ಬೆಂಗಳೂರು: ಇತ್ತೀಚೆಗಷ್ಟೇ ಚಲಿಸುತ್ತಿರುವ ಕಾರಿನ ಸನ್ರೂಫ್ನಿಂದ ಹೊರಬಂದು ನಡುರಸ್ತೆಯಲ್ಲಿ ಪ್ರೇಮಿಗಳು ಒಬ್ಬರಿಗೊಬ್ಬರು ಲಿಪ್ಲಾಕ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗಾ ಅಂತದ್ದೇ ಮತ್ತೊಂದು ವಿಡಿಯೋ ಸಖತ್ ಸುದ್ದಿಯಲ್ಲಿದೆ. ಇಲ್ಲಿ ನಾಲ್ಕು ಯುವಕರು ಕಾರಿನ ಸನ್‌ರೂಫ್ ಮತ್ತು ಕಿಟಕಿಯಿಂದ ಹೊರಬಂದು ಸಖತ್ ಆಗಿ ಡಾನ್ಸ್ ಮಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಏರ್‌ಪೋರ್ಟ್ ರಸ್ತೆ ಎಂದೂ ಕರೆಯಲ್ಪಡುವ ಎನ್‌ಎಚ್ 7 ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹೆದ್ದಾರಿಯಲ್ಲಿ ವಾಹನ ದಟ್ಟನೆಯಿದ್ದರೂ ಸಹ ತಮ್ಮ ಜಾಲಿಮೂಡ್ನನಲ್ಲೇ ಬ್ಯುಸಿಯಾಗಿರುವ ಯುವಕರ ಅಪಾಯಕಾರಿ ಕೃತ್ಯಗಳನ್ನು ಹಿಂದಿನಿಂದ ಬರುತ್ತಿದ್ದ ವಾಹನ ಚಾಲಕ ವಿಡಿಯೋ ಸೆರೆಹಿಡಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪೊಲೀಸರು ಈ ನಾಲ್ಕು ಯುವಕರನ್ನು ಬಂಧಿಸಿದ್ದಾರೆ.
ವಿಡಿಯೋದಲ್ಲಿ ಸಾಕಷ್ಟು ಸಂಚಾರ ದಟ್ಟಣೆಯ ನಡುವೆಯೂ ಯುವಕರು ಜಾಲಿಮೂಡ್ನನಲ್ಲಿ ಸನ್‌ರೂಫ್ ಮತ್ತು ಕಿಟಕಿಯಿಂದ ಹೊರಬಂದು ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು @nabilajamal_ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರಿನ ಕಿಟಕಿಗಳು ಮತ್ತು ಸನ್‌ರೂಫ್ ಹೊರಗೆ 4 ಹುಡುಗರ ವರ್ತನೆ ಹಾಗೂ ನಿರ್ಲಕ್ಷ್ಯದ ಬಗ್ಗೆ ವೀಡಿಯೊಗೆ ಕ್ಯಾಪ್ಷನ್ ಬರೆಯಲಾಗಿದೆ.
Bangalore defo needs more police check points 🤦♀️
*Enroute Bangalore International Airport pic.twitter.com/62i3WtpGyA
— Nabila Jamal (@nabilajamal_) December 17, 2023
ಇದನ್ನೂ ಓದಿ: 3000 ವರ್ಷಗಳಷ್ಟು ಹಳೆಯದಾದ ವಿಗ್ರಹದಲ್ಲಿ QR ಕೋಡ್ ಪತ್ತೆ; ಫೋಟೋ ವೈರಲ್
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ನಾಲ್ಕು ಯುವಕರ ವಿರುದ್ದ ಕೇಸು ದಾಖಲಾಗಿದೆ.ಸೆಕ್ಷನ್ 184,279, ಹಾಗೂ 283ರ ಅಡಿಯಲ್ಲಿ ಕಾರುಚಾಲಕ ಸಲ್ಮಾನ್ ಫಾರಿಸ್ (23), ಆತನ ಸ್ನೇಹಿತರಾದ ನಾಸಿಮ್ ಅಬ್ಬಾಸ್ (21), ಸಲ್ಮಾನುಲ್ ಫಾರಿಸ್ (20), ಮತ್ತು ಕೇರಳದ ಮೊಹಮ್ಮದ್ ನುಸೈಫ್ (21) ಪ್ರಕರಣ ದಾಖಲಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:19 pm, Tue, 19 December 23