viral video: ಕೊಳದಲ್ಲಿ ಮೊಸಳೆಯನ್ನು ತಬ್ಬಿಕೊಂಡು ಡ್ಯಾನ್ಸ್ ಮಾಡಿದ ಭೂಪ; ಶಾಕಿಂಗ್ ವಿಡಿಯೋ ವೈರಲ್

ಈ ವಿಡಿಯೋ ಫ್ಲೋರಿಡಾದಲ್ಲಿ ಮಾತ್ರ ನೀವು ಮೊಸಳೆಯೊಂದಿಗೆ ನೃತ್ಯ ಮಾಡುವ ವ್ಯಕ್ತಿಯನ್ನು ನೋಡುತ್ತೀರಿ ಎಂದು ಬರೆಯಲಾಗಿದೆ. ಈ ವಿಡಿಯೋವನ್ನು ಬಿಚ್ ರಿಜೆಕ್ಟ್ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

viral video: ಕೊಳದಲ್ಲಿ ಮೊಸಳೆಯನ್ನು ತಬ್ಬಿಕೊಂಡು ಡ್ಯಾನ್ಸ್ ಮಾಡಿದ ಭೂಪ; ಶಾಕಿಂಗ್ ವಿಡಿಯೋ ವೈರಲ್
ಮೊಸಳೆ ಜೊತೆ ಡ್ಯಾನ್ಸ್ ಮಾಡುತ್ತಿರುವ ಮನುಷ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Mar 31, 2022 | 10:18 AM

ನೀವು ಮತ್ತು ನಾವು ಕಾಡು ಸರೀಸೃಪಗಳನ್ನು ನೋಡಿ ಮಾರು ದೂರ ಹೋಡಿ ಹೋಗುತ್ತೇವೆ. ಆದರೆ ಇಲ್ಲಿ ಒಬ್ಬ ವ್ಯಕ್ತಿ ಮೊಸಳೆ (Crocodile) ಯನ್ನು ತಬ್ಬಿಕೊಂಡು ಕೊಳದಲ್ಲಿ ಡ್ಯಾನ್ಸ್​ ಮಾಡುತ್ತಿರುವಂತಹ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಮನುಷ್ಯ ತನ್ನ ಜೀವನವನ್ನು ಮೊಸಳೆ ಜೊತೆ ಕಳೆಯುತ್ತಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮನುಷ್ಯ ನೀರಿನಲ್ಲಿ ಮೊಸಳೆಯೊಂದಿಗೆ ಡ್ಯಾನ್ಸ್ ಮಾಡುತ್ತ, ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ. ವೈರಲ್ ವಿಡಿಯೋದಲ್ಲಿ, ವ್ಯಕ್ತಿ ಸೊಂಟದಾಳದಷ್ಟು ನೀರಿನಲ್ಲಿ ಕೊಳದ ಮಧ್ಯದಲ್ಲಿ ಮೊಸಳೆಯೊಂದದಿಗೆ ತಬ್ಬಿಕೊಂಡು ನೃತ್ಯ ಮಾಡುತ್ತಾನೆ. ಮನುಷ್ಯನು ನಿಜವಾಗಿಯೂ ಅಪಾಯಕಾರಿ ಸರೀಸೃಪಕ್ಕೆ ಹತ್ತಿರವಾಗಿದ್ದೇನೆ ಎಂದು ಹೆದರುವುದಿಲ್ಲ ಮತ್ತು ಮೊಸಳೆ ಕೂಡ ನಿರಾಳವಾಗಿದೆ. ಮೊಸಳೆ ಮನುಷ್ಯನ ಸಹವಾಸದಲ್ಲಿ ಆರಾಮದಾಯಕವಾಗಿದ್ದು, ಆತನಿಗೆ ಯಾವುದೇ ಹಾನಿ ಮಾಡುವುದಿಲ್ಲ.

ಈ ವಿಡಿಯೋ ಫ್ಲೋರಿಡಾದಲ್ಲಿ ಮಾತ್ರ ನೀವು ಮೊಸಳೆಯೊಂದಿಗೆ ನೃತ್ಯ ಮಾಡುವ ವ್ಯಕ್ತಿಯನ್ನು ನೋಡುತ್ತೀರಿ ಎಂದು ಬರೆಯಲಾಗಿದೆ. ಈ ವಿಡಿಯೋವನ್ನು ಬಿಚ್ ರಿಜೆಕ್ಟ್ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಶೇರ್ ಆದ ಕೆಲವೇ ದಿನಗಳಲ್ಲಿ ವೀಡಿಯೋ 14K ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಿಡಿಯೋ ನೋಡಿದ ನೆಟಿಗರು ಶಾಕ್ ಆಗಿದ್ದು, ಈ ವಿಡಿಯೋ ಅಸಲಿಯೇ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ವಿಡಿಯೋವನ್ನು ನೋಡಿ ಉಲ್ಲಾಸದಾಯಕವಾಗಿದೆ ಎಂದಿದ್ದಾರೆ. ಜೊತೆಗೆ ತಮಾಷೆಯ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, ನೀವು ಅವಳನ್ನು ಮೊಸಳೆಯೆಂದು ಪ್ರೀತಿಸುತ್ತೀರಾ ಅಥವಾ ಗೆಳತಿಯಾಗಿನಾ? ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರನು ಮದುವೆ ಯಾವಾಗ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಜಸ್ಟ್ ವಾವ್, ಉತ್ತಮ ಹೊಂದಾಣಿಕೆ ಎಂದು ಬರೆದಿದ್ದಾರೆ.

ಇದನ್ನೂ ಓದಿ;

viral video: ಇದು ಮುಖವಾಡವೋ ಅಥವಾ ಗಡ್ಡವೋ..! ಗೊಂದಕ್ಕೀಡಾದ ಸಭಾಪತಿ ವೆಂಕಯ್ಯ ನಾಯ್ಡು

Viral News: ಪ್ರೀತಿಯ ನಾಯಿಯ ನೆನಪಿನಲ್ಲಿ ಅಮೃತಶಿಲೆಯಿಂದ ದೇವಸ್ಥಾನ ಕಟ್ಟಿದ ವೃದ್ಧ!