ಹರಿದ್ವಾರ: ಏನಾದರೂ ಸಾಧಿಸಬೇಕು ಎಂಬ ಹಠವಿದ್ದರೆ ಅದಕ್ಕೆ ವಯಸ್ಸು ಅಡ್ಡಿಯಾಗಲಾರದು ಎಂಬ ಮಾತಿದೆ. 70 ವರ್ಷದ ವೃದ್ಧೆಯೊಬ್ಬರು ತಮ್ಮ ಧೈರ್ಯದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ವಯಸ್ಸಾದ ಮೇಲೆ ಎಲ್ಲರಿಗೂ ತೀರ್ಥಯಾತ್ರೆಗೆ ಹೋಗಬೇಕೆಂಬ ಆಸೆ ಸಹಜ. ಆದರೆ, ಸಾಹಸ ಕ್ರೀಡೆಗಳಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಈ 70 ವರ್ಷದ ಅಜ್ಜಿ ಹರಿದ್ವಾರದ (Haridwar) ಎತ್ತರದ ಸೇತುವೆಯಿಂದ ಗಂಗಾನದಿಗೆ ಹಾರಿ, ಅಲ್ಲಿನ ಪವಿತ್ರ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಈ ವೃದ್ಧೆ ಗಂಗಾ ನದಿಗೆ ಹಾರುವ ಮೊದಲು ಹರಿದ್ವಾರದ ಹರ್ ಕಿ ಪೌರಿ ಘಾಟ್‌ನಲ್ಲಿರುವ ಸೇತುವೆಯಿಂದ ಮುಂದೆ ಜಿಗಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.
अम्मा की छलांग .. ??
हरकी पैड़ी के पुल से गंगा नदी में छलांग लगाने वाली बुजुर्ग महिला बुजर्ग महिला पुल से गंगा में छलांग लगाकर आराम से तैरकर किनारे जाती हुई विडियो में दिख रही है। बुजुर्ग महिला की उम्र 70 साल के करीब की बताई जा रही है। ??#haridwar pic.twitter.com/IY9bDp7DAb
— Ashok Basoya (@ashokbasoya) June 28, 2022
ನದಿಗೆ ಹಾರುವಾಗ ಸುತ್ತಲೂ ಇದ್ದ ನೋಡುಗರು ಆ ಅಜ್ಜಿಯನ್ನು ಹುರಿದುಂಬಿಸುತ್ತಾರೆ. ಆಗ ಸೇತುವೆಯಿಂದ ಹಾರಿದ ಅಜ್ಜಿ ತುಂಬಿ ಹರಿಯುತ್ತಿದ್ದ ಗಂಗಾ ನದಿಯ ಪ್ರವಾಹದ ಉದ್ದಕ್ಕೂ ಈಜುತ್ತಾ, ತನ್ನ ಪವಿತ್ರ ಸ್ನಾನವನ್ನು ಆನಂದಿಸುತ್ತಾರೆ.
Mere mein Himmat Nahin Hai Itni unchai se kudna ???
— Md Amanullah (@MdAmanu19127546) June 29, 2022
ಈ ವಿಡಿಯೋವನ್ನು ಛತ್ತೀಸ್‌ಗಢ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಬಸೋಯಾ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆಕೆಯ ದೃಢ ನಿರ್ಧಾರಕ್ಕೆ ಜನ ಶಾಕ್ ಆಗಿದ್ದಾರೆ.
दादी ने जो किया वह रोमांचकारी होने साथ ख़तरनाक भी हो सकता है।
कृपया ऐसा बिलकुल न करें।— SACHIN KAUSHIK (@upcopsachin) June 28, 2022
ಅನೇಕರು ಅವಳ ಆತ್ಮವನ್ನು ಶ್ಲಾಘಿಸಿದ್ದಾರೆ. ಈ ವಯಸ್ಸಿನಲ್ಲೂ ಹೆದರದೆ ಅಷ್ಟು ಎತ್ತರದಿಂದ ಜಿಗಿದ ಅಜ್ಜಿಯ ಹಠಕ್ಕೆ ಅನೇಕರು ಅಭಿನಂದಿಸಿದ್ದಾರೆ.
Published On - 1:05 pm, Wed, 29 June 22