ಲೇಸರ್(57). ಇದೀಗ ಎತ್ತರವನ್ನು ಹೆಚ್ಚಿಸಿಕೊಂಡ ಬಳಿಕ ಪ್ರಿಯಕರ ಸ್ಟೀಫನ್ ಖುಷಿಯಾಗಿದ್ದು, ತನ್ನನ್ನು ಹೆಚ್ಚು ಪ್ರೀತಿಸುತ್ತಿದ್ದಾನೆ ಎಂದು ಆಕೆ ಹೇಳಿಕೊಂಡಿರುವುದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ