ಕಾಫಿ ಡೇಟ್​ ವಿಥ್​ ಕ್ಯಾಟ್​! ನ್ಯೂಯಾರ್ಕ್​ನಲ್ಲಿ ನಡೆದ ಹೀಗೊಂದು ಮುದ್ದಾದ ಪ್ರಸಂಗ

| Updated By: ಶ್ರೀದೇವಿ ಕಳಸದ

Updated on: Jan 27, 2023 | 5:28 PM

Dating : ಗೆಳತಿಯೊಂದಿಗೆ, ಗೆಳೆಯನೊಂದಿಗೆ ಕಾಫಿ ಡೇಟ್​ ಹೋಗುವುದು ಸಹಜ. ಆದರೆ ಬೆಕ್ಕುಗಳೊಂದಿಗೆ? ಇಂಥ ಸಭ್ಯಸ್ಥ ಬೆಕ್ಕುಗಳನ್ನು ಈತನಕ ಕಂಡೇ ಇಲ್ಲ ಎಂದು ಅಚ್ಚರಿಗೆ ಒಳಗಾಗಿದೆ ನೆಟ್​ಮಂದಿ. ನೋಡಿ ಈ ಮುದ್ದಾದ ವಿಡಿಯೋ.

ಕಾಫಿ ಡೇಟ್​ ವಿಥ್​ ಕ್ಯಾಟ್​! ನ್ಯೂಯಾರ್ಕ್​ನಲ್ಲಿ ನಡೆದ ಹೀಗೊಂದು ಮುದ್ದಾದ ಪ್ರಸಂಗ
ಮೂರು ಬೆಕ್ಕುಗಳೊಂದಿಗೆ ಕಾಫಿ ಡೇಟ್​ ಗೆ ಬಂದಾಗ
Follow us on

Viral Video : ಬೆಕ್ಕನ್ನು ಪ್ರೀತಿಸುವವರ ಲೋಕವೇ ಬೇರೆ. ಅಲ್ಲಿ ಬೆಕ್ಕುಗಳಿಗೆ ಬಿಟ್ಟು ಬೇರೆ ಯಾರಿಗೂ ಅವರು ಜೀವನದಲ್ಲಿ ಅಷ್ಟೊಂದು ಆದ್ಯತೆ ಕೊಡಲಾರರು. ನೀವು ಬೆಕ್ಕುಪ್ರಿಯರಾಗಿದ್ದರೆ ಖಂಡಿತ ಅನುಭವಿಸಿರುತ್ತೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ನ್ಯೂಯಾರ್ಕ್​ನ ಈ ವ್ಯಕ್ತಿ ತನ್ನೊಂದಿಗೆ ಈ ಮೂರು ಬೆಕ್ಕುಗಳನ್ನು ಕಾಫಿ ಡೇಟ್​ಗೆ ಕರೆದುಕೊಂಡು ಹೋಗಿದ್ದಾನೆ. ನೆಟ್ಟಿಗರು ಈ ಮುದ್ದಾದ ಈ ವಿಡಿಯೋ ನೋಡಿ ಕಳೆದುಹೋಗುತ್ತಿದ್ದಾರೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಷ್ಟೊಂದೆಲ್ಲಾ ಮನುಷ್ಯರನ್ನು ಬಿಟ್ಟು ಈ ವ್ಯಕ್ತಿ ಯಾಕೆ ಬೆಕ್ಕುಗಳ ಜೊತೆ ಕಾಫಿ ಡೇಟ್​ಗೆ ಹೋಗಿರುವುದು? ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಮತ್ತೊಮ್ಮೆ ಮೇಲಿನ ಪ್ಯಾರಾ ಓದಿಕೊಳ್ಳಿ! ಒಂದು ಸ್ಪಾಂಜ್​ ಕೇಕ್,​ ಇನ್ನೊಂದು ಮೋಚಾ, ಮತ್ತೊಂದು ಡೋನರ್. ಈ ಮೂರೂ ಬೆಕ್ಕುಗಳು ಹೀಗೆ ಕಾಫಿ ಶಾಪ್​ಗೆ ಹೋಗಿ ಹೀಗೆ ಸೌಮ್ಯರೀತಿಯಲ್ಲಿ ಮಧುರವಾಗಿ ಕಾಫಿ, ತಿಂಡಿಯನ್ನು ಸವಿಯುತ್ತಿರುವುದನ್ನು ನೋಡಿದರೆ, ಛೆ ನಾನೇ ಆ ಬೆಕ್ಕಾಗಿ ಹುಟ್ಟಬಾರದಿತ್ತಾ ಎಂದು ಅನ್ನಿಸದೇ ಇರದು.

ಇದನ್ನೂ ಓದಿ : ಕಂಡೀರಾ ಬಿಳಿನವಿಲ ಸೊಬಗ; ವೈರಲ್ ಆಗಿರುವ ಈ ವಿಡಿಯೋ ನೋಡಿ

ಜನವರಿ 14ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ 5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ. ನಿಮ್ಮೊಂದಿಗೆ ನನಗೂ ಒಂದು ಸೀಟ್ ಕಾಯ್ದಿರಿಸಿ ಪ್ಲೀಸ್ ಎಂದಿದ್ದಾರೆ ಒಬ್ಬರು. ಪ್ರ್ಯಾಮ್​ನಿಂದ ಜಿಗಿದು ಹೊರೋಡುವುದಿಲ್ಲವೆ? ಹೇಗೆ ಇವುಗಳನ್ನು ನಿಭಾಯಿಸಿದ್ದೀರಿ! ನಿಮ್ಮ ತಾಳ್ಮೆಗೆ ಶರಣು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ನನ್ನ ಮಗನೊಂದಿಗೆ ಈ ವಿಡಿಯೋ ನೋಡಿ ನಗುತ್ತಿದ್ದೇನೆ. ಇವುಗಳನ್ನು ಅದು ಹೇಗೆ ಸಾರ್ವಜನಿಕ ಸ್ಥಳದಲ್ಲಿ ನಿಭಾಯಿಸುತ್ತೀರಿ ಎಂದು ಮಗದೊಬ್ಬರು ಕೇಳಿದ್ದಾರೆ. ಇವು ಯಾವ ತಳಿಯ ಬೆಕ್ಕುಗಳು? ನೀವು ಆಗಾಗ ಈ ಬೆಕ್ಕುಗಳನ್ನು ಕಾಫಿ ಡೇಟ್​ಗೆ ಕರೆದುಕೊಂಡು ಬರುತ್ತೀರಾ? ಬೆಕ್ಕುಗಳಿಗೆ ಕಾಫಿ, ಸ್ನ್ಯಾಕ್ಸ್​ ಕೊಡಬಹುದೆ? ಅವುಗಳ ದೇಹಕ್ಕೆ ತೊಂದರೆಯಾಗುವುದಿಲ್ಲವೆ? ಎಂದು ಅನೇಕರು ಕೇಳಿದ್ದಾರೆ. ಇಷ್ಟು ಸಭ್ಯಸ್ಥ ಬೆಕ್ಕುಗಳನ್ನು ನಾನು ಈತನಕ ನೋಡಿಯೇ ಇಲ್ಲ. ಅದು ಹೇಗೆ ತರಬೇತಿ ಕೊಟ್ಟಿರಿ, ನಮಗೂ ಸ್ವಲ್ಪ ಹೇಳಿ ಎಂದಿದ್ದಾರೆ ಕೆಲವರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ