ದೆಹಲಿ: ಏರ್ ಇಂಡಿಯಾ ವಿಮಾನವು ಫ್ಲೈಓವರ್ ಕೆಳಗೆ ಸಿಲುಕೊಂಡಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿ – ಗುರಗಾಂವ್ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸುಮಾರು 40 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ ಏರ್ ಇಂಡಿಯಾ ವಿಮಾನವು ರಸ್ತೆಯ ಒಂದು ಬದಿಯಲ್ಲಿ ಸಿಲುಕೊಂಡಿರುವುದು ಕಂಡು ಬರುತ್ತದೆ. ಇನ್ನೊಂದು ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುವುದನ್ನು ನೋಡಬಹುದು.
ಫ್ಲೈಓವರ್ ಕೆಳಗೆ ಸಿಲುಕಿಕೊಂಡಿರುವ ವಿಮಾನದ ದೃಶ್ಯ ವೈರಲ್ ಆಗುತ್ತಿದ್ದಂತೆಯೇ, ಇದರಿಂದ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆಯು ಮಾಹಿತಿ ನೀಡಿದೆ. ವಿಮಾನವನ್ನು ಏರ್ ಇಂಡಿಯಾದಿಂದ ಖರೀದಿಸಿ ಅದರ ಹೊಸ ಮಾಲೀಕರಿಂದ ವಿಮಾನವನ್ನು ಸಾಗಿಸಲಾಗುತ್ತಿದೆ ಎಂದು ಹೇಳಿದೆ.
ಈ ವಿಮಾನವನ್ನು ಮಾರಾಟ ಮಾಡಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
#WATCH An @airindiain plane ✈️ (not in service) got stuck under foot over bridge. Can anyone confirm the date and location?
The competition starts now? pic.twitter.com/pukB0VmsW3— Ashoke Raj (@Ashoke_Raj) October 3, 2021
ಇದನ್ನೂ ಓದಿ:
Viral Video: ನೀರು ಚೆಲ್ಲಿದ್ದ ನೆಲದ ಮೇಲೆ ವ್ಯಕ್ತಿಯ ಸ್ಟಂಟ್; ಆಮೇಲೇನಾಯ್ತು? ವಿಡಿಯೋ ನೋಡಿ
Viral Video: ಅರೆರೇ, ಇದೇನಿದು? ಬೆಕ್ಕು ಅಡುಗೆ ಮಾಡುತ್ತದೆಯೇ? ಅಚ್ಚರಿಯ ವಿಡಿಯೊ ಇಲ್ಲಿದೆ
Published On - 8:54 am, Mon, 4 October 21