ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳು ಇನ್ನೊಬ್ಬರ ಜೀವಕ್ಕೆ ಕಂಟಕವಾಗುತ್ತದೆ. ಗೊತ್ತೋ ಗೊತ್ತಿಲ್ಲದೇ ಮಾಡುವ ಕೆಲಸದಿಂದ ವ್ಯಕ್ತಿಯ ಪ್ರಾಣವು ಹೋಗಬಹುದು. ಹೌದು, ವಿಮಾನದಿಂದ ಕೆಳಗೆ ಇಳಿಯುತ್ತಿದ್ದ ಸಂದರ್ಭದಲ್ಲಿ ಸ್ಟೆಪ್‌ಲ್ಯಾಡರ್ ಅನ್ನು ಮುಂದಕ್ಕೆ ತಳ್ಳಿದ ಪರಿಣಾಮ ಸಿಬ್ಬಂದಿಯೊಬ್ಬರು ವಿಮಾನದಿಂದ ಕೆಳಗೆ ಬಿದ್ದಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆಯು ಮೇ 16 ರಂರು ಇಂಡೋನೇಷ್ಯಾದ ಜಕಾರ್ತ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದೆ.
ಈ ವಿಡಿಯೋವನ್ನು ನೋಡಿದಾಗ ವಿಮಾನದಿಂದ ವ್ಯಕ್ತಿ ಹೊರಬರುತ್ತಿದ್ದಂತೆಯೇ ಕೆಳಗಡೆ ಇದ್ದಂತಹ ಇಬ್ಬರು ಕಾರ್ಮಿಕರು ಸ್ಟೆಪ್‌ಲ್ಯಾಡರ್ ಅನ್ನು ಮುಂದಕ್ಕೆ ತಳ್ಳಿದ್ದು, ಈ ಘಟನೆ ನಡೆಯಲು ಕಾರಣವಾಗಿದೆ. ಆದರೆ ಅದೃಷ್ಟವಶಾತ್ ಕೆಳಗೆ ಬಿದ್ದ ಸಿಬ್ಬಂದಿಯು ಪ್ರಾಣಾಪಾಯದಿಂದಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಧಗಧಗನೆ ಹೊತ್ತಿ ಉರಿದ ಬುಲೆಟ್ ಬೈಕ್, ಬೆಂಕಿ ನಂದಿಸುವಾಗ ಪೆಟ್ರೋಲ್ ಟ್ಯಾಂಕ್ ಸ್ಫೋಟ, 10 ಮಂದಿಗೆ ಗಾಯ
ಈ ವಿಡಿಯೋವನ್ನು ದ್ರಶಶಿ ಶೇಖರ್ ಸಿಂಗ್ ಎನ್ನುವ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕೆಳಗಡೆಯಿದ್ದ ಕಾರ್ಮಿಕರು ಸ್ಟೆಪ್‌ಲ್ಯಾಡರ್ ಅನ್ನು ಮುಂದಕ್ಕೆ ತಳ್ಳಿದ್ದಾರೆ. ಆದರೆ ವಿಮಾನದ ಒಳಗಡೆಯಿದ್ದ ಸಿಬ್ಬಂದಿಯು ಮೆಟ್ಟಿಲುಯಿದೆ ಎಂದುಕೊಂಡು ಕಾಲಿಟ್ಟಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋವನ್ನು ಐದು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ