ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Jan 25, 2023 | 3:46 PM

Taj Mahal : ತಾಜ್​ಮಹಲ್​ ಎಂದರೆ ಕಲಾವಿದರಿಗೆ ಶಾಶ್ವತ ಸೆಳೆತ. ಅದರ ಪ್ರತಿಕೃತಿಗಳನ್ನು ತಯಾರಿಸುವ, ರಚಿಸುವ ಸಾಹಸವನ್ನು ಮೇಮೇಲೆ ಎಳೆದುಕೊಳ್ಳುವವರೇ ಜಾಸ್ತಿ. ಇದೀಗ ಈ ಕಲಾವಿದನ ಕೈಚಳಕ ಹೇಗಿದೆ ನೋಡಿ.

ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್
ಇಂಗ್ಲಿಷ್​ ಅಕ್ಷರಗಳಲ್ಲಿ ತಾಜಮಹಲ್​ ರಚಿಸುತ್ತಿರುವ ಕಲಾವಿದ
Follow us on

Viral Video : ಜಗದ್ವಿಖ್ಯಾತ ತಾಜ್​ಮಹಲ್​ ಅಂದಿನಿಂದ ಇಂದಿನವರೆಗೂ ಸಾಮಾನ್ಯರನ್ನೂ, ಕಲಾರಸಿಕರನ್ನೂ ಸೆಳೆಯುತ್ತಲೇ ಇರುವಂಥ ಭವ್ಯಸ್ಮಾರಕ. ಅನೇಕ ಕಲಾವಿದರು ಇದರ ಪ್ರತಿಕೃತಿಯನ್ನು ಲೋಹದಲ್ಲಿ, ಶಿಲೆಯಲ್ಲಿ, ಮಣ್ಣಿನಲ್ಲಿ, ಚಾಕ್​ಪೀಸಿನಲ್ಲಿ, ನಾಣ್ಯದಲ್ಲಿ, ಬೇಡವಾದ ವಸ್ತುಗಳಲ್ಲಿ ಹೀಗೆ ಪುನರ್​ಸೃಷ್ಟಿಸುತ್ತಲೇ ಇರುತ್ತಾರೆ. ಪ್ರೀತಿಯ ಸ್ಮಾರಕ ಇಂದು ಎಂದಿಗೂ ಅದ್ಭುತವೇ. ಇದರ ಸೆಳೆತದಿಂದ ತಪ್ಪಿಸಿಕೊಳ್ಳುವುದು ಕಲಾವಿದರಿಗಂತೂ ಕಡುಕಷ್ಟವೇ.

ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಯುವ ತಾಜಮಹಲ್​ (TAJMAHAL) ಎಂದು ಇಂಗ್ಲಿಷ್​ನಲ್ಲಿ ಬರೆದು ಆ ಅಕ್ಷರಗಳನ್ನು ಆಧಾರವಾಗಿಟ್ಟುಕೊಂಡು ತಾಜ್​ಮಹಲ್​ ಚಿತ್ರವನ್ನು ರಚಿಸಿದ್ದಾನೆ. ಇವನ ಸೃಜನಶೀಲತೆ ಮತ್ತು ಕೌಶಲ್ಯವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : ಬೇಟೆಯಾಡಲು ಪ್ರಯತ್ನಿಸಿದ ಮೊಸಳೆಯನ್ನು ದಡಕ್ಕೆ ಎಳೆದು ತಂದ ಎಮ್ಮೆಯ ವಿಡಿಯೋ ವೈರಲ್

35,000ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿರುವ ಈ ಕಲಾವಿದನ ಪ್ರೊಫೈಲಿನಲ್ಲಿ ಹೀಗೆ ಚಾಕ್​ಪೀಸ್​ನಿಂದ ಬೋರ್ಡಿನ ಮೇಲೆ ಬಿಡಿಸಿದ ಸಾಕಷ್ಟು ಕೌಶಲಯುತ ಚಿತ್ರಗಳಿವೆ. ಪ್ರಸ್ತುತ ವಿಡಿಯೋ ಅನ್ನು ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ

ಹಲವಾರು ಜನರು ಈ ವಿಡಿಯೋ ನೋಡಿ ಕಲಾವಿದರ ಚಾಣಾಕ್ಷತೆಗೆ ಬೆರಗಾಗಿದ್ದಾರೆ. ಇಂಥ ಆಲೋಚನೆ ಬಹುಶಃ ಈತನಕ ಯಾರಿಗೂ ಬಂದಿರಲಿಲ್ಲವೇನೋ, ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಒಬ್ಬರು. ನಿಮ್ಮ ಯೋಚನಾ ಶಕ್ತಿ ಅಪರೂಪದ್ದು, ನೀವು ಇನ್ನಷ್ಟು ಸಾಧನೆ ಮಾಡುವಂಥವರಾಗಿ ಎಂದಿದ್ದಾರೆ ಮತ್ತೊಬ್ಬರು. ನಿಮಗಿರುವ ಪ್ರತಿಭೆಯನ್ನು ಹೀಗೆ ಪರಿಶ್ರಮದಿಂದ ಪೋಷಿಸಿಕೊಂಡು ಹೋಗಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ಅಪ್ಪ ಅಮ್ಮ ಇಲ್ಲದಿದ್ರೆ ಸತ್ತೇ ಹೋಗ್ತಿದ್ವಿ; ಚಿರತೆಯಿಂದ ಕಾಪಾಡಿದ ಮುಳ್ಳುಹಂದಿಗಳ ವಿಡಿಯೋ ವೈರಲ್

ಬಹುಶಃ ನಮ್ಮ ಭಾರತದಲ್ಲಿ ಇಂಥ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಎಲ್ಲರೂ ಮುನ್ನೆಲೆಯಲ್ಲಿ ಬರಲಾಗುವುದಿಲ್ಲ ಎನ್ನುವುದೇ ವಿಷಾದನೀಯ ಎಂದಿದ್ದಾರೆ ಇನ್ನೂ ಒಬ್ಬರು. ಹೀಗೆ ಸೋಶಿಯಲ್​ ಮೀಡಿಯಾಗಷ್ಟೇ ನಿನ್ನ ಕಲೆ ಮೀಸಲಾಗಬಾರದು, ಈ ಚೌಕಟ್ಟನ್ನು ವಿಸ್ತರಿಸಿಕೋ ಎಂದು ಒಬ್ಬರು ಸಲಹೆ ನೀಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:46 pm, Wed, 25 January 23