Viral Video : ಒಂದು ಇಲ್ಲದಿದ್ದರೆ ಇನ್ನೊಂದು ವರವೆಂಬಂತೆ ಇದ್ದೇ ಇರುತ್ತದೆ ಎನ್ನುವುದಕ್ಕೆ ಈ ಕುರುಡ ಬಾಲಕನೇ ಸಾಕ್ಷಿ. ‘ಊಪರ್ ಖುದಾ ಆಸಮಾನ್ ನೀಚೆ’ ಇದು ಕಚ್ಛೆ ಧಾಗೆ ಸಿನೆಮಾದಲ್ಲಿ ಸುಖವಿಂದರ್ ಸಿಂಗ್ ಹಾಡಿರುವ ಹಾಡು. ಅಜಯ್ ದೇವಗನ್ ನಾಯಕನಟರಾಗಿ ನಟಿಸಿದ್ದಾರೆ. ಈಗ ವೈರಲ್ ಆಗುತ್ತಿರುವ ವಿಡಿಯೋ ಗಮನಿಸಿ, ಈ ಬಾಲಕನ ಕಂಠಸಿರಿ ನಿಮ್ಮನ್ನು ಮತ್ತೆ ಮತ್ತೆ ಈ ಹಾಡನ್ನು ಕೇಳುವಂತೆ ಮಾಡುತ್ತದೆ. ಇಡೀ ದಿನ ಇದೇ ಗುಂಗಿನಲ್ಲಿ ತೇಲುವಂತೆ ಮಾಡುತ್ತದೆ. ನೆಟ್ಟಿಗರು ಈ ಹುಡುಗನ ಶಾರೀರಕ್ಕೆ ಭಲೆ ಎನ್ನುತ್ತಿದ್ದಾರೆ.
Amazing talent – Watch Video the song ‘Oopar Khuda Aasman Neeche’ Blind Kid Singing #AjayDevgn? pic.twitter.com/u2tTWathSX
ಇದನ್ನೂ ಓದಿ— Lalit Tiwari (@lalitforweb) February 3, 2023
47 ಸೆಕೆಂಡುಗಳ ಈ ವಿಡಿಯೋ ನಿಮ್ಮನ್ನು 90ರ ದಶಕಕ್ಕೆ ಕರೆದೊಯ್ಯುತ್ತದೆ. ಈ ಹುಡುಗನಿಗೆ ಒಳ್ಳೆಯ ಅವಕಾಶಗಳು ಸಿಗಬೇಕು. ನಮ್ಮ ನಡುವೆ ಇಂಥ ಸಾಕಷ್ಟು ಪ್ರತಿಭಾವಂತ ಅಂಧಮಕ್ಕಳು ಇದ್ದಾರೆ. ಆದರೆ ಅವರೆಲ್ಲ ಬೀದಿಬದಿಯ ಕಲಾವಿದರಾಗಿ ಉಳಿಯಬೇಕಾಗುತ್ತದೆ ಇದು ದುರಾದೃಷ್ಟ ಎಂದು ನೆಟ್ಟಿಗರು ಮರಗುತ್ತಿದ್ಧಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ಅದ್ಭುತವಾದ ಕಂಠ, ಇವನಿಗೆ ಒಳ್ಳೆಯ ಮಾರ್ಗದರ್ಶನ, ಸೌಲಭ್ಯಗಳು ದೊರೆಯಬೇಕು ಎಂದು ಅನೇಕರು ಹೇಳುತ್ತಿದ್ದಾರೆ. ಇದು ಯಾವ ಊರಿನಲ್ಲಿ ವಿಡಿಯೋ ಮಾಡಿದ್ದು ಎಂದು ಕೆಲವರು ಕೇಳಿದ್ದಾರೆ. ಈ ಹುಡುಗ ಎಲ್ಲಿ ವಾಸಿಸುತ್ತಾನೆ ಎಂದು ಇನ್ನೂ ಕೆಲವರು ಕೇಳಿದ್ದಾರೆ.
ಈ ವಿಡಿಯೋ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:27 pm, Sat, 4 February 23